UP Assembly Elections 2022: UPಯಲ್ಲಿ ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದರೆ, ಹಲವು ಮಿಥ್ಯಗಳು ಮುರಿಯಲಿವೆ
UP Assembly Elections 2022 - ನೋಯ್ಡಾದಿಂದ ಆಗ್ರಾದವರೆಗೆ, ಅನೇಕ ಕಟ್ಟುಕಥೆಗಳಿದ್ದು (UP Assembly Elections 2022 Myths), ಹಿಂದಿನ ಮುಖ್ಯಮಂತ್ರಿಗಳು ಅವುಗಳನ್ನು ಮುರಿಯಲು ಯಾವಾಗಲೂ ಹಿಂಜರಿಯುತ್ತಿದ್ದರು. ಆದರೆ, ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath) ಈ ಎಲ್ಲಾ ಕಟ್ಟುಕಥೆಗಳನ್ನು (UP Assembly Elections Blind Beliefs) ಮೀರಲಿದ್ದಾರೆ ಎಂದರೆ ತಪ್ಪಾಗಲಾರದು.
UP Assembly Elections 2022 Results - ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (BJP) ಮತ್ತೊಮ್ಮೆ ಸ್ಪಷ್ಟ ಬಹುಮತದತ್ತ ದಾಪುಗಾಲು ಇಡುತ್ತಿದೆ. ಪ್ರಕಟವಾಗುತ್ತಿರುವ ಟ್ರೆಂಡ್‌ಗಳಲ್ಲಿ, ಬಿಜೆಪಿ ಎಲ್ಲಾ ಜಾತಿ ಮತ್ತು ಧರ್ಮದ ಸಮೀಕರಣಗಳನ್ನು ನುಚ್ಚುನೂರು ಮಾಡುತ್ತಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸತೊಡಗಿದೆ.
ಹಲವು ದಾಖಲೆಗಳನ್ನು ಮುರಿದ ಯೋಗಿ ಆದಿತ್ಯನಾಥ್
ಒಂದು ವೇಳೆ ಮತ್ತೊಮ್ಮೆ ಸಿಎಂ ಯೋಗಿ ಅಧಿಕಾರಕ್ಕೆ ಬಂದರೆ, ಅವರು ಉತ್ತರ ಪ್ರದೇಶದಲ್ಲಿರುವ ಹಲವು ಕಟ್ಟುಕಥೆಗಳಿಗೆ ತೆರೆ ಎಳೆಯಲಿದ್ದಾರೆ. ನೋಯ್ಡಾದಿಂದ ಆಗ್ರಾದವರೆಗೆ, ಇಂತಹ ಅನೇಕ ಮಿಥ್ಯ ಕಥೆಗಳು ಜನಮಾನಸದಲ್ಲಿದ್ದು, ಹಿಂದಿನ ಮುಖ್ಯಮಂತ್ರಿಗಳು ಅವುಗಳನ್ನು ಮುರಿಯಲು ಯಾವಾಗಲೂ ಹಿಂಜರಿಯುತ್ತಿದ್ದರು. ಸಿಎಂ ಯೋಗಿ ತಮ್ಮ ಅಧಿಕಾರಾವಧಿಯಲ್ಲಿ ನೋಯ್ಡಾಗೆ ಬರುವುದಕ್ಕಾಗಲಿ, ಗೆಸ್ಟ್ ಹೌಸ್‌ನಲ್ಲಿ ತಂಗುವುದಕ್ಕಾಗಲಿ ಹೆದರುತ್ತಿರಲಿಲ್ಲ. ಇದರೊಂದಿಗೆ ಮತ್ತೊಂದು ಮೂಢನಂಬಿಕೆಯನ್ನು ಸಿಎಂ ಯೋಗಿ ಮುರಿಯಲು ಯತ್ನಿಸುತ್ತಿದ್ದಾರೆ. ಕಳೆದ 36 ವರ್ಷಗಳಲ್ಲಿ ಯುಪಿಯಲ್ಲಿ ಮತ್ತೆ ಸರ್ಕಾರ ರಚಿಸುವಲ್ಲಿ ಯಾವ ಪಕ್ಷವೂ ಯಶಸ್ವಿಯಾಗಿರಲಿಲ್ಲ.
