ಬಜೆಟ್ 2019ರ ಪ್ರಮುಖ ಘೋಷಣೆ: ಸರ್ಕಾರಿ ಪ್ರಕ್ರಿಯೆಗಳು ಮತ್ತಷ್ಟು ಸರಳ!
ಹಳೆಯ ಸಂಪ್ರದಾಯದಂತೆ ಬಜೆಟ್‌ನ ಪ್ರತಿಯನ್ನು ಬ್ರೀಫ್‌ಕೇಸ್‌ನಲ್ಲಿ ತರುವ ಬದಲು ಈ ಬಾರಿ ಕೆಂಪು ಚೀಲದಲ್ಲಿ ತರಲಾಗಿತ್ತು. ಬಜೆಟ್ ಅನ್ನು ಈ ಬಾರಿ `ಪುಸ್ತಕ ಖಾತೆ` ಎಂದು ಹೆಸರಿಸಲಾಗಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಮೊದಲ ಸಾಮಾನ್ಯ ಬಜೆಟ್ ಅನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸಿದರು. ಬಜೆಟ್ ಅನ್ನು ಪ್ರಸ್ತುತಪಡಿಸುವ ಹಳೆಯ ಸಂಪ್ರದಾಯದಂತೆ ಬಜೆಟ್‌ನ ಪ್ರತಿಯನ್ನು ಬ್ರೀಫ್‌ಕೇಸ್‌ನಲ್ಲಿ ತರುವ ಬದಲು ಈ ಬಾರಿ ಕೆಂಪು ಚೀಲದಲ್ಲಿ ತರಲಾಗಿತ್ತು. ಬಜೆಟ್ ಅನ್ನು ಈ ಬಾರಿ 'ಪುಸ್ತಕ ಖಾತೆ' ಎಂದು ಹೆಸರಿಸಲಾಗಿದೆ. ಇದು ನಮ್ಮ ಭಾರತೀಯ ಸಂಪ್ರದಾಯದಲ್ಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯಂ ಹೇಳಿದ್ದಾರೆ. ವಸಾಹತು ಮನಃಸ್ಥಿತಿಯಿಂದ ನಾವು ಮುಕ್ತರಾಗಿರುವುದನ್ನು ಈ ಬದಲಾವಣೆಯು ಸಂಕೇತಿಸುತ್ತದೆ ಎಂದು ವರ್ಣಿಸಲಾಗಿದೆ.
ಇದಕ್ಕೂ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರು ಸಚಿವಾಲಯದಿಂದ ಹೊರಬಂದು ಬಜೆಟ್‌ನ ಪ್ರತಿ ಹೊಂದಿರುವ ಚೀಲವನ್ನು ಮಾಧ್ಯಮಗಳಿಗೆ ತೋರಿಸಿದರು. ಈ ಚೀಲದಲ್ಲಿ ಅಶೋಕ ಚಿಹ್ನೆ ಇದೆ. ಅಲ್ಲದೆ ಇಡೀ ಚೀಲವನ್ನು ಹಳದಿ ದಾರದಿಂದ ಸುತ್ತಲಾಗಿತ್ತು. ಹಣಕಾಸು ಸಚಿವರು ಬಜೆಟ್ ಭಾಷಣದ ಆರಂಭದಲ್ಲಿ ಚಾಣಕ್ಯ ಸೂತ್ರವನ್ನೂ ಓದಿದರು.
ಈ ಬಜೆಟ್‌ನಲ್ಲಿ ಮಾಡಲಾದ ದೊಡ್ಡ ಘೋಷಣೆಗಳು:
- ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಜನ ಸಾಮಾನ್ಯರಿಗೆ ಸರ್ಕಾರ ಹತ್ತಿರವಾಗಲು ಸರ್ಕಾರಿ ಪ್ರಕ್ರಿಯೆಗಳನ್ನು ಸರಳ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
- ಭಾರತವು ಪ್ರಸ್ತುತ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಇದು ಐದು ವರ್ಷಗಳ ಹಿಂದೆ 11 ನೇ ಸ್ಥಾನದಲ್ಲಿತ್ತು: ಹಣಕಾಸು ಸಚಿವೆ
- ಬಜೆಟ್‌ನಲ್ಲಿ ಹೊಸ ಭಾರತ(ನ್ಯೂ ಇಂಡಿಯಾ)ದತ್ತ ಗಮನ ಹರಿಸಲಾಗಿದೆ.
- ಭಾರತ 2019-20ರಲ್ಲಿ 3 ಟ್ರಿಲಿಯನ್ ದೇಶವಾಗಲಿದೆ. 5 ಟ್ರಿಲಿಯನ್ ಆರ್ಥಿಕತೆ ಯೋಜನೆ ನಮ್ಮ ಗುರಿ.
- ಗ್ರಾಮೀಣ, ನಗರ ಪ್ರದೇಶಗಳ ಬೆಳವಣಿಗೆಗಾಗಿ ಸಾರಿಗೆ ಕ್ರಾಂತಿಗೆ ಸರ್ಕಾರ ಕಟಿಬದ್ದ. ಈ ಹಿನ್ನೆಲೆಯಲ್ಲಿ ನೂತನ ಸಾರಿಗೆ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
- 300 ಕಿ.ಮೀ. ಮೆಟ್ರೋ ರೈಲು ಮಾರ್ಗಕ್ಕೆ ಅನುಮೋದನೆ.
- ಎಲೆಕ್ಟ್ರಿಕ್ ವಾಹನ ತಯಾರಿಕೆ-ಬಳಕೆಗೆ ಸರ್ಕಾರದಿಂದ ಅಗತ್ಯ ಸಹಕಾರ.
- ಒಂದು ದೇಶ, ಒಂದು ಗ್ರೀಡ್ ಯೋಜನೆ ಮೂಲಕ ಎಲ್ಲಾ ರಾಜ್ಯಗಳಿಗೂ ಸಮಾನ ವಿದ್ಯುತ್ ಹಂಚಿಕೆ.
- ಗೃಹ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ.
- ಕರ್ಮಯೋಗಿ ಸಮ್ಮಾನ್ ಯೋಜನೆ ಅಡಿಯಲ್ಲಿ 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿ.