ಇನ್ಮುಂದೆ 24ನೇ ವಾರದಲ್ಲಿಯೂ ಕೂಡ ಗರ್ಭಪಾತ ಮಾಡಿಸಬಹುದು
6 ತಿಂಗಳ ಅವಧಿಯ ಬಳಿಕ ಗರ್ಭಪಾತ ಮಾಡಿಸಬೇಕಾದರೆ ಇಬ್ಬರು ವೈದ್ಯರ ಅನುಮತಿ ಪಡೆಯಬೇಕು. ಇವರಲ್ಲಿ ಒಬ್ಬರು ಸರ್ಕಾರಿ ವೈದ್ಯರಾಗಿರುವುದು ಅನಿವಾರ್ಯವಾಗಿದೆ.
ನವದೆಹಲಿ: ಕೇಂದ್ರ ಸರ್ಕಾರ ಇಂದು ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನನ್ಸಿ ಕಾಯ್ದೆ (ತಿದ್ದುಪಡಿ) 1971ಕ್ಕೆ ಮಂಜೂರಾತಿ ನೀಡಿದೆ. ಇದರ ಅಡಿ ಗರ್ಭಪಾತದ ಗರಿಷ್ಠ ಅವಧಿಯನ್ನು 20ರಿಂದ 24 ವಾರಗಳಿಗೆ ಹೆಚ್ಚಿಸಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಕಾಶ ಜಾವಡೆಕರ್, "ಮಹಿಳೆಯರ ಆಗ್ರಹ, ವೈದ್ಯರ ಶಿಫಾರಸ್ಸು ಹಾಗೂ ನ್ಯಾಯಾಲಯದ ಆಗ್ರಹದ ಮೇಲೆ ಸರ್ಕಾರ 2014ರಿಂದ ಎಲ್ಲ ಮಧ್ಯವರ್ತಿಗಳ ಜೊತೆ ಚರ್ಚೆ ನಡೆಸಿ. ಕೇಂದ್ರ ಸಚಿವ ನಿತಿನ್ ಗಡಕರಿ ಅಧ್ಯಕ್ಷತೆಯಲ್ಲಿ ಸಚಿವರ ತಂಡವೊಂದು ರಚಿಸಿ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಇದಕ್ಕೆ ಮಂಜೂರಾತಿ ನೀಡಿದ್ದು, ಇದೀಗ ಈ ಕಾಯ್ದೆ ಉಭಯ ಸದನಗಳಲ್ಲಿ ಮಂಡಿಸಲಾಗುವುದು ಎಂದಿದ್ದಾರೆ.
ಇದಕ್ಕೂ ಮೊದಲು 20 ತಿಂಗಳ ಅವಧಿಯವರೆಗಿನ ಭ್ರೂಣವನ್ನು ತೆಗೆದು ಹಾಕಲು ಅಧಿಕೃತ ಅನುಮತಿ ಇತ್ತು. ಇದೀಗ ಈ ಅವಧಿಯನ್ನು 24 ವಾರಗಳ (6 ತಿಂಗಳು)ವರೆಗೆ ಹೆಚ್ಚಿಸಲಾಗಿದೆ. ಆರು ತಿಂಗಳ ಅವಧಿಯ ಭ್ರೂಣದ ಗರ್ಭಪಾತ ನಡೆಸಲು ಇಬ್ಬರು ವೈದ್ಯರ ಅನುಮತಿ ಬೇಕಾಗಲಿದ್ದು, ಇದರಲ್ಲಿ ಒಬ್ಬರು ಸರ್ಕಾರಿ ವೈದ್ಯರಾಗಿರುವುದು ಅನಿವಾರ್ಯವಾಗಿದೆ. ಮಹಿಳೆಯರ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ವಿಶ್ವದ ಅತ್ಯಂತ ಕಡಿಮೆ ದೇಶಗಳಲ್ಲಿ ಈ ರೀತಿಯ ಕಾನೂನು ಜಾರಿಯಲ್ಲಿದ್ದು, ಇದೀಗ ಭಾರತ ಕೂಡ ಈ ದೇಶಗಳ ಪಟ್ಟಿಯಲ್ಲಿ ಶಾಮೀಲಾಗಿದೆ.
