ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಂಗಾಮಿ ಹಣಕಾಸು ಸಚಿವ ಪಿಯುಶ್ ಗೋಯಲ್ ಇಂದು ಮಂಡಿಸಿದ ಕೇಂದ್ರ ಬಜೆಟ್ 2019ರಲ್ಲಿ ತೆರಿಗೆ ಪಾವತಿದಾರರಿಗೆ ಭಾರೀ ವಿನಾಯಿತಿ ಘೋಷಣೆ ಮಾಡಿದ್ದಾರೆ. ಅದರಂತೆ ತೆರಿಗೆ ಪಾವತಿಗೆ ಆದಾಯ ಮಿತಿಯನ್ನು 6.5 ಲಕ್ಷ ರೂ.ವರೆಗೆ ಏರಿಕೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಪ್ರಸ್ತುತ ಇರುವ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಶಿಸಲಾಗಿದ್ದು, ಉಳಿತಾಯ ಯೋಜನೆಗಳ ಮೂಲಕ 1.5 ಲಕ್ಷದವರೆಗೆ ಹೂಡಿಕೆಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಒಟ್ಟು 6.5 ಲಕ್ಷ ರೂ.ವರೆಗೆ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಹಂಗಾಮಿ ಹಣಕಾಸು ಸಚಿವ ಪಿಯುಶ್ ಗೋಯಲ್ ಹೇಳಿದ್ದಾರೆ.


ಮುಖ್ಯಾಂಶಗಳು


  • ಪಿ.ಎಫ್‌ ಸೇರಿದಂತೆ 1.5 ಲಕ್ಷ ವರೆಗೂ ಉಳಿತಾಯ ಸೇರಿ 6.5 ಲಕ್ಷದವರೆಗೂ ತೆರಿಗೆ ವಿನಾಯತಿ

  • 2 ಲಕ್ಷದವರೆಗಿನ ಗೃಹ ಸಾಲಕ್ಕೆ ತೆರಿಗೆ ವಿನಾಯತಿ

  • ಸ್ಟಾಂಡರ್ಡ್ ಟ್ಯಾಕ್ಸ್ ಡಿಡಕ್ಷನ್ 40,000 ಕ್ಕೆ ಏರಿಕೆ 50,000

  • ಉಳಿತಾಯ ಯೋಜನೆಗಳ ಮೂಲಕ 1.5 ಲಕ್ಷದವರೆಗೆ ಹೂಡಿಕೆಗೆ ಅವಕಾಶ

  • ಸಣ್ಣ ಕೈಗಾರಿಕೆಗಳಿಗೆ ಶೇ.2 ರಷ್ಟು ಬಡ್ಡಿ ವಿನಾಯಿತಿ.

  • ಶೇ 5 ರಷ್ಟು ಇದ್ದ ತೆರಿಗೆಯನ್ನು ರದ್ದು ಗೊಳಿಸಿರುವುದಾಗಿ ಘೋಷಣೆ

  • ಮಧ್ಯಮ ವರ್ಗ ಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಇಲ್ಲ