ನವದೆಹಲಿ: ಕೇಂದ್ರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಹಲವು ಕುತೂಹಲ ಮೂಡಿಸಿದೆ. ಮುಂಬರುವ ಸಾರ್ವತ್ರಿಕ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ಈ ಬಜೆಟ್ ದೊಡ್ಡ ಮಟ್ಟದ ಮಹತ್ವವನ್ನು ಪಡೆದುಕೊಂಡಿದೆ. ಜಿಎಸ್ಟಿ ಜಾರಿಯಾದ ಬಳಿಕ ಮಂಡನೆಯಾಗುತ್ತಿರುವ ಪ್ರಥಮ ಬಜೆಟ್ ಇದಾಗಿದ್ದು, ಜನಸಾಮಾನ್ಯರು ಹಲವು ಆಕಾಂಕ್ಷೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಹಾಗಾದರೆ, ಕೇಂದ್ರ ಬಜೆಟ್ 2018ರ ಬಗ್ಗೆ ಜನಸಾಮಾನ್ಯರ ಮುಖ್ಯ ನಿರೀಕ್ಷೆಗಳೇನು...? ಅದರ ಕೆಲವು ಅಂಶಗಳನ್ನು ನೋಡೋಣಾ...


* ಆದಾಯ ತೆರಿಗೆಯಲ್ಲಿ ವಿನಾಯಿತಿ; ಈಗ 3 ಲಕ್ಷದವರೆಗೆ ಇರುವ ಆದಾಯ ತೆರಿಗೆ ಮಿತಿಯನ್ನು ಈ ಬಾರಿಯ ಬಜೆಟ್ನಲ್ಲಿ 5 ಲಕ್ಷದವರೆಗೆ ಏರಿಕೆಮಾಡಬಹುದು ಎನ್ನುವ ನಿರೀಕ್ಷೆಯಿದೆ.


* ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಹಿಂತೆಗೆದುಕೊಳ್ಳುವಿಕೆಯ ಮೇಲೆ ಸಂಪೂರ್ಣ ವಿನಾಯಿತಿಯನ್ನು ಜನತೆ ನಿರೀಕ್ಷಿಸಿದ್ದಾರೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಈಗಾಗಲೇ ಎನ್ಪಿಎಸ್ ಅನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಸಂಪೂರ್ಣ ವಿನಾಯತಿಯನ್ನು ಬಯಸಿದೆ.


* ಮೂಲಭೂತ ಸೌಕರ್ಯಗಳ ಬಾಂಡ್ಗಳ ಮರು ಪರಿಚಯವನ್ನು ಜನತೆ ನಿರೀಕ್ಷಿಸುತ್ತಿದೆ.


* ಉದ್ಯೋಗಿಗೆ ನೀಡಲಾಗುತ್ತಿರುವ ವೈದ್ಯಕೀಯ ಖರ್ಚುಗಳ ಮೇಲಿನ ವಿನಾಯಿತಿಯ ಮಿತಿ ಹೆಚ್ಚಳವನ್ನು ಈ ವರ್ಷದ ಬಜೆಟ್ನಲ್ಲಿ ನಿರೀಕ್ಷಿಸಲಾಗಿದೆ. ಇದು ಪ್ರಸ್ತುತ ರೂ. 15,000 ಇದ್ದು, ಇದನ್ನು ಅಸಮರ್ಪಕ ಎಂದು ಪರಿಗಣಿಸಲಾಗಿದೆ.


*  ಮನೆ ಸಾಲದ ಬಡ್ಡಿ ಮೇಲಿನ ಕಡಿತವನ್ನು ಜನ ನಿರೀಕ್ಷಿಸುತ್ತಿದ್ದಾರೆ.


*  ಬರಗಾಲದಿಂದ ಬೇಸತ್ತ ರೈತರು ಈ ಬಜೆಟ್ನಲ್ಲಿ ಪರಿಹಾರ ಘೋಷಣೆಯನ್ನು ಬಯಸುತ್ತಿದ್ದಾರೆ.


* ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ಶಿಕ್ಷಣದ ಸಾಲವನ್ನು ದೇಶದ ಯುವಜನರ ಬಹುಪಾಲು ಅವಲಂಬಿಸಿದೆ. ಶಿಕ್ಷಣ ಸಾಲದ ಮೇಲಿನ ಬಡ್ಡಿಯನ್ನು 100% ಕಡಿತವನ್ನು ನಿರೀಕ್ಷಿಸಲಾಗಿದೆ.


* ಉಚಿತ ಆರೋಗ್ಯ ವಿಮೆಯನ್ನು ಜನ ಎದುರುನೋಡುತ್ತಿದ್ದಾರೆ.


ಇವೆಲ್ಲವೂ ಕೇಂದ್ರ ಬಜೆಟ್ 2018ರ ಕೆಲವು ಪ್ರಮುಖ ನಿರೀಕ್ಷೆಗಳಾಗಿವೆ. ನೋಟು ರದ್ಧತಿ ಹಾಗೂ GSTಯಿಂದಾಗಿ ಬಳಲಿರುವ ಸಾಮಾನ್ಯ ಜನತೆಯ ಮುಖದಲ್ಲಿ ಈ ಬಾರಿಯ ಬಜೆಟ್ ಮಂದಹಾಸ ತರಿಸುವುದೇ ಎಂಬುದನ್ನು ಕಾದುನೋಡಬೇಕಿದೆ.