ನವ ದೆಹಲಿ : ಏಷ್ಯಾದ ಅತೀ ಉದ್ದದ ಎರಡು ದಿಕ್ಕಿನ ಜೋಜಿಲಾ ಪಾಸ್ ಸುರಂಗ ನಿರ್ಮಾಣಕ್ಕೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದು ಶ್ರೀನಗರ ಮತ್ತು ಲೇಹ್ ನಡುವಿನ ಜೋಜಿಲಾ ಪಾಸ್ ಪ್ಯಾಚ್ನಲ್ಲಿ 3.5 ಗಂಟೆಗಳ ಪ್ರಯಾಣದ ಸಮಯವನ್ನು ಕೇವಲ 15 ನಿಮಿಷಗಳಿಗೆ ಕಡಿಮೆ ಮಾಡಲಿದೆ. 


COMMERCIAL BREAK
SCROLL TO CONTINUE READING

ಈ ಯೋಜನೆಯ ಪ್ರಮುಖ ಅಂಶಗಳು ಈ ರೀತಿ ಇವೆ : 


- ಜೋಜಿಲಾ ಪಾಸ್ ಶ್ರೀನಗರ-ಕಾರ್ಗಿಲ್-ಲೆಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ 11,578 ಅಡಿ ಎತ್ತರದಲ್ಲಿದೆ. ಈ ಮಾರ್ಗವು ಚಳಿಗಾಲದಲ್ಲಿ (ಡಿಸೆಂಬರ್ನಿಂದ ಏಪ್ರಿಲ್ ವರೆಗೆ) ಕಾಶ್ಮಿರದ ಲೇಹ್-ಲಡಾಕ್ ಪ್ರದೇಶದಲ್ಲಿ ಹಿಮಪಾತ ಮತ್ತು ಹಿಮಕುಸಿತ ಉಂಟಾಗುವುದರಿಂದ ಮುಚ್ಚಲ್ಪಟ್ಟಿರುತ್ತದೆ. 


- ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ, ಶ್ರೀನಗರ-ಲೇಹ್ ವಿಭಾಗವನ್ನು ಸಂಪರ್ಕಿಸುವ ಮಾರ್ಗವನ್ನು ಹೊರತುಪಡಿಸಿ ಸಮಾನಾಂತರ ಎಸ್ಕೇಪ್ (ಎಗ್ರೆಸ್) ಟನಲ್ನ 2-ಲೇನ್ ದ್ವಿ ದಿಕ್ಕಿನ ಜೋಜಿಲಾ ಸುರಂಗ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ತನ್ನ ಅನುಮೋದನೆಯನ್ನು ನೀಡಿದೆ. 


- ಸುರಂಗ ನಿರ್ಮಾಣದಿಂದಾಗಿ ಶ್ರೀನಗರ, ಕಾರ್ಗಿಲ್ ಮತ್ತು ಲೇಹ್ ನಡುವಿನ ಎಲ್ಲಾ ಮಾರ್ಗಗಳಿಗೂ ಎಲ್ಲ ಹವಾಮಾನದಲ್ಲಿಯೂ ಸಂಪರ್ಕ ದೊರೆಯಲಿದ್ದು, ಈ ಪ್ರದೇಶಗಳ ಎಲ್ಲಾ-ಸುತ್ತಿನ ಆರ್ಥಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಏಕೀಕರಣವನ್ನು ತರುತ್ತದೆ.


- ಈ ಯೋಜನೆಯ ನಿರ್ಮಾಣದ ಅವಧಿಯು ಏಳು ವರ್ಷಗಳಾಗಿದ್ದು, ಅದು ನಿರ್ಮಾಣದ ಪ್ರಾರಂಭದ ದಿನಾಂಕದಿಂದ ಅನ್ವಯಿಸಲಿದೆ. ಯೋಜನೆಯ ನಿರ್ಮಾಣ ವೆಚ್ಚ 4,899.42 ಕೋಟಿ ರೂಪಾಯಿಗಳಾಗಿವೆ.


