ನವದೆಹಲಿ:  ಇಂದು ಹಿಂದಿ ದಿವಸ್ ಆಚರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತೆ ಏಕ ಭಾಷೆ ಪ್ರತಿಪಾದನೆ ಮೂಲಕ ಹಿಂದಿ ಹೇರಿಕೆಗೆ ಮುಂದಾಗಿದೆ.


COMMERCIAL BREAK
SCROLL TO CONTINUE READING

ಈಗ ಇದಕ್ಕೆ ಪೂರಕ ಎನ್ನುವಂತೆ ಕೇಂದ್ರ ಗೃಹ ಸಚಿವ ಟ್ವೀಟ್ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ನೂತನ ಶಿಕ್ಷಣ ನೀತಿ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ಕೇಂದ್ರ ಸರ್ಕಾರದ ಹಿಂದಿ ಪ್ರಾಬಲ್ಯ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದೇ ಬೆನ್ನಲ್ಲೇ ಈಗ ಕೇಂದ್ರ ಗೃಹ ಸಚಿವರು ಮತ್ತೆ ಹಿಂದಿಗೆ ಹೆಚ್ಚಿನ ಮಣೆ ಹಾಕುತ್ತಿರುವುದು ನೋಡಿದಲ್ಲಿ ಕೇಂದ್ರ ಸರ್ಕಾರ ಹಿಂದಿ ಪರವಾದ ಧೋರಣೆಯನ್ನು ತಾಳಿದೆ ಎಂದು ಹೇಳಬಹುದು.



ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ' ಭಾರತ ದೇಶದವು ಹಲವು ವಿಭಿನ್ನ ಭಾಷೆಗಳನ್ನು ಹೊಂದಿದೆ, ಪ್ರತಿ ಭಾಷಣೆ ತನ್ನದೇ ಆದ ಮಹತ್ವವನ್ನು ಹೊಂದಿದೆ,ಆದರೆ  ಈ ಸಂದರ್ಭದಲ್ಲಿ ಭಾರತದ ಅಸ್ಮಿತೆಯನ್ನು ಜಾಗತಿಕವಾಗಿ ಗುರುತಿಸಲು ಒಂದು ಸಾಮಾನ್ಯ ಭಾಷೆಯನ್ನು ಹೊಂದುವುದು ಅಗತ್ಯವಾಗಿದೆ. ಇಂದು ಯಾವುದಾದರೂ ಒಂದು ಭಾಷೆ ದೇಶವನ್ನು ಒಗ್ಗೂಡಿಸುತ್ತಿದ್ದಲ್ಲಿ ಅದೂ ಹಿಂದಿ ಭಾಷೆ ಮಾತ್ರ, ಈ ಭಾಷೆ ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಮತ್ತು ಅರ್ಥೈಸಿಕೊಳ್ಳುವ ಭಾಷೆಯಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.


ಈಗ ಕೇಂದ್ರ ಸರ್ಕಾರದ ಈ ನಡೆಗೆ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಹಿಂದೆ ಬೆಂಗಳೂರಿನಲ್ಲಿ  ಹಿಂದಿ ಬೇಡ ಎನ್ನುವ ಚಳುವಳಿ ನಡೆದಿದ್ದಲ್ಲದೆ ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಫಲಕವನ್ನು ಅಳವಡಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.