ನವದೆಹಲಿ: ಇಂದು ಲೋಕಸಭೆಯಲ್ಲಿ ಹಂಗಾಮಿ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಮಂಡಿಸಲಿರುವ ಮಧ್ಯಂತರ ಬಜೆಟ್'ನಲ್ಲಿ ಜನರ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಐದು ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಮಂಡಿಸಲಿರುವ ಕೊನೆಯ ಬಜೆಟ್ ಇದಾಗಿದ್ದು, ಜನತೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ. 


COMMERCIAL BREAK
SCROLL TO CONTINUE READING

1. ಆದಾಯ ತೆರಿಗೆ ವಿನಾಯಿತಿ
ಇಂದು ಮಂಡಿಸಲಿರುವ ಮಧ್ಯಂತರ ಬಜೆಟ್'ನಲ್ಲಿ ಆದಾಯ ತೆರಿಗೆ ವಿನಾಯತಿಯ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಪ್ರಸ್ತುತ ಇರುವ 2.5 ಲಕ್ಷ ಮಿತಿಯನ್ನು 3 ಲಕ್ಷ ರೂ.ಗಳವರೆಗೆ ಹೆಚ್ಚಿಸುವ ನಿರೀಕ್ಷೆಯಿದೆ. ಇದರಿಂದಾಗಿ ದೇಶದ ಜನತೆಗೆ ತೆರಿಗೆಯಿಂದ ವಿನಾಯಿತಿ ಪಡೆಯಲು ಭಾರೀ ಪ್ರಯೋಜನವಾಗಲಿದೆ. 


2. ಮಹಿಳೆಯರಿಗೆ ತೆರಿಗೆ ವಿನಾಯಿತಿ
ಈ ಬಾರಿ ಮಹಿಳೆಯರಿಗೂ ತೆರಿಗೆ ಪಾವತಿಯಲ್ಲಿ ವಿನಾಯತಿ ನೀಡುವ ಸಾಧ್ಯತೆ ಇದೆ. ಪ್ರಸ್ತುತ ಮಹಿಳೆಯರಿಗೆ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳವರೆಗೆ ಹೆಚ್ಚಿಸುವ ನಿರೀಕ್ಷೆಯಿದೆ.


3. 60 ರಿಂದ 80 ವರ್ಷದ ನಾಗರಿಕರಿಗೆ ತೆರಿಗೆ ವಿನಾಯಿತಿ
ಮೋದಿ ಸರ್ಕಾರ ಮಂಡಿಸಲಿರುವ ಕೊನೆಯ ಬಜೆಟ್'ನಲ್ಲಿ  60 ರಿಂದ 80 ವರ್ಷದವರೆಗಿನ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸುವ ಸಾಧ್ಯತೆ ಇದೆ. ಪ್ರಸ್ತತ ಇರುವ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗಳಿಂದ 3.5 ಲಕ್ಷ ರೂ.ಗಳವರೆಗೆ ಹೆಚ್ಚಿಸುವ ಸಾಧ್ಯತೆಯಿದೆ.


4. 80C ಮೇಲೂ ಭಾರಿ ವಿನಾಯಿತಿ
80C ವಿಭಾಗದಲ್ಲಿ ಆದಾಯ ತೆರಿಗೆ ಪಾವತಿಸುವವರ ಆದಾಯ ಮಿತಿಯನ್ನು 1.5 ಲಕ್ಷ ರೂ.ಗಳಿಂದ 2 ಲಕ್ಷಗಳವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.


5. ಅಷ್ಟೇ ಅಲ್ಲದೆ, ಈ ಬಾರಿಯ ಬಜೆಟ್'ನಲ್ಲಿ ರೈತರಿಗೆ ಹೆಚ್ಚು ಲಾಭ ದೊರೆಯಲಿದೆ ಎನ್ನಲಾಗಿದೆ. ರೈತರ 3 ಲಕ್ಷ ರೂ.ಗಳವರೆಗಿನ ಬಡ್ಡಿರಹಿತ ಸಾಲ ಘೋಷಣೆ ಸಾಧ್ಯತೆಯಿದೆ. ಅಲ್ಲದೆ, ಬೆಲೆ ವಿಮೆ ಯೋಜನೆಯಲ್ಲಿಯೂ ಹಲವು ಬದಲಾವಣೆಯಾಗುವ ಸಾಧ್ಯತೆಯಿದೆ.