ನವದೆಹಲಿ : ಕೇಂದ್ರ ಬಜೆಟ್ ಅಧಿವೇಶನ ಜನವರಿ 29 ರಿಂದ ಆರಂಭವಾಗಲಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಫೆ.1 ರಂದು 2018-19ರ ಆರ್ಥಿಕ ವರ್ಷಕ್ಕೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಹೆಚ್ಚುವರಿ ವೆಚ್ಚದ ಮೂಲಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಜೇಟ್ಲಿ ಹೊಂದಿದ್ದಾರೆ. 


COMMERCIAL BREAK
SCROLL TO CONTINUE READING

ಏಷ್ಯಾದ ಮೂರನೆಯ ಅತಿದೊಡ್ಡ ಆರ್ಥಿಕತೆಯ ಮೇಲೆ ಬ್ರೇಕ್ಗಳನ್ನು ಹೇರಿರುವ ಸರಕು ಮತ್ತು ಸೇವೆಗಳ ತೆರಿಗೆ (GST) ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರಕ್ಕೆ ತೆಗೆದುಕೊಂಡ ಕೆಲ ತಿಂಗಳ ನಂತರ 2018ರ ಬಜೆಟ್ ಮಂಡನೆಯಾಗುತ್ತಿದೆ. 


ಜ.29 ಕ್ಕೆ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಏಪ್ರಿಲ್‌ 6ರ ವರೆಗೆ ನಡೆಯಲಿದೆ. ಅಧಿವೇಶನದ ಮೊದಲ ಹಂತ ಜನವರಿ 29ರಿಂದ ಫೆಬ್ರವರಿ 9ರ ವರೆಗೆ ಮತ್ತು ಎರಡನೇ ಹಂತ ಮಾರ್ಚ್‌ 5ರಿಂದ ಏಪ್ರಿಲ್‌ 6ರ ವರೆಗೆ ನಡೆಯಲಿದೆ.