ನವದೆಹಲಿ : ಎನ್ಡಿಎ ಸರ್ಕಾರದ 5ನೇ ಕೇಂದ್ರ ಬಜೆಟ್ 2018 ಅನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡನೆ ಆರಂಭಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಅವರು ಕೃಷಿ ಸಂಬಂಧಿತ ಸಮಸ್ಯೆಗಳನ್ನು ನಿವಾರಣೆ, ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆಗಲ್ಗೆ ಹೆಚ್ಚಿನ ಆದ್ಯತೆ ನೀಡಲು ಪ್ರಯತ್ನಿಸಿದ್ದಾರೆ. 2019 ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರದ ಈ ಕೊನೆಯ ಸಂಪೂರ್ಣ ಬಜೆಟ್ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. 


COMMERCIAL BREAK
SCROLL TO CONTINUE READING

ಕೇಂದ್ರ ಬಜೆಟ್ 2018ರ ಲೈವ್ ಅಪ್ಡೇಟ್ ನಿಮಗಾಗಿ...


 


1 ಫೆಬ್ರವರಿ 2018, ಮಧ್ಯಾಹ್ನ 12.49


ವ್ಯವಹಾರಕ್ಕೆ ಅನುಕೂಲವಾಗುವಂತೆ ಕಸ್ಟಮ್ ಆಕ್ಟ್ 1962 ರಲ್ಲಿ ಬದಲಾವಣೆಗಳನ್ನು ಮಾಡಲು ಸಲಹ. ದೀರ್ಘಾವಧಿಯ ಬಂಡವಾಳದ ಲಾಭಗಳು ರೂ 1 ಲಕ್ಷವನ್ನು ಮೀರಿದ್ದರೆ, ಶೇ.10ತೆರಿಗೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಮಧ್ಯಾಹ್ನ 12.49


ಶೈಕ್ಷಣಿಕ ಸೆಸ್ ಮತ್ತು ಉನ್ನತ ಶಿಕ್ಷಣ ಸೆಸ್ ಅನ್ನು ರದ್ದುಗೊಳಿಸಲು ಪ್ರಸ್ತಾಪ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಮಧ್ಯಾಹ್ನ 12.48


ಮೊಬೈಲ್ ಫೋನ್ ಮೇಲಿನ ಕಸ್ಟಮ್ ತೆರಿಗೆಯನ್ನು ಶೇ. 15 ರಿಂದ 20ಕ್ಕೆ ಹೆಚ್ಚಿಸಿದ್ದು, ಟಿವಿಯ ಕೆಲವು ಭಾಗಗಳ ಮೇಲಿನ ತೆರಿಗೆಯನ್ನು ಶೇ.15ಕ್ಕೆ ಇಳಿಸಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಮಧ್ಯಾಹ್ನ 12.48


ಪರೋಕ್ಷ ತೆರಿಗೆಯಲ್ಲಿ, ನನ್ನ ಬಜೆಟ್ ಪ್ರಸ್ತಾಪಗಳು ಮುಖ್ಯವಾಗಿ ತೆರಿಗೆ ಪರವಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಮಧ್ಯಾಹ್ನ 12.47


ಇ-ಮೌಲ್ಯಮಾಪನವು ಆದಾಯ ತೆರಿಗೆ ಇಲಾಖೆಯ ಕಾರ್ಯನಿರ್ವಹಣೆಯ ವ್ಯವಸ್ಥೆಯನ್ನು ಪರಿವರ್ತಿಸಲಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಮಧ್ಯಾಹ್ನ 12.40


250 ಕೋಟಿ ರೂಪಾಯಿಗಳವರೆಗೆ ಆದಾಯ ಹೊಂದಿರುವ ಕಂಪೆನಿಗಳಿಗೆ ಶೇ.25 ಕಾರ್ಪೊರೇಟ್ ತೆರಿಗೆ ದರವನ್ನು ವಿಸ್ತರಿಸಲು ಸಲಹೆ ನೀಡಲಾಗಿದೆ- ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.38


