ಉತ್ತರಪ್ರದೇಶ ಕ್ಯಾಬಿನೆಟ್ ಪುನರ್ ರಚನೆ ಬುಧವಾರಕ್ಕೆ ನಿಗದಿ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಕ್ಯಾಬಿನೆಟ್‌ನ ಹೊಸ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬುಧವಾರ ಲಖನೌದ ರಾಜ್ ಭವನದಲ್ಲಿ ನಡೆಯಲಿದೆ.
ಲಕ್ನೋ: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಆರೋಗ್ಯ ಸ್ಥಿತಿಯ ಹದಗೆಟ್ಟಿದ್ದರಿಂದ ಮುಂದೂಡಲಾಗಿದ್ದ ಉತ್ತರ ಪ್ರದೇಶ ಕ್ಯಾಬಿನೆಟ್ ಪುನರ್ರಚನೆ ಬುಧವಾರ ನಡೆಯಲಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಕ್ಯಾಬಿನೆಟ್‌ನ ಹೊಸ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬುಧವಾರ ಲಖನೌದ ರಾಜ್ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ 12ಕ್ಕೂ ಹೆಚ್ಚು ನೂತನ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.
ಸ್ವತಂತ್ರ ಉಸ್ತುವಾರಿ ಹೊಂದಿರುವ ಮೂರರಿಂದ ನಾಲ್ಕು ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಶಾಸಕರಾದ ಅಶೋಕ್ ಕಟಾರಿಯಾ, ವಿದ್ಯಾಸಾಗರ್ ಸೋಂಕರ್, ಉದಯಭನ್ ಸಿಂಗ್, ಕಪಿಲ್ ದೇವ್ ಅಗ್ರವಾಲ್, ಅನಿಲ್ ಶರ್ಮಾ, ಪಂಕಜ್ ಸಿಂಗ್, ಸಂಜೀವ್ ರಾಜಾ, ನಿಲಿಮಾ ಕಟಿಯಾರ್, ದಾಲ್ ಬಹದ್ದೂರ್ ಕೋರಿ, ಆಶಿಶ್ ಪಟೇಲ್, ಮಹೇಂದ್ರ ಸಿಂಗ್, ಸುರೇಶ್ ರಾಣಾ ರಾಜ್‌ಭರ್ ಮತ್ತು ಉಪೇಂದ್ರ ತಿವಾರಿ ಅವರು ಸಂಪುಟದಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮೂವರು ಕ್ಯಾಬಿನೆಟ್ ಮಂತ್ರಿಗಳಾದ ಆಗ್ರಾದ ಎಸ್ಪಿ ಸಿಂಗ್ ಬಾಗೆಲ್, ಅಲಹಾಬಾದ್‌ನ ರೀಟಾ ಬಹುಗುಣ ಜೋಶಿ ಮತ್ತು ಕಾನ್ಪುರದ ಸತ್ಯದೇವ್ ಪಚೌರಿ ಅವರನ್ನು ಸಹ ಸಂಪುಟದಲ್ಲಿ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.
ಸಿಎಂ ಯೋಗಿ ಆದಿತ್ಯನಾಥ್, ಇಬ್ಬರು ಡಿಸಿಎಂಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ, ಸ್ವತಂತ್ರ ಉಸ್ತುವಾರಿಯ ಒಂಬತ್ತು ರಾಜ್ಯ ಸಚಿವರು ಮತ್ತು 13 ರಾಜ್ಯ ಸಚಿವರು ಸೇರಿದಂತೆ ರಾಜ್ಯ ಸಚಿವ ಸಂಪುಟದಲ್ಲಿ ಪ್ರಸ್ತುತ 43 ಸಚಿವರಿದ್ದಾರೆ.