ನವದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ರಾಷ್ಟ್ರೀಯ ಲೋಕ ಸಮತಾ ಪಕ್ಷ ಸಮರ್ಪಕ ಸೀಟುಗಳನ್ನು ನೀಡಿಲ್ಲ ಎಂದು ಕೇಂದ್ರ ಸಚಿವ ಮತ್ತು ಆರ್ಎಲ್ಎಸ್ಪಿ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹ ಅಸಮಾಧಾನಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಶನಿವಾರದಂದು ಸುದ್ದಿಗಾರೊಂದಿಗೆ ಮಾತನಾಡುತ್ತಾ ತಿಳಿಸಿದ ಅವರು ಬಿಜೆಪಿ ನೀಡಿರುವ ಸೀಟುಗಳು ಗೌರವಾನ್ವಿತವಾಗಿಲ್ಲ ಎಂದು ಕುಶ್ವಾಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಆದರೆ ಇದೇ ವೇಳೆ ಅವರು ತಮ್ಮ ಪಕ್ಷಕ್ಕೆ ನೀಡಿರುವ ಸ್ಥಾನಗಳ ಸಂಖ್ಯೆಯನ್ನು ಬಹಿರಂಗಪಡಿಸಲಿಲ್ಲ. ನವೆಂಬರ್ 30 ರೊಳಗೆ ಬಿಹಾರದ ಎನ್ಡಿಎ ಘಟಕಗಳ ಮೂಲಕ ಸೀಟ್ ಹಂಚಿಕೆ ಒಪ್ಪಂದ ತಲುಪುವ ಮೊದಲು ತಾವು ಇದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.


ಆರ್ಎಲ್ಎಸ್ಪಿ ರಾಜ್ಯ ಕಾರ್ಯಕಾರಿ ಸಭೆಯ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಕುಶ್ವಾಹ  ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ "ಪ್ರಧಾನಿ ಹೊರತುಪಡಿಸಿ ಬೇರೆ ಯಾವುದೇ ಬಿಜೆಪಿ ನಾಯಕರೊಂದಿಗೆ ಮಾತನಾಡಲು ಪ್ರಯತ್ನಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.