ಕೇಂದ್ರ ಬಜೆಟ್ 2018: ಸ್ಮಾರ್ಟ್ ಫೋನ್ ಬೆಲೆ ದುಬಾರಿ ಸಾಧ್ಯತೆ?
ತಜ್ಞರ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಸ್ಮಾರ್ಟ್ಫೋನ್ ಬೆಲೆಗಳು ಏರಿಕೆಯಾಗಲಿದೆ.
ಮುಂದಿನ ಕೆಲವು ದಿನಗಳಲ್ಲಿ ಸ್ಮಾರ್ಟ್ಫೋನ್ ಬೆಲೆಗಳು ಏರಿಕೆಯಾಗಲಿದೆ. 2018ರ ಕೇಂದ್ರ ಬಜೆಟ್ ಪರಿಣಾಮವು ಸ್ಮಾರ್ಟ್ ಫೋನ್'ಗಳ ಮೇಲೆ ಬೀಳಲಿದ್ದು, ಸ್ಮಾರ್ಟ್ ಫೋನ್'ಗಳು ಇನ್ನೂ ದುಬಾರಿಯಾಗುವ ಸಾಧ್ಯತೆ ಇದೇ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಮುದ್ರಿತ ಸರ್ಕ್ಯೂಟ್ ಬೋರ್ಡ್ಗಳು, ಕ್ಯಾಮೆರಾ ಮಾಡೆಲ್'ಗಳು ಮತ್ತು ಡಿಸ್ಪ್ಲೇ ಗಳಲ್ಲಿ ಕಸ್ಟಮ್ ಚಾರ್ಜ್ ಹೇರುವ ಸಾಧ್ಯತೆಗಳಿವೆ ಎಂದು ವರದಿಯೊಂದು ತಿಳಿಸಿದೆ. ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ವಸ್ತುಗಳು, ವಿದೇಶಿ ಬಿಡಿ ಭಾಗಗಳ ಆಮದಿನ ಮೇಲೆ ಕಸ್ಟಮ್ ಚಾರ್ಜ್ ಭಾರಿ ಏರಿಕೆಯಾಗಲಿದೆ ಎಂದು ಊಹಿಸಲಾಗುತ್ತಿದೆ.
ಸ್ಥಳೀಯ ಎಲೆಕ್ಟ್ರಾನಿಕ್ಸ್ ಕಂಪೆನಿಗಳನ್ನು ಪ್ರೋತ್ಸಾಹಿಸಲು ಸರ್ಕಾರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸರ್ಕಾರವು ಸ್ಮಾರ್ಟ್ ಫೋನ್ಗಳಲ್ಲಿ 15% ಮೂಲಭೂತ ಕಸ್ಟಮ್ಸ್ ತೆರಿಗೆಯನ್ನು ಹೆಚ್ಚಿಸಿದೆ. ಆ ಶೇಕಡಾ ಹೆಚ್ಚಳ ಸೂಚನೆಗಳು ಈ ವರ್ಷವೂ ಮರುಕಳಿಸಬಹುದು ಎಂದು ಪರಿಣಿತರು ಊಹಿಸಿದ್ದಾರೆ.