ನವದೆಹಲಿ:ಪ್ರಧಾನ ಮಂತ್ರಿ ಮೋದಿ ರಕ್ಷಿಸುವ ಕಾರ್ಯದಲ್ಲಿರುವ ಎಸ್‌ಪಿಜಿಗೆ ಕೇಂದ್ರ ಬಜೆಟ್ ನಲ್ಲಿ ಕಳೆದ ಬಾರಿಯ ಸುಮಾರು 540 ಕೋಟಿಯಿಂದ ಈ ಬಾರಿ 600 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಇದನ್ನು 420 ಕೋಟಿಯಿಂದ ಅಂದಾಜು 540 ಕೋಟಿಗೆ ಹೆಚ್ಚಿಸಲಾಗಿತ್ತು. ಪ್ರಸ್ತುತ 3000 ಬಲಿಷ್ಠ ವಿಶೇಷ ಭದ್ರತಾ ಗುಂಪಿನಿಂದ ರಕ್ಷಿಸಲ್ಪಟ್ಟ ಏಕೈಕ ವ್ಯಕ್ತಿ ಪ್ರಧಾನಿ ಮೋದಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ವರ್ಷ ನವೆಂಬರ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮೂವರ ಭದ್ರತೆಯನ್ನು ಪರಿಷ್ಕರಿಸಲಾಯಿತು ಮತ್ತು ಎಸ್‌ಪಿಜಿ ರಕ್ಷಣೆಯನ್ನು ಹಿಂಪಡೆಯಲಾಯಿತು. ಗಾಂಧಿ ಕುಟುಂಬವು ಹಲವಾರು ಭದ್ರತಾ ಪ್ರೋಟೋಕಾಲ್ ಉಲ್ಲಂಘನೆಗಳನ್ನು ಸರ್ಕಾರದ ಮೂಲಗಳು ಸೂಚಿಸಿವೆ. ರಾಹುಲ್ ಗಾಂಧಿ, ಪ್ರತಿದಿನ ಒಂದು ಭದ್ರತಾ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎಸ್‌ಪಿಜಿಯನ್ನು ಆಗಸ್ಟ್‌ನಲ್ಲಿ ಹಿಂಪಡೆಯಲಾಯಿತು. ಇದಕ್ಕೂ ಮೊದಲು ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ.ದೇವೇಗೌಡ ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಒಂದು ವರ್ಷದ ನಂತರ 1985 ರಲ್ಲಿ ಎಸ್‌ಪಿಜಿ ಸ್ಥಾಪಿಸಲಾಯಿತು. ಪ್ರಧಾನ ಮಂತ್ರಿಗಳನ್ನು ರಕ್ಷಿಸುವ ಕಾರ್ಯವನ್ನು ಈ ಪಡೆಗೆ ವಹಿಸಲಾಯಿತು.


1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ, ಎಸ್‌ಪಿಜಿ ರಕ್ಷಣೆಯನ್ನು ಇಡೀ ಕುಟುಂಬಕ್ಕೆ ವಿಸ್ತರಿಸಲಾಯಿತು.1999 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಎಸ್‌ಪಿಜಿಯ ಕಾರ್ಯಾಚರಣೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಮಾಜಿ ಪ್ರಧಾನ ಮಂತ್ರಿಗಳಾದ ಪಿ.ವಿ.ನರಸಿಂಹ ರಾವ್, ಎಚ್.ಡಿ.ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ಅವರ ರಕ್ಷಣೆಯನ್ನು ಹಿಂತೆಗೆದುಕೊಂಡಿತು.


2003 ರಲ್ಲಿ, ವಾಜಪೇಯಿ ಸರ್ಕಾರವು ಸ್ವಯಂಚಾಲಿತ ರಕ್ಷಣೆಯ ಕನಿಷ್ಠ ಅವಧಿಯನ್ನು 10 ವರ್ಷದಿಂದ ಒಂದಕ್ಕೆ ತರುವಂತೆ ಕಾನೂನನ್ನು ತಿದ್ದುಪಡಿ ಮಾಡಿತು, ಇದನ್ನು ವಾರ್ಷಿಕವಾಗಿ ಪರಿಷ್ಕರಿಸಬಹುದು ಮತ್ತು ಬೆದರಿಕೆ ಮಟ್ಟವನ್ನು ಅವಲಂಬಿಸಿ ವಿಸ್ತರಿಸಬಹುದು.ಅಟಲ್ ಬಿಹಾರಿ ವಾಜಪೇಯಿ ಅವರು 2018 ರವರೆಗೂ ಎಸ್‌ಪಿಜಿ ಕವರ್ ಹೊಂದಿದ್ದರು.