ಹಿರಿಯ ನಾಗರಿಕರಿಗೆ ನಿರ್ದಿಷ್ಟ ಪರಿಹಾರ ನೀಡಲಾಗುತ್ತಿದ್ದು, ಸಾಮಾನ್ಯ ವೈದ್ಯಕೀಯ ವೆಚ್ಚವನ್ನು 50,000 ರೂ.ವರೆಗೂ ಪಡೆಯಬಹುದು - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.36


ಉದ್ಯೋಗಸ್ಥರಿಗೆ ಸಾರಿಗೆ ಮತ್ತು ಆರೋಗ್ಯ ವೆಚ್ಚಗಳಿಗಾಗಿ 40,000 ರೂ.ಗಳ ವಿನಾಯಿತಿಗೆ ಅನುಮತಿಸಲು ಸಲಹೆ - ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.36


ವೇತನ ಪಡೆಯುತ್ತಿರುವ 1.89 ಕೋಟಿ ವರ್ಗದವರು ತಮ್ಮ ಆದಾಯವನ್ನು ಸಲ್ಲಿಸಿದ್ದಾರೆ - ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.33


ಹಣದುಬ್ಬರಕ್ಕೆ ಅನುಗುಣವಾಗಿ ಸಂಸತ್ ಸದಸ್ಯರಿಗೆ ಪ್ರತಿ 5 ವರ್ಷಗಳಿಗೆ ವೇತನ ಪರಿಷ್ಕರಣೆಯಾಗಿದೆ - ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.31


ವೈಯಕ್ತಿಕ ಆದಾಯ ತೆರಿಗೆಯಿಂದ 90,000 ಕೋಟಿ ರೂ. ಆದಾಯ ಹೆಚ್ಚಳವಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.28


ರೈತರ ಉತ್ಪಾದಕ ಕಂಪೆನಿಗಳಾಗಿ ನೋಂದಣಿಯಾಗಿರುವ ಕಂಪನಿಗಳಿಗೆ 100% ಕಡಿತ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.27


 2013-14ನೇ ಸಾಲಿನಲ್ಲಿ 6.47 ಕೋಟಿ ಇದ್ದ ತೆರಿಗೆ ಪಾವತಿದಾರರ ಸಂಖ್ಯೆಯು ಪ್ರಸ್ತುತದಲ್ಲಿ  8.27 ಕೋಟಿಗೆ ಏರಿಕೆಯಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ .


​​1 ಫೆಬ್ರವರಿ 2018, ಮಧ್ಯಾಹ್ನ 12.26


ಪ್ರಾಮಾಣಿಕರು ನೋಟು ಅಮಾನ್ಯ ಕ್ರಮವನ್ನು ಹಬ್ಬವಾಗಿ ಸ್ವೀಕರಿಸಿದ್ದಾರೆ  - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.23


ಕಳೆದ ಹಣಕಾಸು ವರ್ಷದಲ್ಲಿ ತೆರಿಗೆದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.22


ಜಿಡಿಪಿಯ ಶೇ. 3.3ರಷ್ಟು ಹಣಕಾಸು ಕೊರತೆಯನ್ನು ನಿರೀಕ್ಷಿಸಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳುತ್ತಾರೆ.


​​1 ಫೆಬ್ರವರಿ 2018, ಮಧ್ಯಾಹ್ನ 12.21


2017-18ರಲ್ಲಿ ಕೇಂದ್ರ ಸರ್ಕಾರವು ಕೇವಲ 11 ತಿಂಗಳ ಕಾಲ GST ಪ್ರಯೋಜನಗಳನ್ನು ಸ್ವೀಕರಿಸಲಿದ್ದು, ನಂತರ ಅದರ ಪರಿಣಾಮವನ್ನು ಬೀರುತ್ತದೆ - ಹಣಕಾಸು ಸಚಿವ ಅರುಣ್ ಜೇಟ್ಲಿ .


