ಉತ್ತರಕನ್ನಡ: ಅಂಕೋಲಾ ಬಳಿ ಇಂದು ಸಂಭವಿಸಿ ಕಾರು ಅಪಘಾತದಲ್ಲಿ ಕೇಂದ್ರ ಸಚಿವರ ಪತ್ನಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಕೇಂದ್ರ ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯಕ ಅವರ ವಾಹನ ಅಂಕೋಲಾ ಕಂಚಿನಬೈಲ್ ಬಳಿ ಇಂದು ಅಪಘಾತಕ್ಕೊಳಗಾಗಿದೆ. ಸಚಿವರಿಗೆ ತೀವ್ರ ಗಾಯಗಳಾಗಿದ್ದು, ಸಚಿವರ ಆಪ್ತ ಕಾರ್ಯದರ್ಶಿ ದೀಪಕ್ ರಾಮದಾದ ಗೂಮೆ ಮೃತಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಯಲ್ಲಾಪುರದ ಚಂದಗುಳಿ ಗಂಟೆ ಗಣಪತಿ ದೇವಸ್ಥಾನಕ್ಕೆ ಇಂದು ಕುಟುಂಬ ಸಮೇತ ಆಗಮಿಸಿದ್ದ ಶ್ರೀಪಾದ ನಾಯಕ(Shripad Naik) ಅವರು ಗಣಹವನ ನೆರವೇರಿಸಿದ್ದರು. ನಂತರ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಸಾಯಂಕಾಲ ಯಲ್ಲಾಪುರದಿಂದ ಹೊಸಕಂಬಿ ಮಾರ್ಗವಾಗಿ ಗೋಕರ್ಣಕ್ಕೆ ಪ್ರಯಾಣ ಬೆಳೆಸಿದ್ದರು.


H Nagesh: 'ನನ್ನನ್ನು ಸರ್ಕಾರದಿಂದ ಕೈಬಿಡುವಷ್ಟು ಧೈರ್ಯ ಯಾರಿಗಿದೆ ಸ್ವಾಮಿ'


ಆ ಸಂದರ್ಭದಲ್ಲಿ ಅಪಘಾತವಾಗಿದೆ.ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಅಪಘಾತವಾದ ಕಾರಿನಲ್ಲಿ ಒಟ್ಟು ಐವರಿದ್ದರು. ಗಂಭೀರವಾಗಿ ಗಾಯಗೊಂಡ ಸಚಿವ ಶ್ರೀಪಾದ ನಾಯಕ ಸೇರಿ ಮೂವರಿಗೆ ಅಂಕೋಲಾ‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಗೋವಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತಕ್ಕೂ ಮುನ್ನ ಸಚಿವರು ದೇವರ ದರ್ಶನ ಪಡೆದಿದ್ದರು.


Basavaraj Bommai: 'ಸಿದ್ದರಾಮಯ್ಯ ಡ್ರೈವರ್‌, ಡಿ.ಕೆ. ಶಿವಕುಮಾರ್ ಕಂಡಕ್ಟರ್'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