- ಯೋಜನೆಯ ಒಟ್ಟು ಬಂಡವಾಳ ವೆಚ್ಚ ರೂ. 6,808.69 ಕೋಟಿ. ಇದು ಭೂ ಸ್ವಾಧೀನ, ಪುನರ್ವಸತಿ ಮತ್ತು ಇನ್ನಿತರ ಪೂರ್ವ-ನಿರ್ಮಾಣ ಚಟುವಟಿಕೆಗಳು ಮತ್ತು ಸುರಂಗದ ನಿರ್ವಹಣೆ ಮತ್ತು ಕಾರ್ಯಾಚರಣೆಯ ವೆಚ್ಚದ ನಾಲ್ಕು ವರ್ಷಗಳ ಕಾಲದ ವೆಚ್ಚವನ್ನು ಒಳಗೊಂಡಿದೆ.


- ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಮುಖ ಲೆಹ್ ಪ್ರದೇಶಕ್ಕೆ ಹವಾಮಾನದ ಕಾರಣದಿಂದಾಗಿ, ವರ್ಷದಲ್ಲಿ ಕೇವಲ ಆರು ತಿಂಗಳಿಗೆ ಮಾತ್ರ ಸೀಮಿತವಾಗಿದ್ದ ಈ ಮಾರ್ಗಕ್ಕೆ ಇದೀಗ ಎಲ್ಲ ಹವಾಮಾನದಲ್ಲಿಯೂ ಸಂಪರ್ಕವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 


- ಕಾರ್ಯಾಚರಣೆಯ ನಂತರ, ಸುರಂಗವು ಮೂರು ಗಂಟೆಗಳ ಪ್ರಯಾಣದ ಸಮಯವನ್ನು ಕಡಿತಗೊಳಿಸಲಿದ್ದು, ಈ ಪ್ರದೇಶದ ಎಲ್ಲಾ-ಆರ್ಥಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಏಕೀಕರಣವನ್ನು ಸಹ ತರುತ್ತದೆ. ಸುಮಾರು 20 ವರ್ಷಗಳಿಂದ ಚರ್ಚೆಯಲ್ಲಿಯೇ ಉಳಿದಿದ್ದ ಈ ಯೋಜನೆಗೆ ಈ ಜಾರಿಯಾಗುವ ಭಾಗ್ಯ ದೊರೆತಿದೆ. 


- ಸರ್ಕಾರದ ಪ್ರಕಾರ, ಈಗಾಗಲೇ ನಾಲ್ಕು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ  ಕೆಲವು ತಾಂತ್ರಿಕ ಮತ್ತು ಹಣಕಾಸಿನ ಅರ್ಹತೆಗಳನ್ನು ಸರ್ಕಾರ ಸಡಿಲಿಸಿದ ನಂತರವೇ ಗುತ್ತಿಗೆದಾರರು ಆಸಕ್ತಿಯನ್ನು ತೋರಿಸಿದ್ದಾರೆ ಎನ್ನಲಾಗಿದೆ. 


- ಈ ಯೋಜನೆಯೊಂದಿಗೆ ಈಗಾಗಲೇ ಗಾಗಂಗೀರ್ನಲ್ಲಿ ಆರಂಭವಾಗಿರುವ 6.5 ಕಿ.ಮೀ ಉದ್ದದ ಝ್-ಮೊಹ್ಹ್ ಸುರಂಗ ಮಾರ್ಗ ಯೋಜನೆಯು ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳ ನಡುವೆ ಸುರಕ್ಷಿತ, ವೇಗದ ಮತ್ತು ಅಗ್ಗದ ಸಂಪರ್ಕವನ್ನು ಕಲ್ಪಿಸುತ್ತದೆ.


- ಯೋಜನೆಯು 14.15 ಕಿ.ಮೀ ಉದ್ದದ ಎರಡು-ಲೇನ್ ದ್ವಿ-ದಿಕ್ಕಿನ ಸಿಂಗಲ್ ಟ್ಯೂಬ್ ಸುರಂಗವನ್ನು 14.2 ಕಿ.ಮೀ. ಉದ್ದದ ಹೊರದಾರಿ ಸುರಂಗದೊಂದಿಗೆ ರಾಜ್ಯದಲ್ಲಿ ಬಾಲ್ಟಾಲ್ ಮತ್ತು ಮಿನಮಾರ್ಗ್ ನಡುವಿನ ಮಾರ್ಗಗಳನ್ನು ಹೊರತುಪಡಿಸಿ ನಿರ್ಮಿಸುವ ಗುರಿ ಹೊಂದಿದೆ.