​​1 ಫೆಬ್ರವರಿ 2018, ಮಧ್ಯಾಹ್ನ 12.20


24 ಸಾರ್ವಜನಿಕ ವಲಯದ ಘಟಕಗಳ ಮಾರಾಟ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.20


Cryptocurrencies ಬಳಕೆಯನ್ನು ತೆಗೆದು ಹಾಕಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.18


ಬ್ಯಾಂಕುಗಳು ಹೆಚ್ಚುವರಿ 5 ಲಕ್ಷ ಕೋಟಿ ರೂ. ಸಾಲ ನೀಡಲು ಸಹಾಯ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.16


ಸಮಗ್ರ ಚಿನ್ನದ ನೀತಿ, ಚಿನ್ನದ ಹಣಗಳಿಕೆಯ ಯೋಜನೆ ಪರಿಷ್ಕರಿಸಲಾಗುವುದು - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.15


RBI ಕಾಯ್ದೆ ತಿದ್ದುಪಡಿ ಮಾಡಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.14


2017-18ರಲ್ಲಿ ಬಂಡವಾಳ ಹೂಡಿಕೆ ಗುರಿ ಸಾಧಿಸಿದ್ದು, 2018-19ರಲ್ಲಿ 80,000 ಕೋಟಿ ರೂಪಾಯಿಗಳ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ- ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.14


ಆಧಾರ್ ಅವಶ್ಯಕವಾಗಿದೆ, ಪ್ರತಿಯೊಬ್ಬ ವ್ಯಕ್ತಿಯ ಉದ್ಯಮವು ಯುನಿಕ್ ID ಪಡೆಯಲಿದ್ದು, ಆಧಾರ್ ಅವಶ್ಯವಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಮಧ್ಯಾಹ್ನ 12.12


ಉದ್ಯಮ-ಸ್ನೇಹಿ ರಕ್ಷಣಾ ಉತ್ಪಾದನಾ ಸೌಲಭ್ಯಕ್ಕೆ ಆದ್ಯತೆ - ಹಣಕಾಸು ಸಚಿವ ಅರುಣ್ ಜೇಟ್ಲಿ .


1 ಫೆಬ್ರವರಿ 2018, ಮಧ್ಯಾಹ್ನ 12.11


ಟೋಲ್ ಪಾವತಿ ವ್ಯವಸ್ಥೆಯನ್ನು ನಗದು ಪಾವತಿಗೆ ಬದಲಾಗಿ ಡಿಜಿಟಲ್ ಪಾವತಿಗೆ ಬದಲಾಯಿಸಲಾಗಿದೆ - ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.10


ಭಾರತದ ರಕ್ಷಣಾಪಡೆಯನ್ನು ರಕ್ಷಿಸಲು, ನಾವು ಗಡಿ ಪ್ರದೇಶಗಳಲ್ಲಿ ಸಂಪರ್ಕ ಒದಗಿಸಲು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಲಡಾಖ್ ಗೆ ಎಲ್ಲ ಹವಾಮಾನ ಸಂಪರ್ಕವನ್ನು ಒದಗಿಸುವ ರೊಹ್ತಂಗ್ ಸುರಂಗ ಮಾರ್ಗ ಯೋಜನೆ ಪೂರ್ಣಗೊಂಡಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ .


​​1 ಫೆಬ್ರವರಿ 2018, ಮಧ್ಯಾಹ್ನ 12.09


ಐಐಟಿ ಚೆನ್ನೈ ಮೂಲದ 5 ಜಿ ಕಾರ್ಯಕ್ರಮವನ್ನು ಟೆಲಿಕಾಂ ಇಲಾಖೆ ಬೆಂಬಲಿಸಲಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.04


56 ಅನುದಾನಿತ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸಲು ಪ್ರಾದೇಶಿಕ ವಾಯು ಸಂಪರ್ಕ ಯೋಜನೆ ಹಮ್ಮಿಕೊಳ್ಳಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ .


​​1 ಫೆಬ್ರವರಿ 2018, ಮಧ್ಯಾಹ್ನ 12.03


ಬುಲೆಟ್ ರೈಲು ಯೋಜನೆಗಾಗಿ, ತರಬೇತಿಗಾಗಿ ವಡೋದರದಲ್ಲಿ ನೂತನ ಇನ್ಸ್ಟಿಟ್ಯೂಟ್ ಆರಂಭ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.02


ಮುಂಬಯಿ ಸಾರಿಗೆ ವ್ಯವಸ್ಥೆಯನ್ನು 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಲಾಗುತ್ತಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.01


