ನವದೆಹಲಿ: ಕೇಂದ್ರದ ಪ್ರಧಾನಿ ಮೋದಿ ಸರ್ಕಾರ 34 ವರ್ಷಗಳ ನಂತರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿ ಹೇಗೆ, ಅದು ವಿದ್ಯಾರ್ಥಿಗಳಿಗೆ ಎಷ್ಟು ಉಪಯುಕ್ತವಾಗಲಿದೆ ಮತ್ತು ಭವಿಷ್ಯದಲ್ಲಿ ಅವರಿಗೆ ಎಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂಬ ವಿಷಯದ ಬಗ್ಗೆ ಮಾತನಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ (Prakash Javadekar), ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪ್ರತಿ ಮನೆಯಲ್ಲೂ ಶಿಕ್ಷಣ ಮುಖ್ಯವಾಗಿದೆ ಏಕೆಂದರೆ ಪ್ರತಿ ಮನೆಯಲ್ಲೂ ಯಾರಾದರೂ ಕಲಿಯುತ್ತಲೇ ಇರುತ್ತಾರೆ. ಪ್ರತಿಯೊಬ್ಬರೂ ಮುಂದೆ ಸಾಗಬೇಕು, ಜ್ಞಾನ ಗಳಿಸಬೇಕು ಮತ್ತು ಉದ್ಯೋಗ ಪಡೆಯಬೇಕು. ಈ ಶಿಕ್ಷಣ ನೀತಿಯಲ್ಲಿ, ನೀವು ಜ್ಞಾನವನ್ನು ಪಡೆಯುತ್ತೀರಿ, ಉದ್ಯೋಗ ಪಡೆಯುತ್ತೀರಿ, ಉದ್ಯೋಗದ ಸಾಧ್ಯತೆಗಳು ಹೆಚ್ಚಾಗಲಿವೆ ಮತ್ತು ವಿದ್ಯಾರ್ಥಿ ಒಳ್ಳೆಯ ವ್ಯಕ್ತಿಯಾಗಲಿದ್ದಾನೆ ಎಂಬುದು ಮಹತ್ವದ ವಿಷಯ. ಇದಕ್ಕಾಗಿ ಹೊಸ ಶಿಕ್ಷಣ ನೀತಿ ತನ್ನ ಅಡಿಪಾಯವನ್ನು ಹಾಕಿದೆ. ಬಾಯ್ಹಾಟ್ ಮಾಡುವ ಮೂಲಕ ಪಾಸ್ ಆಗುವುದು ಇದೀಗ ಇತಿಹಾಸವಾಗಲಿದೆ. ವಿದ್ಯಾರ್ಥಿ ವಿಷಯವನ್ನು ಅರ್ಥಮಾಡಿಕೊಂಡು ಪರೀಕ್ಷೆ ಪಾಸಾಗಲಿದ್ದಾನೆ ಎಂದು ಜಾವಡೆಕರ್ ಹೇಳಿದ್ದಾರೆ.


3 ವರ್ಷದಿಂದ 8 ವರ್ಷಗಳವರೆಗೆ ಭಾರತದಲ್ಲಿ ಆರಂಭಿಕ ಬಾಲ್ಯ ಶಿಕ್ಷಣದಂತಹ ಹೊಸ ವಿಷಯ ಪ್ರಾರಂಭವಾಗಲಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಸದ್ಯ ಮೊದಲ ಮತ್ತು ಎರಡನೆಯ ಪಾಠಗಳನ್ನು ಕೆಜಿಯಲ್ಲಿ ಹೇಳಿಕೊಡಲಾಗುತ್ತದೆ. ಆದರೆ, ಇನ್ಮುಂದೆ ಹಾಗೆ ನಡೆಯುವುದಿಲ್ಲ. ಇಲ್ಲಿ ವಿದ್ಯಾರ್ಥಿಗಳ ಕಾಗ್ನಿಟಿವ ಸ್ಕಿಲ್ ಅಭಿವೃದ್ಧಿಗೊಳಿಸಲಾಗುವುದು. ಇದರಿಂದ ನಿಜಾರ್ಥದಲ್ಲಿ ವಿದ್ಯಾರ್ಥಿಗಳ ಏಳ್ಗೆಯಾಗಲಿದೆ ಎಂದು ಜಾವಡೆಕರ್ ಹೇಳಿದ್ದಾರೆ. ಜೊತೆಗೆ ಮಕ್ಕಳು ಆಟವಾಡುತ್ತ ಕಲಿಯಲಿದ್ದಾರೆ ಮತ್ತು ಕಲಿಯುತ್ತ ಆಟವಾದಲಿದ್ದಾರೆ. ಆದರೆ ಪರೀಕ್ಷೆ ಮತ್ತು ಆ ನಕಲು ಪುಸ್ತಕಗಳು ಇನ್ನು ಮುಂದೆ ಇರುವುದಿಲ್ಲ. ಎರಡನೇ ತರಗತಿಯವರೆಗೆ ಯಾವುದೇ ಪರೀಕ್ಷೆ ಇರುವುದಿಲ್ಲ, ಇದರ ನಂತರ ಐದನೇ ತರಗತಿಯವರೆಗೆ ಭಿನ್ನವಾಗಿರಲಿದೆ. ಆ ಬಳಿಕ ಒಂದು ವಿಷಯ ಪ್ರವೇಶವಾಗಲಿದ್ದು, ಹೆಚ್ಚಿನ ಅಧ್ಯಯನಗಳು ಎಂಟನೇ ತರಗತಿಯವರೆಗೆ ನಡೆಯಲಿವೆ. ಆ ಅಧ್ಯಯನದ ನಂತರ ಹೆಚ್ಚು ವಿವರವಾಗಿ ಅಭ್ಯಾಸ ನಡೆಯಲಿದೆ, ಕೇವಲ ಜ್ಞಾನವಿರಲಿದೆ. ಇದು ಶಿಕ್ಷಣದಲ್ಲಿ ಹೊಸ ಬದಲಾವಣೆಯಾಗಿದೆ ಎಂದು ಅವರು ಹೇಳಿದ್ದಾರೆ.


