COVID-19 ಲಸಿಕೆಯ ಮಾಧ್ಯಮ ವರದಿಗೆ ಕೇಂದ್ರ ಸಚಿವಾಲಯ ಸ್ಪಷ್ಟನೆ
Covid-19 Vaccine: ಭಾರತದಲ್ಲಿನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಭಾರತದಲ್ಲಿ ಬಳಸಲಾಗುವ ಕೋವಿಡ್-19 ಲಸಿಕೆಗಳ ಉಪಯೋಗ ಮತ್ತು ಅನುಕೂಲಗಳನ್ನು ಮೌಲ್ಯಮಾಪನ ಮಾಡಿದೆ.
Covid-19 Vaccine: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ (ಸಿಡಿಎಸ್‌ಸಿಒ) ಆರ್‌ಟಿಐ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಕರೋನವೈರಸ್ ಲಸಿಕೆಗಳ ಬಹು ಅಡ್ಡ ಪರಿಣಾಮಗಳನ್ನು ಒಪ್ಪಿಕೊಂಡಿವೆ ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿರಾಕರಿಸಿದೆ. ಕೋವಿಡ್-19 ಲಸಿಕೆಯ ಅಡ್ಡಪರಿಣಾಮಗಳ ಕುರಿತಂತೆ ಇತ್ತೀಚಿನ ಮಾಧ್ಯಮ ವರದಿಗಳನ್ನು ತಳ್ಳಿಹಾಕಿರುವ ಆರೋಗ್ಯ ಸಚಿವಾಲಯ, ಈ ವರದಿಗಳು ಆಧಾರ ರಹಿತವಾದ ವರದಿಗಳು ಎಂದು ಸ್ಪಷ್ಟಪಡಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಾರ್ವಜನಿಕ ಡೊಮೇನ್‌ನಲ್ಲಿ ಜಾಗತಿಕ ವೈಜ್ಞಾನಿಕ ಪುರಾವೆಗಳೊಂದಿಗೆ ಪೂರ್ವಭಾವಿ ಬಹಿರಂಗಪಡಿಸುವಿಕೆಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನೀತಿಗೆ ಅನುಗುಣವಾಗಿ, ಐಸಿಎಂಆರ್ ಕೋವಿಡ್-19 ಲಸಿಕೆಗಳ ಅನುಕೂಲಗಳು ಮತ್ತು ಅನಾನುಕೂಲಗಳಿಗೆ ಸಂಬಂಧಿಸಿದ ಆರ್‌ಟಿಐ ಪ್ರಶ್ನೆಗಳಿಗೆ ಪ್ರತಿಕ್ರಿಯೆಯನ್ನು ನೀಡಿದೆ. ಇದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (CDC) ಮತ್ತು ಆರೋಗ್ಯ ಸಚಿವಾಲಯವು ವಿವಿಧ ಕೋವಿಡ್-19 ಲಸಿಕೆಗಳ ಕುರಿತಂತೆ ಪುರಾವೆಗಳಿಗೆ ಆಧಾರವಾಗಿ ಮಾಹಿತಿ ಉದ್ದೇಶದಿಂದ ಮಾತ್ರ ಪ್ರತಿಷ್ಠಿತ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಮಾತ್ರ ಒದಗಿಸಿತ್ತು ಎಂದು ಅದು ಹೇಳಿದೆ.
ಇದನ್ನೂ ಓದಿ- Goat Milk Benefits : ಈ ಮಾರಕ ರೋಗಕ್ಕೆ ರಾಮಬಾಣ ಮೇಕೆ ಹಾಲು, ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ!
ಇದರಲ್ಲಿ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮೋದಿಸಿದ ಕೋವಿಡ್-19 ಲಸಿಕೆಗಳ ಪಟ್ಟಿ ಅಧಿಕೃತ CDSCO ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಅದು ಹೇಳಿದೆ. CDSCO ಈ ವಿಷಯದ ಕುರಿತು ತಮ್ಮ ಬಳಿ ಯಾವುದೇ ಇತರ ಮಾಹಿತಿ ಲಭ್ಯವಿಲ್ಲ ಎಂಬುದನ್ನು ಕೂಡ ಉಲ್ಲೇಖಿಸಿರುವುದಾಗಿ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ- Covid BF. 7 ನಿಯಂತ್ರಣ ಸಭೆ; ಸರ್ಕಾರ ಸಿದ್ಧತೆ ಹೇಗಿದೆ? ರಾಜಕೀಯ ಕಾರ್ಯಕ್ರಮಕ್ಕೆ ನಿರ್ಬಂಧನೆ ಇಲ್ಲ!
ಭಾರತದಲ್ಲಿನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಭಾರತದಲ್ಲಿ ಬಳಸಲಾಗುವ ಕೋವಿಡ್-19 ಲಸಿಕೆಗಳ ಉಪಯೋಗ ಮತ್ತು ಅನುಕೂಲಗಳನ್ನು ಮೌಲ್ಯಮಾಪನ ಮಾಡಿದೆ. ಕೋವಿಡ್-19 ಲಸಿಕೆ ಪಡೆದವರಲ್ಲಿ ಸಾಮಾನ್ಯ ರೋಗ ಲಕ್ಷಣಗಳಾದ (ತಲೆನೋವು, ಜ್ವರ, ಸುಸ್ತು, ಪೈರೆಕ್ಸಿಯಾ, ಶೀತ, ಆರ್ಥ್ರಾಲ್ಜಿಯಾ, ಮೈಯಾಲ್ಜಿಯಾ) ಕಾಣಿಸಿಕೊಳ್ಳುವುದು ಸಹಜ. ಆದರೆ, ಮೊದಲೇ ಯಾವುದಾದರೂ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಇದರ ತೀವ್ರ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು ಎಂದು ಸಚಿವಾಲಯ ವಿವರಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.