600 ಪ್ರಮುಖ ಕೇಂದ್ರಗಳ ಮರು-ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ಎಸ್ಕಲೇಟರ್ಗಳು, ಸಿ.ಸಿ.ಟಿ.ವಿಗಳು ಮತ್ತು ವೈಫೈ ಸೌಲಭ್ಯಗಳನ್ನು ಎಲ್ಲಾ ಪ್ರಮುಖ ಕೇಂದ್ರಗಳು ಹೊಂದಲಿವೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಮಧ್ಯಾಹ್ನ 12.00


ರೈಲ್ವೆಯಲ್ಲಿ ಸುರಕ್ಷತೆ ಮೊದಲ ನೀತಿ ಜಾರಿಗೆ ತರಲಾಗುವುದು- ಹಣಕಾಸು ಸಚಿವ ಅರುಣ್ ಜೇಟ್ಲಿ .


1 ಫೆಬ್ರವರಿ 2018, ಬೆಳಿಗ್ಗೆ 11.59


142 ನಗರಗಳಿಗೆ ಹೂಡಿಕೆಯ ಗ್ರೇಡ್ ರೇಟಿಂಗ್ಗಳು ದೊರೆತಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.58


99 ಸ್ಮಾರ್ಟ್ ನಗರಗಳನ್ನು ರೂ. 2.04 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.57


10 ಪ್ರವಾಸಿ ತಾಣಗಳನ್ನು ಐತಿಹಾಸಿಕ ಪ್ರವಾಸೀ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.55


ಮಹಿಳಾ EPF ಕೊಡುಗೆಯನ್ನು ಮೊದಲ 3 ವರ್ಷಗಳ ಉದ್ಯೋಗಕ್ಕಾಗಿ 8% ಕ್ಕೆ ಇಳಿಸಲಾಗಿದ್ದು, ಉದ್ಯೋಗದಾತ ಕೊಡುಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.55


2018-19ನೇ ಸಾಲಿನಲ್ಲಿ ಜವಳಿ ಉದ್ಯಮಕ್ಕೆ 7148 ಕೋಟಿ ರೂ. ನೀಡಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.52


ಮುಂದಿನ 3 ವರ್ಷಗಳಿಗೆ ಎಲ್ಲ ವಲಯಗಳ ಹೊಸ ನೌಕರರ ವೇತನದ ಶೇ.12ರಷ್ಟನ್ನು ಸರ್ಕಾರ ಲ್ಲಿ EPFಗಾಗಿ ಕೊಡುಗೆ ನೀಡಲಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.50


ಉದ್ಯೋಗ ಸೃಷಿ ಸರ್ಕಾರದ ಮೂಲ ಯೋಜನೆಯಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.49


ಮಹಿಳೆಯರು, ಎಸ್ಸಿಗಳು, ಎಸ್ಟಿಗಳು ಮತ್ತು ಒಬಿಸಿಗಳ 76% ಮುದ್ರೆ ಸಾಲ ಖಾತೆಗಳ ಉದ್ದೇಶಕ್ಕಾಗಿ 3 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.46


MSMEಗಳಿಗೆ ಆನ್ಲೈನ್ ಸಾಲದ ಸೇವೆ ಸೌಲಭ್ಯಗಳನ್ನು ಪರಿಷ್ಕರಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.


​​1 ಫೆಬ್ರವರಿ 2018, ಬೆಳಿಗ್ಗೆ 11.43


ಜನರಿಗೆ ಪಿಂಚಣಿ ಯೋಜನೆಗಳನ್ನು ಒದಗಿಸಲು ಪ್ರಧಾನ್ ಮಂತ್ರಿ ಜನ ಧನ್ ಯೋಜನೆಯನ್ನು ವಿಸ್ತರಿಸಲಾಗುವುದು- ಹಣಕಾಸು ಸಚಿವ ಅರುಣ್ ಜೇಟ್ಲಿ .


​​1 ಫೆಬ್ರವರಿ 2018, ಬೆಳಿಗ್ಗೆ 11.42


ದೇಶದಲ್ಲಿ ಅಸ್ತಿತ್ವದಲ್ಲಿರುವ ಆಸ್ಪತ್ರೆಗಳನ್ನು ನವೀಕರಿಸುವ ಮೂಲಕ 24 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ತೆರೆಯಲಾಗುವುದು - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.41


ರಾಷ್ಟ್ರೀಯ ಸ್ವಾಸ್ಥ ಬೀಮಾ ಯೋಜನೆಯು ಪ್ರಸ್ತುತ 30,000 ರೂಪಾಯಿಗಳನ್ನು ಒದಗಿಸುತ್ತದೆ. ನಾವು ಈಗ 10 ಕೋಟಿ ದುರ್ಬಲ ಕುಟುಂಬಗಳು, 50 ಕೋಟಿ ಫಲಾನುಭವಿಗಳಿಗೆ ಆರೋಗ್ಯ ರಕ್ಷಣೆ / ಆಸ್ಪತ್ರೆ ವೆಚ್ಚಕ್ಕಾಗಿ ತಲಾ ರೂ. 5 ಲಕ್ಷ ಒದಗಿಸುವ ಪ್ರಮುಖ ಆರೋಗ್ಯ ಯೋಜನೆಗಳನ್ನು ಪ್ರಾರಂಭಿಸುತ್ತಿದ್ದೇವೆ- ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.40


ಆರೋಗ್ಯ ಕೇಂದ್ರಗಳನ್ನು ಜನರಿಗೆ ಮತ್ತಷ್ಟು ಹತ್ತಿರಗೊಳಿಸಲು ರಾಷ್ಟ್ರೀಯ ಆರೋಗ್ಯ ನೀತಿ ಅಡಿಯಲ್ಲಿ 1.5 ಲಕ್ಷ ಕೇಂದ್ರಗಳನ್ನು ಆರಂಭಿಸಲಾಗುವುದು. ಜನರಿಗೆ ಉಚಿತ ಔಷಧಿ ಮತ್ತು ಸೇವೆಯನ್ನೂ  ಒದಗಿಸಲಿದ್ದು, ಇದಕ್ಕಾಗಿ 1200 ಕೋಟಿ ರೂ. ಹಂಚಿಕೆ ಮಾಡಲಾಗಿದೆ- ಹಣಕಾಸು ಸಚಿವ ಅರುಣ್ ಜೇಟ್ಲಿ .


​​1 ಫೆಬ್ರವರಿ 2018, ಬೆಳಿಗ್ಗೆ 11.36


ಗ್ರಾಮೀಣ ಮೂಲಸೌಕರ್ಯಕ್ಕಾಗಿ 14.34 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುವುದು - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.35


ನವೊದಯ ವಿದ್ಯಾಲಯಗಳೊಂದಿಗೆ ಏಕಲವ್ಯ ಶಾಲೆಗಳನ್ನೂ ವಿಸ್ತರಿಸಲಾಗುವುದು - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.34


ಶಿಕ್ಷಣದಲ್ಲಿ ಡಿಜಿಟಲ್ ಅಳವಡಿಕೆ ಹೆಚ್ಚಾಗುತ್ತದೆ. ಬುಡಕಟ್ಟು ಮಕ್ಕಳೂ ಸೇರಿದಂತೆ ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ತಂತ್ರಜ್ಞಾನವನ್ನು ಬಳಸಲಾಗುವುದು - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.33


ಶಿಕ್ಷಣದ ಗುಣಮಟ್ಟಕ್ಕೆ ಇನ್ನೂ ಕಾಳಜಿಗೆ ಕಾರಣವಾಗಿದ್ದು, ಶಿಕ್ಷಣವನ್ನು ಸಮಗ್ರವಾಗಿ ಪರಿಗಣಿಸಲು ನಾವು ಯೋಜಿಸುತ್ತೇವೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.31


ತಮ್ಮ ಆರ್ಥಿಕ ಆಶಯಗಳನ್ನು ಪೂರೈಸಲು ಪ್ರತಿ ಭಾರತೀಯರಿಗೂ ಸಹಾಯ ಮತ್ತು ಅವಕಾಶವನ್ನು ಒದಗಿಸಲಾಗಿದೆ -ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.30


ಅಂತರ್ಜಲ ನೀರಾವರಿ ಯೋಜನೆ - ಹರ್ ಖೇತ್ ಕೋ ಪಾನಿ - ಉದ್ದೇಶಕ್ಕಾಗಿ 2600 ಕೋಟಿ ರೂ.ನೀಡಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.29


2022 ರ ಹೊತ್ತಿಗೆ, ಪ್ರತಿ ಬಡವರೂ ತಮ್ಮ ಸ್ವಂತ ಮನೆ ಹೊಂದಬೇಕೆಂಬ ಗುರಿಯೊಂದಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಪ್ರಾರಂಭಿಸಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ 1 ಲಕ್ಷ ಮನೆಗಳನ್ನು ಮತ್ತು ನಗರ ಪ್ರದೇಶಗಳಲ್ಲಿ 37 ಲಕ್ಷ ಮನೆಗಳನ್ನು ಕಟ್ಟಲಾಗುತ್ತಿದೆ- ಹಣಕಾಸು ಸಚಿವ ಅರುಣ್ ಜೇಟ್ಲಿ.


