ರೈತರು ಹೋರಾಟ ಅಂತ್ಯಗೊಳಿಸಿ ಮಾತುಕತೆಗೆ ಬರಬೇಕೆಂದ ಕೇಂದ್ರ ಸರ್ಕಾರ
ದೇಶವ್ಯಾಪಿ ನಡೆಯುತ್ತಿರುವ ರೈತ ಹೋರಾಟದ ಕಾವು ಕೊನೆಗೆ ಕೇಂದ್ರ ಸರ್ಕಾರಕ್ಕೆ ತಟ್ಟಿದ್ದು, ಈಗ ರೈತರಿಗೆ ತಮ್ಮ ಹೋರಾಟವನ್ನು ಕೊನೆಗೊಳಿಸಿ ಮಾತುಕತೆಗೆ ಬರಬೇಕೆಂದು ಮನವಿ ಮಾಡಿಕೊಂಡಿದೆ.ಮುಂದಿನ ವಾರ ರೈತರಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಆಹ್ವಾನ ನೀಡಿದ್ದಾರೆ.
ನವದೆಹಲಿ: ದೇಶವ್ಯಾಪಿ ನಡೆಯುತ್ತಿರುವ ರೈತ ಹೋರಾಟದ ಕಾವು ಕೊನೆಗೆ ಕೇಂದ್ರ ಸರ್ಕಾರಕ್ಕೆ ತಟ್ಟಿದ್ದು, ಈಗ ರೈತರಿಗೆ ತಮ್ಮ ಹೋರಾಟವನ್ನು ಕೊನೆಗೊಳಿಸಿ ಮಾತುಕತೆಗೆ ಬರಬೇಕೆಂದು ಮನವಿ ಮಾಡಿಕೊಂಡಿದೆ.ಮುಂದಿನ ವಾರ ರೈತರಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಆಹ್ವಾನ ನೀಡಿದ್ದಾರೆ.
"ರೈತರೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಯಾವಾಗಲೂ ಸಿದ್ಧವಾಗಿದೆ. ಡಿಸೆಂಬರ್ 3 ರಂದು ಮತ್ತೊಂದು ಸುತ್ತಿನ ಮಾತುಕತೆಗೆ ನಾವು ರೈತರ ಸಂಘಟನೆಗಳನ್ನು ಆಹ್ವಾನಿಸಿದ್ದೇವೆ. COVID-19 ಮತ್ತು ಚಳಿಗಾಲದ ದೃಷ್ಟಿಯಿಂದ ಆಂದೋಲನವನ್ನು ಬಿಡುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ" ಎಂದು ತೋಮರ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.
ರೈತರ ಎರಡು ದಿನಗಳ ತೀವ್ರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಕೊನೆಗೂ ರೈತರಿಗೆ ದೆಹಲಿಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದೆ.iಇದಕ್ಕೂ ಮೊದಲು ರೈತರು ದೆಹಲಿ ಪ್ರವೇಶಿಸದಂತೆ ವಿವಿಧ ಪ್ರವೇಶ ಕೇಂದ್ರಗಳಲ್ಲಿ ನೂರಾರು ಅಧಿಕಾರಿಗಳನ್ನು ನಿಯೋಜಿಸಿದ್ದರು, ಮರಳು ತುಂಬಿದ ಲಾರಿಗಳನ್ನು ನಿಲ್ಲಿಸಿ, ಮುಳ್ಳುತಂತಿ ಅಡ್ಡದಾರಿಗೆ ಹಾಕಿದರು, ಆದರೆ ಇದ್ಯಾವುದಕ್ಕೂ ಜಗ್ಗದ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಈ ವರ್ಷದ ಆರಂಭದಲ್ಲಿ ಜಾರಿಗೆ ಬಂದ ಕಾನೂನುಗಳಿಂದ ರೈತರು ತೀವ್ರ ಅಸಮಾಧಾನಗೊಂಡಿದ್ದಾರೆ.ಈ ಎಲ್ಲ ಕಾನೂನುಗಳು ಕಾರ್ಪೋರೆಟ್ ಹಿತಾಸಕ್ತಿಯನ್ನು ಕಾಪಾಡುತ್ತವೆ ಹೊರತು ರೈತರ ಹಿತವನ್ನು ಕಾಯುವುದಿಲ್ಲ ಎಂದು ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೂತನ ಕಾಯ್ದೆಗಳನ್ನು ಕೃಷಿ ಕ್ಷೇತ್ರದ ಸಂಪೂರ್ಣ ಪರಿವರ್ತನೆ ಎಂದು ಶ್ಲಾಘಿಸಿ, ಇದು ಹತ್ತು ಲಕ್ಷ ರೈತರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಹೆಚ್ಚು ಅಗತ್ಯವಿರುವ ಹೂಡಿಕೆ ಮತ್ತು ಆಧುನೀಕರಣವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದರು.