ನವದೆಹಲಿ: ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಈ ವರ್ಷದ ಮಧ್ಯಂತರ ರೈಲ್ವೆ ಬಜೆಟ್ ಮಂಡಿಸಿದ್ದು, 64,587 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ದೇಶದ ಅತ್ಯುನ್ನತ ವೇಗದ 'ವಂದೇ ಭಾರತ್​ ಎಕ್ಸ್​ಪ್ರೆಸ್​' ರೈಲುಗಳು ಶೀಘ್ರದಲ್ಲಿಯೇ ಸಂಚಾರ ಆರಂಭಿಸಲಿವೆ. ಈ ರೈಲುಗಳನ್ನು ಭಾರತೀಯ ಇಂಜಿನಿಯರುಗಳೇ ಸಂಪೂರ್ಣವಾಗಿ ನಿರ್ಮಿಸಿರುವುದು ವಿಶೇಷವಾಗಿದೆ. ಅಲ್ಲದೆ, ಈ ವರ್ಷ ಭಾರತಿಯ ರೈಲ್ವೆಗೆ ಸುರಕ್ಷಿತ ವರ್ಷ ಎಂದಿರುವ ಹಂಗಾಮಿ ಹಣಕಾಸು ಸಚಿವ ಪಿಯುಶ್ ಗೋಯಲ್, ಪ್ರಸ್ತುತ ದೇಶದಲ್ಲಿ ಏಕೈಕ ಮಾನವರಹಿತ ಕ್ರಾಸಿಂಗ್ ಇಲ್ಲ ಎಂದಿದ್ದಾರೆ.


ಅಷ್ಟೇ ಅಲ್ಲದೆ, ಅಂತರಾಷ್ಟ್ರೀಯ ಸೌರ ಒಕ್ಕೂಟ(ISA)ದಲ್ಲಿ ಭಾರತವೂ ಸದಸ್ಯ ರಾಷ್ಟ್ರವಾಗಿರುವುದು ದೊಡ್ಡ ಸಾಧನೆಯಾಗಿದ್ದು, ದೇಶಕ್ಕೆ ಹೆಮ್ಮೆ ತರುವ ವಿಚಾರ ಎಂದು ಗೋಯಲ್ ಹೇಳಿದ್ದಾರೆ.