ಮುಖ್ಯಮಂತ್ರಿಗಳಲ್ಲಿ ನೋಯ್ಡಾಕ್ಕೆ ಬರುವ ಭಯ
ನೋಯ್ಡಾ ವಿಷಯದಲ್ಲಿ ಹಾಲಿ ಮುಖ್ಯಮಂತ್ರಿಗಳಲ್ಲಿ ಒಂದು ಭಯ ಇದೆ. ನೋಯ್ಡಾಗೆ ಯಾವುದೇ ಮುಖ್ಯಮಂತ್ರಿಯ ಭೇಟಿ ನೀಡಿದರೆ ಅವರು ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ತೊರೆಯಲಿದ್ದಾರೆ ಎಂಬ ಮಿಥ್ಯವಿದೆ. ನೋಯ್ಡಾವನ್ನು ಮುಖ್ಯಮಂತ್ರಿ ಕುರ್ಚಿಗೆ ದುರದೃಷ್ಟಕರ ಎಂದು ಪರಿಗಣಿಸಲಾಗಿತ್ತು. ವಾಸ್ತವವಾಗಿ ಜನರು ಇದರ ಹಿಂದೆ ತಮ್ಮದೇ ಆದ ತರ್ಕವನ್ನು ಹೊಂದಿದ್ದಾರೆ. ಜೂನ್ 1988 ರಲ್ಲಿ ನೋಯ್ಡಾದಿಂದ ಹಿಂದಿರುಗಿದ ಕೆಲವು ದಿನಗಳ ನಂತರ, ಆಗಿನ ಸಿಎಂ ವೀರ್ ಬಹದ್ದೂರ್ ಸಿಂಗ್ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಇದರ ನಂತರ ಎನ್‌ಡಿ ತಿವಾರಿ (1989), ಮಾಯಾವತಿ (1997 ರಲ್ಲಿ ಅಧಿಕಾರ ಕಳೆದುಕೊಂಡರು) ಮತ್ತು ಕಲ್ಯಾಣ್ ಸಿಂಗ್ (1999) ನೋಯ್ಡಾಗೆ ಭೇಟಿ ನೀಡಿದ ನಂತರ ಮುಖ್ಯಮಂತ್ರಿ ಕುರ್ಚಿಯನ್ನು ತೊರೆದಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿಗಳು ನೋಯ್ಡಾದಿಂದ ಸ್ವಲ್ಪ ಅಂತರವನ್ನೇ ಕಾಯುತ್ತಾರೆ.
ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ನೋಯ್ಡಾಕ್ಕೆ ಎಷ್ಟು ಹೆದರಿದ್ದರು ಎಂದರೆ ಅವರು 2013 ರಲ್ಲಿ ನೋಯ್ಡಾದಲ್ಲಿ ನಡೆದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಶೃಂಗಸಭೆಯಲ್ಲಿ ಅವರು ಭಾಗವಹಿಸಿರಲಿಲ್ಲ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮುಖ್ಯ ಅತಿಥಿಯಾಗಿದ್ದರು. ಅಷ್ಟೇ ಅಲ್ಲ, ರಿಮೋಟ್ ಕಂಟ್ರೋಲ್‌ನೊಂದಿಗೆ ಯಮುನಾ ಎಕ್ಸ್‌ಪ್ರೆಸ್‌ವೇ ಅನ್ನು ಲಕ್ನೋದಿಂದಲೇ ಅವರು ಉದ್ಘಾಟಿಸಿದ್ದರು.