ಕೌಶಲ್ಯ ಅಧ್ಯಯನ ಮಾಡಿದ ನಂತರ, ವಿದ್ಯಾರ್ಥಿಗಳು ಉದ್ಯೋಗಕ್ಕೆ ಹೋಗಬಹುದು, ಅವರು ಬಯಸಿದ್ದನ್ನು ಕಲಿಯಬಹುದು. ನಮ್ಮ ಕಾಲದಲ್ಲಿ ತಾಂತ್ರಿಕ ಶಾಲೆಗಳಿದ್ದವು, ಆದರೆ ತಾಂತ್ರಿಕ ಶಾಲೆಗಳಲ್ಲಿ ಸಮಸ್ಯೆ ಇರುತ್ತಿತ್ತು. ತಂತ್ರಜ್ಞಾನ ಹೊಂದಿದವರಿಗೆ ಸಮಾನ ದರ್ಜೆ ಸಿಗುತ್ತಿರಲಿಲ್ಲ. ಅವರ ಕೆಲಸವನ್ನು ಪರಿಶೀಲನೆಗೆ ಒಳಪದಿಸಲಾಗುತ್ತಿತ್ತು. ಇನ್ಮುಂದೆ ಹಾಗೆ ನಡೆಯುವುದಿಲ್ಲ ಎಂದು ಜಾವಡೆಕರ್ ಹೇಳಿದ್ದಾರೆ.


ಅವರಿಗೆ ಯೋಗ್ಯ ಸ್ಥಾನಮಾನ ಸಿಗಲಿದ್ದು, ಹೊಸದನ್ನು ಕಲಿಯಲು ಅವರಿಗೆ ಉದ್ಯೋಗ ಸಿಗಲಿದೆ, ಅವರಿಗೆ ಅವಕಾಶಗಳು ಸಿಗಲಿವೆ. 21 ನೇ ಶತಮಾನದಲ್ಲಿ ಭಾರತ ಪ್ರವೇಶಿಸುತ್ತಿದೆ. ಯೋಜನೆ, ಶೋಧ ಮತ್ತು ಸಂಶೋಧನೆಯು ಶಿಕ್ಷಕರಿಗೆ ಮುಖ್ಯವಾಗಿರಲಿದೆ. ಅದಕ್ಕಾಗಿಯೇ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಇದರ ಮೂಲಕ ದೇಶದಲ್ಲಿ ಸಂಶೋಧನೆ ಹೆಚ್ಚಾಗಲಿದೆ. ದೇಶದಲ್ಲಿ ಹೊಸ ಸಂಶೋಧನೆಯೊಂದಿಗೆ ಹೊಸ ಸಂಪತ್ತನ್ನು ಸೃಷ್ಟಿಸಲು ದೇಶದಲ್ಲಿ ಸಂಶೋಧನೆ ನಡೆಯಲಿದೆ, ಇದು ವಿದ್ಯಾರ್ಥಿಗಳು ಮುಂದಕ್ಕೆ  ತೆಗೆದುಕೊಂಡು ಹೋಗುವ ನೀತಿಯಾಗಿದೆ. ತಂತ್ರಜ್ಞಾನದ ಸಹಾಯದಿಂದ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಕೂಡ ಸಕಾರಾತ್ಮಕವಾಗಲಿದೆ. ಇದರೊಂದಿಗೆ, ಹೊಸ ಒಳ ಹರಿವು ಹೊಸ ವಿಧಾನಗಳು ಕಂಡುಬರಲಿವೆ. ಶಿಕ್ಷಣವನ್ನು ಅತ್ಯಂತ ಆಕರ್ಷಕ ರೀತಿಯಲ್ಲಿ ಮಾಡಲಾಗುತ್ತದೆ ಮತ್ತು ಶಾಲೆಗಳಲ್ಲಿ ಶಿಕ್ಷಕರಿರಲಿದ್ದಾರೆ, ಕಾಲೇಜುಗಳಲ್ಲಿಯೂ ಕೂಡ ಹೆಚ್ಚಿನ ಜ್ಞಾನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಮುಂದಕ್ಕೆ ಬರುವ ಅವಕಾಶ ಸಿಗಲಿದೆ ಎಂದು ಜಾವಡೆಕರ್ ಹೇಳಿದ್ದಾರೆ.