ನವದೆಹಲಿ: ದಲಿತ ಸಂಘಟನೆಗಳು 9 ರಂದು ರಾಷ್ಟ್ರಾದ್ಯಂತ ಬಂದ್ ನೀಡುವ ಹಿನ್ನಲೆಯಲ್ಲಿ ಬುಧವಾರದಂದು ಕೇಂದ್ರ ಸಚಿವ ಸಂಪುಟ ಸಂಸತ್ತಿನಲ್ಲಿ ನಡೆಯುವ ಮಾನ್ಸೂನ್ ಅಧಿವೇಶನದಲ್ಲಿ ಪ.ಜಾತಿ ಮತ್ತು ಪ.ಪಂಗಡ (ಹಲ್ಲೆ ತಡೆಗಟ್ಟುವಿಕೆ )ಮಸೂದೆಯನ್ನು ಕಾಯ್ದೆ ಮೂಲ ನಿಬಂಧನೆಗಳನ್ವಯ ಪುನಃಸ್ಥಾಪಿಸಲು ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಈ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ದಲಿತ ಸಂಘಟನೆಗಳು ಮತ್ತು ಎಲ್ಜೆಪಿ (ಲೋಕ ಜನಶಕ್ತಿ ಪಾರ್ಟಿ) ಪಕ್ಷವು ಕೇಂದ್ರ ಸರ್ಕಾರಕ್ಕೆ ಗಡುವನ್ನು ನೀಡಿತ್ತು.  ಈ ಹಿನ್ನಲೆಯಲ್ಲಿ ಈಗ ದಲಿತ ಸಂಘಟನೆಗಳ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಈ ಹಿಂದಿನ ಕಾಯ್ದೆಯನ್ನೇ ಮುಂದುವರೆಸಿಕೊಂಡು ಹೋಗುವ ನಿರ್ಧಾರವನ್ನು ಬಂಧಿದೆ.


ಬಿಜೆಪಿ ಮೈತ್ರಿ ಪಕ್ಷವಾಗಿರುವ ಲೋಕ ಜನಶಕ್ತಿ ಪಕ್ಷವು ಮತ್ತು ದಲಿತ ಸಂಘಟನೆಗಳು ಈ ವಿಚಾರವಾಗಿ ಆಗಸ್ಟ್ 9 ರಂದು  'ಭಾರತ್ ಬಂಧ್' ಗೆ ಕರೆ ನೀಡಿದ್ದವು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್ಜಿಟಿ) ಅಧ್ಯಕ್ಷರಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಕೆ. ಗೋಯಲ್ ನೇಮಕಕ್ಕೆ ಸಹ ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. 


ಸುಪ್ರೀಂ ಕೋರ್ಟ್ ಮಾರ್ಚ್ 20 ರ ತೀರ್ಪಿನಲ್ಲಿ ಎಸ್ಸಿ / ಎಸ್ಟಿ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತಕ್ಷಣ ಬಂಧನಕ್ಕೊಳಪಡುವ ಅಂಶವನ್ನು ರದ್ದುಪಡಿಸಿತ್ತು. ಈ  ಕಾಯ್ದೆ ಪ್ರಮುಖವಾಗಿ ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಹಲ್ಲೆಗಳಂತಹ ಘಟನೆಗಳಿಂದ ರಕ್ಷಿಸಲಿದೆ.