ನವ ದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವರ್ಷ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಲಿದ್ದಾರೆ. ಝೀ ನ್ಯೂಸ್ಗೆ ಮಾತನಾಡುತ್ತಾ, ವಿವಾದದ ಬಗ್ಗೆ ಸ್ಪಷ್ಟತೆ ನೀಡಿದ ಅವರು ರಾಮಜನ್ಮಭೂಮಿಯ ವಿವಾದಕ್ಕೂ ಮತ್ತು ಆಚರಣೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ಅವರ ಬೆಂಬಲಿಗರೊಂದಿಗೆ ದೀಪಾವಳಿಯನ್ನು ಆಚರಿಸಲು ಮತ್ತು ಅಲ್ಲಿ ಘಾಟ್ಗಳನ್ನು ಸುತ್ತುವರಿಸಲು ಈಗಾಗಲೇ ಪ್ರಮುಖ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಆಯ್ಕೆಗಾಗಿ, ಎರಡು ಲಕ್ಷ ಮಣ್ಣಿನ ದೀಪಗಳನ್ನು ಕೂಡ ಬೆಳಗಿಸಲಾಗುವುದು. "ರಾಮಾಯಣವು ಬಹಳ ಹಳೆಯದು ಮತ್ತು ಅಯೋಧ್ಯಾ ಅದರ ಒಂದು ಅವಿಭಾಜ್ಯ ಅಂಗವಾಗಿದೆ.  ಇದು ಅಭಿವೃದ್ಧಿ ಹೊಂದಿದ ನಗರವಾಗಿದ್ದು, ಜನರು ಇಲ್ಲಿಂದಲೂ ಮುಂದುವರೆಸುತ್ತಿದ್ದಾರೆ. ಅದರ ಹಿಂದಿನ ಗತಕಾಳದೊಂದಿಗೆ ಸಂಪರ್ಕ ಸಾಧಿಸಲು ನಮಗೆ ಹೆಮ್ಮೆಯಿದೆ", "ಅಯೋಧ್ಯಾ ನಮಗೆ ನಂಬಿಕೆಯ ವಿಷಯವಾಗಿದೆ ಮತ್ತು ರಾಮ್ ಒಂದು ವಿಗ್ರಹವಾಗಿದೆ" ಎಂದು ಯೋಗಿ ಹೇಳಿದರು. 


ಇಲ್ಲಿ ರಾಮ ಮಂದಿರದ ಪ್ರಶ್ನೆಯು ಒಂದು ಚುನಾವಣಾ ವಿಚಾರವೆಂದು ನಿರಾಕರಿಸಿದ ಯೋಗಿ ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಕಾಯಬೇಕು ಎಂದು ಹೇಳಿದರು. "ಅಯೋಧ್ಯೆಯ ವಿವಾದಕ್ಕೆ ಉತ್ತರ ಪ್ರದೇಶ ಸರ್ಕಾರವು ಪಕ್ಷವಲ್ಲ, ವಿವಾದಿತ ಪ್ರದೇಶದಲ್ಲಿ ನಾವು ಮಧ್ಯಪ್ರವೇಶಿಸುತ್ತಿಲ್ಲ ಮತ್ತು ಸರ್ವೋಚ್ಚ ನ್ಯಾಯಾಲಯವು ಎಲ್ಲರಿಗೂ ಸ್ವೀಕಾರಾರ್ಹವಾದ ತೀರ್ಪನ್ನು ನೀಡುತ್ತದೆ" ಎಂದು ಯೋಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಇದು ಕೇವಲ ಅಯೋಧ್ಯೆಯ ವಿಚಾರವಲ್ಲ, ನಮ್ಮ ಸರ್ಕಾರ ಇಡೀ ರಾಜ್ಯದ ಅಭಿವೃದ್ಧಿಗೆ ತನ್ನ ಕಾರ್ಯನಿರ್ವಹಿಸುತ್ತಿದೆ. "ನಮ್ಮ ಪರಂಪರೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದು ನಮ್ಮ ಗುರಿ, ನಾವು ಪ್ರಾಚೀನ ಮತ್ತು ಆಧುನಿಕ ನಡುವೆ ಸಭೆ ಸ್ಥಾಪಿಸಲು ಬಯಸುತ್ತೇವೆ" ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.