​​1 ಫೆಬ್ರವರಿ 2018, ಬೆಳಿಗ್ಗೆ 11.28


ಮುಂದಿನ ಆರ್ಥಿಕ ವರ್ಷದಲ್ಲಿ 2 ಕೋಟಿ ಶೌಚಾಲಯಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ -  ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.27


ಪ್ರಧಾನ ಮಂತ್ರಿ ಸೌಜನ್ಯ ಯೋಜನೆ ಅಡಿಯಲ್ಲಿ 4 ಲಕ್ಷ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಲು 16 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.26


ಈ ಸರಕಾರವು ಬಡವರ ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಬಗ್ಗೆ ಕಳವಳಗೊಂಡಿದ್ದು, ಅದಕ್ಕಾಗಿಯೇ ಉಜ್ವಾಲಾ ಯೋಜನೆ ಪ್ರಾರಂಭಿಸಿದ್ದೇವೆ- ಹಣಕಾಸು ಸಚಿವ ಅರುಣ್ ಜೇಟ್ಲಿ .


1 ಫೆಬ್ರವರಿ 2018, ಬೆಳಿಗ್ಗೆ 11.24


ದೆಹಲಿ NCR ನಲ್ಲಿ ವಾಯು ಮಾಲಿನ್ಯ - ಹರಿಯಾಣ ಮತ್ತು ಪಂಜಾಬ್ ನಲ್ಲಿ ಈ ಸಮಸ್ಯೆಯನ್ನು ನಿಭಾಯಿಸಲು ವಿಶೇಷ ಯೋಜನೆ ಜಾರಿಗೆ ತರಲಾಗುವುದು - ಹಣಕಾಸು ಸಚಿವ ಅರುಣ್ ಜೇಟ್ಲಿ .


1 ಫೆಬ್ರವರಿ 2018, ಬೆಳಿಗ್ಗೆ 11.24


ಅನೇಕ ರೈತರು ಸೌರಶಕ್ತಿಯನ್ನು ಬಳಸುತ್ತಿದ್ದಾರೆ. ಸರ್ಕಾರ ಈ ಕಾರ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಸೌರಶಕ್ತಿ ಉತ್ಪಾದಿಸುವ ರೈತರಿಗೆ ಸಬ್ಸಿಡಿ ನೀಡಲಿದೆ -ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.23


ಆಪರೇಶನ್ ಗ್ರೀನ್ ಯೋಜನೆಗೆ 500 ಕೋಟಿ ರೂ. ನೀಡಲಾಗಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.23


ಬಿದಿರು ಉತ್ಪಾದನೆಯನ್ನು ಉತ್ತೇಜಿಸಲು 1290 ಕೋಟಿ ರೂಪಾಯಿಗಳ ಯೋಜನೆಯನ್ನು ಪುನರ್ ರೂಪಿಸಲಾಗಿದೆ -ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.22


ಮೀನುಗಾರಿಕೆ ಮತ್ತು ಪಶುಸಂಗೋಪನೆಗಾಗಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿಸ್ತರಿಸಲು ಸಲಹೆ ನೀಡುತ್ತೇನೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.20


ಗ್ರಾಮೀಣ ರೈತರ ಅವಶ್ಯಕತೆಗಳಾದ ಆಹಾರ ಸಂಗ್ರಹಣೆ, ಬೆಳೆ ಹಂಚಿಕೆಗೆ ಆಪರೇಷನ್ ಗ್ರೀನ್ ಸಹಾಯವಾಗಲಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.18


ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗೆ 2000 ಕೋಟಿ ರೂಪಾಯಿಗಳೊಂದಿಗೆ ಕೃಷಿ ಮಾರುಕಟ್ಟೆ ಅಭಿವೃದ್ಧಿ ನಿಧಿ ಸ್ಥಾಪಿಸಲಾಗುವುದು- ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.17


ರೈತರಿಗೆ ಉತ್ತಮ ಲಾಭಗಳನ್ನು ಒದಗಿಸುವ ನಿಟ್ಟಿನಲ್ಲಿ ನೀತಿ ಆಯೋಗವು ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಇದರಿಂದಾಗಿ ಅವರು ತಮ್ಮ ಬೆಳೆಗಳಿಗೆ ಸಾಕಷ್ಟು ಬೆಲೆಗಳನ್ನು ಪಡೆಯುತ್ತಿದ್ದಾರೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.16


ಎಲ್ಲಾ ಬೆಳೆಗಳ ಮೇಲಿನ ಕನಿಷ್ಟ ಬೆಂಬಲ ಬೆಲೆಯು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಹೆಚ್ಚಾಗಲಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳುತ್ತಾರೆ.


1 ಫೆಬ್ರವರಿ 2018, ಬೆಳಿಗ್ಗೆ 11.15


ನಮ್ಮ ಸರ್ಕಾರವು ಎಲ್ಲ  ಸಮಸ್ಯೆಗಳಿಗೆ ಒಟ್ಟಾರೆ ಪರಿಹಾರಗಳನ್ನು ಹುಡುಕುವ ಗುರಿ ಹೊಂದಿದೆ- ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.13


ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ಬೆಂಬಲ ನೀಡುವುದಾಗಿ ಹೇಳಿದೆ ಎಂದು ಅರುಣ್ ಜೇಟ್ಲಿ ಹೇಳಿದರು. ಈ ಸಂಬಂಧ ಬಜೆಟ್ ಭಾಷಣದಲ್ಲಿ ಪಕ್ಷದ ಪ್ರಣಾಳಿಕೆ ಕುರಿತ ಉಲ್ಲೇಖವನ್ನು  ವಿರೋಧ ಪಕ್ಷಗಳು ವಿರೋಧಿಸಿದವು.


1 ಫೆಬ್ರವರಿ 2018, ಬೆಳಿಗ್ಗೆ 11.10


ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಬಹಳಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಔಷಧಿಗಳ ಲಭ್ಯತೆಯೊಂದಿಗೆ ಔಷಧಿಗಳ ದರವನ್ನೂ ಕಡಿತಗೊಳಿಸಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.


1 ಫೆಬ್ರವರಿ 2018, ಬೆಳಿಗ್ಗೆ 11.08


ಭಾರತ ಶೀಘ್ರದಲ್ಲೇ ಐದನೇ ದೊಡ್ಡ ಆರ್ಥಿಕತೆ ರಾಷ್ಟವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೇಶದಲ್ಲಿ ಮೂಲಸೌಕರ್ಯ ಶ್ರೀಶಿಗೆ ಕ್ರಮ ಕೈಗೊಳ್ಳುವುದರೊಂದಿಗೆ ಬಡತನವನ್ನು ತಗ್ಗಿಸುವ ಭರವಸೆ ನೀಡುತ್ತೇವೆ. ನಮ್ಮ ಸರ್ಕಾರವು ರಚನಾತ್ಮಕ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಪರೋಕ್ಷ ತೆರಿಗೆಗಳು ಜಿಎಸ್ಟಿ ಜಾರಿಯೊಂದಿಗೆ ಸರಳವಾಗಿದೆ. ದೇಶವು ಶೇ.8 ಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ಸಾಧಿಸುವ ಮಾರ್ಗದಲ್ಲಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.