ಸಿಎಂ ಯೋಗಿ ನೋಯ್ಡಾಗೆ ಹಲವು ಬಾರಿ ಭೇಟಿ ನೀಡಿದ್ದರು
ಸಿಎಂ ಯೋಗಿ ಹಲವು ಬಾರಿ ನೋಯ್ಡಾಗೆ ಭೇಟಿ ನೀಡಿದ್ದಾರೆ. 23 ಸೆಪ್ಟೆಂಬರ್ 2017 ರಂದು, ಅವರು ಬೊಟಾನಿಕಲ್ ಗಾರ್ಡನ್-ಕಲ್ಕಾಜಿ ಮೆಜೆಂಟಾ ಮೆಟ್ರೋ ಮಾರ್ಗದ ಉದ್ಘಾಟನೆಗೆ ಪ್ರಧಾನಿ ಮೋದಿಯವರ ಭೇಟಿಗೆ ಮುಂಚಿತವಾಗಿ ವ್ಯವಸ್ಥೆಗಳನ್ನು ಪರಿಶೀಲಿಸಲು ನಗರಕ್ಕೆ ಭೇಟಿ ನೀಡಿದ್ದರು. ಎರಡು ದಿನಗಳ ನಂತರ, ಸೆಪ್ಟೆಂಬರ್ 25 ರಂದು, ಅವರು ಮೆಟ್ರೋ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ಮೋದಿಯವರೊಂದಿಗೆ ಆಗಮಿಸಿದ್ದರು. 2018 ರಲ್ಲಿ, ಅವರು ಪ್ರಧಾನಿ ಭೇಟಿಯ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಜುಲೈ 8 ರಂದು ನೋಯ್ಡಾ ಯೋಗಿ ತಲುಪಿದ್ದರು. ಒಂದು ದಿನದ ನಂತರ, ಅವರು ಸ್ಯಾಮ್‌ಸಂಗ್‌ನ ವಿಶ್ವದ ಅತಿದೊಡ್ಡ ಮೊಬೈಲ್ ಕಾರ್ಖಾನೆಯ ಉದ್ಘಾಟನೆಗಾಗಿ ನೋಯ್ಡಾದ ನಗರಕ್ಕೆ ತಲುಪಿದ್ದರು. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಜೇವರ್ ಏರ್‌ಪೋರ್ಟ್‌ಗೆ ಶಂಕುಸ್ಥಾಪನೆಯನ್ನು ಯೋಗಿ ಆದಿತ್ಯನಾಥ್ ನೆರವೇರಿಸಿದ್ದರು.
ಆಗ್ರಾದ ಸರ್ಕ್ಯೂಟ್ ಹೌಸ್ ಬಗ್ಗೆ ಮೂಢನಂಬಿಕೆ
ನೋಯ್ಡಾ ಮಾತ್ರವಲ್ಲ, ಆಗ್ರಾದ ಸರ್ಕ್ಯೂಟ್ ಹೌಸ್ ಬಗ್ಗೆಯೂ ಇಂತಹುದೇ ಮೂಢನಂಬಿಕೆ ಚಾಲ್ತಿಯಲ್ಲಿದೆ. ಕಳೆದ 16 ವರ್ಷಗಳಿಂದ ಇಲ್ಲಿ ಯಾವ ಮುಖ್ಯಮಂತ್ರಿಯೂ ತಂಗಿಲ್ಲ. ರಾಜನಾಥ್ ಸಿಂಗ್ ಅವರು ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದಾಗ, ನಂತರ ಅವರು ತಮ್ಮ ಕುರ್ಚಿಯನ್ನು ಕಳೆದುಕೊಂಡಿದ್ದರು. ಆಗ್ರಾ ಸರ್ಕ್ಯೂಟ್ ಹೌಸ್ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಎಷ್ಟು ಭಯವಿದೆ ಎಂದರೆ ಮುಲಾಯಂ ಸಿಂಗ್ ಯಾದವ್, ಮಾಯಾವತಿ ಮತ್ತು ಅಖಿಲೇಶ್ ಯಾದವ್ ಕೂಡ ಅಲ್ಲಿ ಉಳಿದುಕೊಳ್ಳುವ ಧೈರ್ಯವನ್ನು ಇದುವರೆಗೂ ಮಾಡಿಲ್ಲ. ಆದರೆ, ಸಿಎಂ ಯೋಗಿ ಮೂಢನನಂಬಿಕೆಯನ್ನು ತಪ್ಪು ಎಂದು ಸಾಬೀತುಪಡಿಸಿದ್ದಾರೆ.
