ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಕುರಿತು ಖುದ್ದು ಅವರೇ ಭಾನುವಾರ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ತನ್ನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ, ವೈಸ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಯಾರೇ ನನ್ನ ಸಂಪರ್ಕಕ್ಕೆ ಬಂದಿದ್ದರೂ ಕೂಡ ಅವರು ತಮ್ಮ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 



COMMERCIAL BREAK
SCROLL TO CONTINUE READING

ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೋನಾ ಪಾಸಿಟಿವ್ ಎಂಬ ಸುದ್ದಿ ತಿಳಿಯುತ್ತಲೇ ಇಡೀ ದೇಶದಲ್ಲಿ ಅವರಿಗಾಗಿ ಪ್ರಾರ್ಥನೆಗಳು ಆರಂಭಗೊಂಡಿವೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶೀಘ್ರದಲ್ಲೇ ಆರೋಗ್ಯವಾಗಲಿ ಎಂದು ಹಾರೈಸಿದ್ದಾರೆ.



ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಗೃಹ ಸಚಿವ ಅಮಿತ್ ಶಾ ಅವರು ಶೀಘ್ರವಾಗಿ ಆರೋಗ್ಯವಾಗಲಿ ಎಂದು ಹಾರೈಸಿದರು. ಈ ಕುರಿತು ಬರೆದುಕೊಂಡಿರುವ ಅವರು, "ಅಮಿತ ಜೀ ಪ್ರತಿಯೊಂದು ಸವಾಲಿನ ವಿರುದ್ಧ ನಿಮ್ಮ ದೃಢತೆ ಹಾಗೂ ಇಚ್ಚಾಶಕ್ತಿ ಒಂದು ಉದಾಹರಣೆಯಾಗಿದೆ. ಕರೋನಾ ವೈರಸ್ ನ ಈ ದೊಡ್ಡ ಸವಾಲನ್ನು ನೀವು ಖಂಡಿತವಾಗಿ ಪರಿಹರಿಸಲಿದ್ದೀರಿ. ನಾನು ಅದನ್ನು ನಂಬುತ್ತೇನೆ. ನೀವು ಆದಷ್ಟು ಬೇಗ ಆರೋಗ್ಯವಾಗಿರಬೇಕು, ಇದು ದೇವರ ಬಳಿ ನನ್ನ ಪ್ರಾರ್ಥನೆಯಾಗಿದೆ" ಎಂದು ಬರೆದಿದ್ದಾರೆ.



ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡ ಟ್ವೀಟ್ ಮಾಡುವ ಮೂಲಕ "ನೀವು ಆದಷ್ಟು ಬೇಗ ಗುಣಮುಖರಾಗಿ, ಮತ್ತೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಬೇಕೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಕರೋನಾವನ್ನು ಸೋಲಿಸುವಲ್ಲಿ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ ಎಂದು ನಾನು ದೃಢವಾಗಿ ನಂಬುತ್ತೇನೆ" ಎಂದಿದ್ದಾರೆ.