1 ಫೆಬ್ರವರಿ 2018, ಬೆಳಿಗ್ಗೆ 11.07


ಆರ್ಥಿಕ ಮತ್ತು ಸಾಂಸ್ಕೃತಿಕ ಸುಧಾರಣೆಗಳು ಆರ್ಥಿಕತೆಗೆ ಸಣ್ಣ ಮತ್ತು ದೀರ್ಘಾವಧಿಯಲ್ಲಿ ಹೆಚ್ಚಿನ ಗುರಿ ಸಾಧಿಸಲು ನೆರವಾಗಲಿದೆ - ಹಣಕಾಸು ಸಚಿವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 11.06


ಆರ್ಥಿಕ ಸುಧಾರಣೆಗಳಿಂದಾಗಿ FDA ಏರಿಕೆಯಾಗಿದೆ, ನೈಸರ್ಗಿಕ ಸಂಪನ್ಮೂಲಗಳನ್ನು ಈಗ ಪಾರದರ್ಶಕ ರೀತಿಯಲ್ಲಿ ವಿತರಿಸಲಾಗುತ್ತಿದ್ದು, ಪ್ರಾಮಾಣಿಕತೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.


1 ಫೆಬ್ರವರಿ 2018, ಬೆಳಿಗ್ಗೆ 11.04


ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಂದ ಬಜೆಟ್ ಮಂಡನೆ ಆರಂಭ.



1 ಫೆಬ್ರವರಿ 2018, ಬೆಳಿಗ್ಗೆ 11.00


ಲೋಕಸಭಾ ಕಲಾಪ ಆರಂಭ. ಈ ಬಜೆಟ್ ದೇಶದ ಅಭಿವೃದ್ಧಿ ಪರವಾಗಿರಲಿದೆ ಎಂಬ ನಿರಿಕ್ಷೆಯಲ್ಲಿದ್ದೇವೆ ಎಂದ ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್. 


1 ಫೆಬ್ರವರಿ 2018, ಬೆಳಿಗ್ಗೆ 10.56




1 ಫೆಬ್ರವರಿ 2018, ಬೆಳಿಗ್ಗೆ 10.50


ಕೇಂದ್ರ ಬಜೆಟ್ ಅಂಗೀಕರಿಸಿದ ಕ್ಯಾಬಿನೆಟ್. ಬೆಳಿಗ್ಗೆ 11ಗಂಟೆಗೆ ಬಜೆಟ್ ಮಂಡಿಸಲಿರುವ ಅರುಣ್ ಜೇಟ್ಲಿ.


1 ಫೆಬ್ರವರಿ 2018, ಬೆಳಿಗ್ಗೆ 10.49


ಸಂಸತ್ತಿನಲ್ಲಿ ಪೂರ್ಣಗೊಂಡ ಕ್ಯಾಬಿನೆಟ್ ಸಭೆ. ಸದ್ಯದಲ್ಲೇ ಮಂಡನೆಯಾಗಲಿದೆ 2018-19 ರ ಕೇಂದ್ರ ಬಜೆಟ್.


1 ಫೆಬ್ರವರಿ 2018, ಬೆಳಿಗ್ಗೆ 10.27


ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ ವಜೆತ್ ಮಂಡನೆಯಾದ ನಂತರ ಮಧ್ಯಾಹ್ನ 2 ಜೇಟ್ಲಿ ಅವರ ಸಂದರ್ಶನ ಪ್ರಸಾರವಾಗಲಿದೆ. ಸಂಜೆ 4 ಗಂಟೆಗೆ ಅರುಣ್ ಜೇಟ್ಲಿ ಅವರಿಂದ ಬಜೆಟ್ ನಂತರದ ಪತ್ರಿಕಾಗೋಷ್ಠಿ. ಸಂಜೆ 4.30ಕ್ಕೆ ಆರ್ಥಿಕ ಸಲಹಾ ಮಂಡಳಿಯೊಂದಿಗೆ ಬಜೆಟ್ ಕುರಿತು ಚರ್ಚೆ. 


1 ಫೆಬ್ರವರಿ 2018, ಬೆಳಿಗ್ಗೆ 10.19


ಸಂಸತ್ತು ತಲುಪಿದ ಪ್ರಧಾನಿ ನರೇಂದ್ರ ಮೋದಿ. ಬಜೆಟ್ ಮಂಡನೆಗೆ ಕ್ಷಣಗಣನೆ.




1 ಫೆಬ್ರವರಿ 2018, ಬೆಳಿಗ್ಗೆ 9.51


ಕೇಂದ್ರ ಬಜೆಟ್ 2018 ಮಂಡನೆಗಾಗಿ ಸಂಸತ್ತಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ.




1 ಫೆಬ್ರವರಿ 2018, ಬೆಳಿಗ್ಗೆ 11.10