ನವದೆಹಲಿ: ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ಹಿಂದಿ ಹೇರುವ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಬದಲಾಗಿ ತಮಿಳು ಭಾಷೆಯನ್ನೂ ಉತ್ತೇಜಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಅಂತಹ ಕೆಲಸಗಳನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೆ ಅಥವಾ ಇಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಬಹುದು, ಆದರೆ ಅದು ಭಾಷೆಯ ಹೇರಿಕೆ ಎಂಬ ತೀರ್ಮಾನಕ್ಕೆ ಹೋಗಬಾರದು' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.


"ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುವುದಿಲ್ಲ. ಎಲ್ಲೋ, ಆಡಳಿತಾತ್ಮಕ ಮಟ್ಟದಲ್ಲಿ, ಏನಾದರೂ ಸಂಭವಿಸಿದಲ್ಲಿ, ಅದು ಹೇರಿಕೆಯಾಗಿದೆ ಎಂಬ ತೀರ್ಮಾನಕ್ಕೆ ಬರಬೇಡಿ. ಖಂಡಿತವಾಗಿಯೂ ಯಾವುದೇ ಹೇರಿಕೆ ಇಲ್ಲ. ನಾವು ತಮಿಳು ಅಭಿವೃದ್ಧಿಯಲ್ಲಿಯೂ ತೊಡಗಿಸಿಕೊಂಡಿದ್ದೇವೆ" ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ಏಕ್ ಭಾರತ ಶ್ರೇಷ್ಠ ಭಾರತ ಯೋಜನೆ ಭಾಗವಾಗಿ ದೇಶದ ಉತ್ತರದ ರಾಜ್ಯಗಳಲ್ಲಿ ತಮಿಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಅವರು ಹೇಳಿದರು.


ಈ ಹಿಂದೆ ಕಳೆದ ವಾರ ನಡೆದ ಗ್ರಾಮೀಣ ಪ್ರದೇಶಗಳಲ್ಲಿ ಪೋಸ್ಟ್‌ಮ್ಯಾನ್ ಮತ್ತು ಸಹಾಯಕರ ನೇಮಕಾತಿಗಾಗಿ ನಡೆದ ಅಂಚೆ ಇಲಾಖೆಯ ಪರೀಕ್ಷೆಯಲ್ಲಿನ ಪ್ರಶ್ನೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಇದ್ದವು, ಆದರೆ ತಮಿಳು ಅಲ್ಲ ಇರಲಿಲ್ಲ.ಈ ಹಿನ್ನಲೆಯಲ್ಲಿ ಪತ್ರಕರ್ತರು ಸಚಿವರಿಗೆ ಹಿಂದಿ ಹೇರಿಕೆ ಬಗ್ಗೆ ಪ್ರಶ್ನಿಸಿದರು.ಆದರೆ ಇದಕ್ಕೆ ಉತ್ತರಿಸಿದ ಅವರು ಯಾವುದೇ ರೀತಿ ಹಿಂದಿ ಹೇರಿಕೆ ಇಲ್ಲವೆಂದು ಸ್ಪಷ್ಟಪಡಿಸಿದರು.