ನವದೆಹಲಿ:  2019 ರ ಬಜೆಟ್ ಅನ್ನು ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಜೆಟ್ ನ ವಿಶೇಷವೆಂದರೆ ಮಹಿಳೆರೊಬ್ಬರು ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದಾರೆ.ಬಜೆಟ್ ಭಾಷಣದ ವೇಳೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಪ್ರಸಕ್ತ ವರ್ಷದಲ್ಲಿ ಭಾರತವು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದರು.


ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗಿರುವ ಹಿನ್ನಲೆಯಲ್ಲಿ ಎಂದಿನಂತೆ ಪೆಟ್ರೋಲ್ ಡಿಸೇಲ್ ತುಟ್ಟಿಯಾಗಿದೆ. ಇನ್ನೊಂದೆಡೆ ಎಲೆಕ್ಟ್ರಾನಿಕ್ಸ್ ವಸ್ತುಗಳು ಅಗ್ಗವಾಗಿವೆ. ಈ ಕೆಳಗೆ ಅಗ್ಗವಾಗಿರುವ ಮತ್ತು ದುಬಾರಿಯಾಗಿರುವ ವಸ್ತುಗಳ ಪಟ್ಟಿ ನೀಡಲಾಗಿದೆ. 


ದುಬಾರಿ:


ಪೆಟ್ರೋಲ್
ಡೀಸೆಲ್
ಚಿನ್ನ
ಆಮದು ಮಾಡಿದ ಪುಸ್ತಕಗಳು
ಡಿಜಿಟಲ್ ಕ್ಯಾಮರಾ
ಗೋಡಂಬಿ
ಆಪ್ಟಿಕಲ್ ಫೈಬರ್ಗಳು


ಅಗ್ಗ:


ಎಲೆಕ್ಟ್ರಾನಿಕ್ ವಸ್ತುಗಳು
ಎಲೆಕ್ಟ್ರಿಕ್ ವಾಹನಗಳು