ಎನ್ ಡಿ ತಿವಾರಿ ಬಳಿಕ ಮತ್ತೆ ಎರಡನೇ ಬಾರಿಗೆ ಸಿಎಂ ಆಗಲಿಲ್ಲ
ಕಳೆದ ಹಲವು ದಶಕಗಳಲ್ಲಿ ಉತ್ತರ ಪ್ರದೇಶದಲ್ಲಿ (Uttar Pradesh Assembly Elections 2022 Updates) ಯಾವುದೇ ಪಕ್ಷ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ. ಇದಕ್ಕೂ ಮುನ್ನ ಎನ್‌ಡಿ ತಿವಾರಿ ಸತತ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದರು. 1985 ರಿಂದ ಇದುವರೆಗೆ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಯಾರೂ ಸಿಎಂ ಆಗಿಲ್ಲ. ಮೂಢನಂಬಿಕೆಗಳಲ್ಲಿ ನಂಬಿಕೆ ಇಲ್ಲ ಎಂದು ಸಿಎಂ ಯೋಗಿ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಅವರು ಯಾವಾಗಲೂ ಅವುಗಳನ್ನು ಮುರಿಯಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ. ಯೋಗಿಗಿಂತ ಮೊದಲು ಬಿಜೆಪಿಯ ಯಾವ ಮುಖ್ಯಮಂತ್ರಿಯೂ ಕೂಡ ರಾಜ್ಯದಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ. ಕಲ್ಯಾಣ್ ಸಿಂಗ್ ಎರಡು ಬಾರಿ ಮತ್ತು ರಾಮ್ ಪ್ರಕಾಶ್ ಗುಪ್ತಾ ಮತ್ತು ರಾಜನಾಥ್ ಸಿಂಗ್ ತಲಾ ಒಮ್ಮೆ ರಾಜ್ಯ ಉಸ್ತುವಾರಿ ವಹಿಸಿದ್ದರು. ಆದರೆ, ಅವರ ಯಾರೂ ಕೂಡ ಸತತ 3 ವರ್ಷಗಳಿಗಿಂತ ಹೆಚ್ಚು ಕಾಲ ಕುರ್ಚಿಯಲ್ಲಿ ಉಳಿದಿಲ್ಲ
ಯೋಗಿ ಮತ್ತೊಮ್ಮೆ ಸಿಎಂ ಆದರೇ ಮತ್ತೊಂದು ಇತಿಹಾಸ ನಿರ್ಮಾಣವಾಗಲಿದೆ
1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, 1950 ರಲ್ಲಿ ಚುನಾವಣೆಗಳು ನಡೆದ ನಂತರ ಮೊದಲ ಸರ್ಕಾರ ರಚಯೇಯಾಗಿತ್ತು, ಅಂದಿನಿಂದ ಇಲ್ಲಿಯವರೆಗೆ ಯಾರೂ ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿಲ್ಲ, ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೂ ಕೂಡ ಯಾವತ್ತೂ ಸಿಎಂ ಪುನರಾವರ್ತನೆ ಆಗಿಲ್ಲ. ಮಾಯಾವತಿಯವರು 3 ಜೂನ್ 1995 ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ, ಅವರ ಸರ್ಕಾರವು 18 ಅಕ್ಟೋಬರ್ 1995 ರವರೆಗೆ ಇತ್ತು ಮತ್ತು ಅವರು 137 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು, ಆದರೆ ನಂತರ ಅವರ ಸರ್ಕಾರವು ಪತನವಾಯಿತು ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. ಇದಾದ ನಂತರ 1997ರಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆದು ಮಾಯಾವತಿ ಮತ್ತೆ ಸಿಎಂ ಆದರು. ಆದರೆ ಈ ಬಾರಿಯೂ ಅವರ ಸರ್ಕಾರ ಕೇವಲ 184 ದಿನಗಳು ಮಾತ್ರ ಪೂರೈಸಳಷ್ಟೇ ಶಕ್ತವಾಯಿತು. ಆದ್ದರಿಂದ ಮಾಯಾವತಿ ಅವರು ಖಂಡಿತವಾಗಿಯೂ ಎರಡನೇ ಬಾರಿಗೆ ಸಿಎಂ ಆಗಿದ್ದರು, ಆದರೆ ಈ ನಡುವೆ ರಾಜ್ಯದಲ್ಲಿ 1 ವರ್ಷಕ್ಕೂ ಹೆಚ್ಚು ಕಾಲ ರಾಷ್ಟ್ರಪತಿ ಆಳ್ವಿಕೆ ಇತ್ತು ಮತ್ತು ಮಾಯಾವತಿ ತಮ್ಮ ಅಧಿಕಾರಾವಧಿಯನ್ನು ಸಹ ಪೂರ್ಣಗೊಳಿಸಲಿಲ್ಲ.
ಇದನ್ನೂ ಓದಿ-Goa Election 2022: ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ ಕಾಂಗ್ರೆಸ್! ನಂಬರ್ ಗೇಮ್ ನಲ್ಲಿ ಗೆಲ್ಲೋರು ಯಾರು?