ಇದನ್ನು ಹೊರತುಪಡಿಸಿ ಕೇಂದ್ರ ಸಚಿವ ಸಂಪುಟ ಇಂದು ಮತ್ತೊಂದು ಮಹತ್ವದ ನಿರ್ಣಯಕ್ಕೆ ಹಸಿರು ನಿಶಾನೆ ತೋರಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವರು ಭಾರತದ ಎಲ್ಲ ಬಂದರುಗಳಲ್ಲಿ ಕಾರ್ಯನಿರತರಾಗಿರುವ ಸುಮಾರು 28,000 ಜನರಿಗೆ ಬೋನಸ್ ಗೆ ಬದಲಾಗಿ ಪ್ರಾಡಕ್ಟಿವಿಟಿ ಲಿಂಕ್ ರಿವಾರ್ಡ್ ಸಿಗುತ್ತಿತ್ತು ಮತ್ತು ಈ ಯೋಜನೆ 2017-18ರಲ್ಲಿ ಮುಕ್ತಾಯಗೊಂಡಿತ್ತು. ಈ ಯೋಜನೆಯನ್ನೂ ಸಹ ಇದೀಗ ಮುಂದುವರೆಸಲಾಗುತ್ತಿದ್ದು, ಹಡಗುಗಳ ಲಾಭ ಮತ್ತು ನಷ್ಟಗಳನ್ನು ಆಧರಿಸಿ ರಿವಾರ್ಡ್ ನೀಡಲು ನಿರ್ಧರಿಸಲಾಗಿದೆ. ಇದರಿಂದ ಎಲ್ಲ ಕಾರ್ಮಿಕರಿಗೆ ಲಾಭ ಉಂಟಾಗಲಿದೆ. ಅಷ್ಟೇ ಅಲ್ಲ ಎಲ್ಲ 28 ಸಾವಿರ ಕಾರ್ಮಿಕರ ಬೋನಸ್ ಕೂಡ ಹೆಚ್ಚಿಸಲಾಗಿದೆ. ಅಂದರೆ, 7 ಸಾವಿರವರೆಗೆ ವೇತನ ಪಡೆಯುವ ಕಾರ್ಮಿಕರಿಗೆ 13ಸಾವಿರ ಬೋನಸ್ ಸಿಗಲಿದೆ.
ಕೇಂದ್ರ ಸಚಿವ ಸಂಪುಟ ಕೈಗೊಂಡ ಮತ್ತೊಂದು ಮಹತ್ವದ ನಿರ್ಣಯದ ಪ್ರಕಾರ ಈಶಾನ್ಯ ರಾಜ್ಯಗಳ ಒಟ್ಟು ಬಜೆಟ್ ನ ಶೇ.30 ರಷ್ಟು ಬಜೆಟ್ ಅನ್ನು ನಿರ್ಲಕ್ಷಕ್ಕೆ ಒಳಗಾದ ಕ್ಷೇತ್ರ ಹಾಗೂ ನಿರ್ಲಕ್ಷಕ್ಕೆ ಒಳಗಾದ ವರ್ಗಕ್ಕೆ ಮೀಸಲಿರಿಸಲಾಗಿದೆ. ಇದರಿಂದ ವ್ಯವಸ್ಥೆ ಸರಳೀಕರಣಗೊಳ್ಳಲಿದ್ದು, ಕೆಲಸದ ಗತಿಯಲ್ಲಿಯೂ ಕೂಡ ವೃದ್ಧಿಯಾಗಿ, ಅಭಿವೃದ್ಧಿಯ ಅವಕಾಶಗಳು ಹೆಚ್ಚಾಗಲಿವೆ. ಇದುವರೆಗೆ ಕೇಂದ್ರ ಸರ್ಕಾರ ಕೌನ್ಸಿಲ್ ನ ಶೇ.90ರಷ್ಟು ಭಾಗವನ್ನು ಈಶಾನ್ಯ ರಾಜ್ಯಗಳಿಗೆ ನೀಡುತ್ತಿತ್ತು. ಇನ್ಮುಂದೆ ಇದರಲ್ಲಿನ ಶೇ.30ರಷ್ಟು ಭಾಗ ನಿರ್ಲಕ್ಷಕ್ಕೆ ಒಳಗಾಗಿರುವ ಪ್ರದೇಶಗಳ ಅಭಿವೃದ್ಧಿಗಾಗಿ ಬಳಸಲಾಗುವುದು. ಇದನ್ನು ಹೊರತುಪಡಿಸಿ ಆಯುರ್ವೇದ, ಯುನಾನಿ ಹಾಗೂ ಸಿದ್ಧ ಚಿಕಿತ್ಸಾ ಪ್ರಕ್ರಿಯೆಗಳಿಗೆ ಆಯೋಗ ಕೂಡ ರಚಿಸಲಾಗುವುದು.