ಪಕ್ಷ ಅಧಿಕಾರಕ್ಕೆ ಬಂದರೂ ಮತ್ತೆ ಸಿಎಂ ಆಗಲಿಲ್ಲ
ಯುಪಿ ರಾಜಕೀಯದಲ್ಲಿ ಒಂದು ಕುತೂಹಲಕಾರಿ ಅಂಶವಿದೆ, ಯಾವುದೇ ಪಕ್ಷದ ಅಧಿಕಾರ ಪುನರಾವರ್ತಿತವಾದರೆ, ಅದು ತನ್ನ ಹಿಂದಿನ ಸಿಎಂಗೆ ಮುಖ್ಯಮಂತ್ರಿ ಕುರ್ಚಿ ನೀಡಿಲ್ಲ. ರಾಜ್ಯದಲ್ಲಿ 1950ರಿಂದ 1967ರ ವರೆಗೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು, ಆದರೆ ಈ ನಡುವೆ ಗೋವಿಂದ್ ವಲ್ಲಭ ಪಂತ್ ಅವರಿಂದ ಆರಂಭವಾದ ಕುರ್ಚಿಯ ಕಥೆ ಚಂದ್ರಭಾನ್ ಗುಪ್ತಾ ಅವರನ್ನು ತಲುಪುತ್ತದೆ, ಈ ಅವಧಿಯಲ್ಲಿ ಪಕ್ಷವು ಒಟ್ಟು ಮೂವರು ಸಿಎಂಗಳನ್ನು ಬದಲಾಯಿಸಿದೆ. ಅಂದರೆ 1950ರಿಂದ 1967ರ ವರೆಗೆ ಕಾಂಗ್ರೆಸ್ ಸರಕಾರವಿದ್ದರೂ ಪ್ರತಿ ಬಾರಿಯೂ ಮುಖ್ಯಮಂತ್ರಿಗಳು ಬದಲಾಗುತ್ತಲೇ ಇದ್ದರು.
ಇದನ್ನೂ ಓದಿ-Punjab Assembly Elections 2022 Results: ಆಮ್ ಆದ್ಮಿ ಪಕ್ಷ ಕ್ಲೀನ್ ಸ್ವೀಪ್ ಮಾಡಿದ್ರೆ, ಸವಾಲುಗಳು ಏನಿರಲಿವೆ?
ಇದೇ ವೇಳೆ, 1980 ರಿಂದ 1989ರವರೆಗೆ ಮತ್ತೆ ಕಾಂಗ್ರೆಸ್ ಸರ್ಕಾರವಿತ್ತು, ಆದರೆ ಈ 9 ವರ್ಷಗಳಲ್ಲಿ ಕಾಂಗ್ರೆಸ್ 5 ಮುಖ್ಯಮಂತ್ರಿಗಳನ್ನು ಕುರ್ಚಿಯ ಮೇಲೆ ಕೂರಿಸಿದೆ. ಈ ಹಿಂದೆ ಬಿಜೆಪಿ 1997 ರಿಂದ 2002 ರವರೆಗೆ ಮೊದಲ ಬಾರಿಗೆ ಐದು ವರ್ಷಗಳ ಕಾಲ ಯುಪಿ ಅಧಿಕಾರವನ್ನು ನಡೆಸಿತ್ತು, ಆದರೆ ಈ ಐದು ವರ್ಷಗಳಲ್ಲಿ ಬಿಜೆಪಿ 3 ಮುಖ್ಯಮಂತ್ರಿಗಳನ್ನು ಬದಲಾಯಿಸಿದೆ.. 21 ಸೆಪ್ಟೆಂಬರ್ 1997 ರಂದು ಬಿಜೆಪಿ ಸರ್ಕಾರ ರಚಿಸಿದಾಗ, ಕಲ್ಯಾಣ್ ಸಿಂಗ್ ಸಿಎಂ ಆದರು, ನಂತರ ಎರಡು ವರ್ಷಗಳ ನಂತರ ಸಿಎಂ ಬದಲಾಯಿಸಲಾಯಿತು ಮತ್ತು ರಾಮ್ ಪ್ರಕಾಶ್ ಗುಪ್ತಾ ಅವರಿಗೆ ಮುಖ್ಯಮಂತ್ರಿ ಕುರ್ಚಿ ನೀಡಲಾಯಿತು. 351 ದಿನಗಳ ನಂತರ ಬಿಜೆಪಿ ರಾಮ್ ಪ್ರಕಾಶ್ ಗುಪ್ತಾ ಅವರನ್ನು ಕೆಳಗಿಳಿಸಿ ರಾಜನಾಥ್ ಸಿಂಗ್ ಅವರನ್ನು ಸಿಎಂ ಆಗಿ ನೇಮಕ ಮಾಡಿತ್ತು.
ಇದನ್ನೂ ಓದಿ-Goa Election Results 2022: ಮುನ್ನಡೆ ಕಾಯ್ದುಕೊಂಡಿರುವ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.