ಲಕ್ನೋ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಹಾಗೂ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ತಾಜ್ ಮಹಲ್ ಅನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ತನ್ನ ಅಧಿಕೃತ ಪ್ರವಾಸಿ ಕೈಪಿಡಿಯಿಂದ ಕೈಬಿಟ್ಟಿದೆ.


COMMERCIAL BREAK
SCROLL TO CONTINUE READING

ತಾಜ್ ಮಹಲ್ ಪ್ರತಿಕೃತಿಯನ್ನು ಕಾಣಿಕೆಯಾಗಿ ನೀಡುವುದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗಷ್ಟೇ ಟೀಕಿಸಿದ್ದರು. ತಾಜ್ ಮಹಲ್ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ ಎಂಬ ಯೋಗಿ ಹೇಳಿಕೆಯನ್ನು ಟೆಲಿಗ್ರಾಫ್ ವರದಿ ತಿಳಿಸಿತ್ತು. 


ಈಗ ತಾಜ್ ಮಹಲ್ ಬಗ್ಗೆ ಮಾಧ್ಯಮದ ಒಂದು ವಿಭಾಗದಲ್ಲಿ ವರದಿಯಾದ ನಂತರ, ರಾಜ್ಯ ಪ್ರವಾಸೋದ್ಯಮ ಇಲಾಖೆಯು ತಾಜ್ ಮಹಲ್ ಮತ್ತು ಅದರ ಸುತ್ತಲಿನ ಪ್ರದೇಶಗಳಿಗೆ ಪ್ರಾರಂಭಿಸಿದ ಹಲವಾರು ಯೋಜನೆಗಳನ್ನು ವಿವರಿಸುವ ಪತ್ರಿಕಾ ಪ್ರಕಟಣೆ ನೀಡಲಾಗಿದೆ.


ಯುಪಿ ಸರಕಾರವು 370 ಕೋಟಿ ರೂ. ಮೌಲ್ಯದ ಪ್ರವಾಸೋದ್ಯಮ ಯೋಜನೆಗಳನ್ನು ಪ್ರಸ್ತಾಪಿಸಿದ್ದು, ಅದರಲ್ಲಿ ತಾಜ್ ಮಹಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರ್ಧದಷ್ಟು ಭಾಗವನ್ನು ಪ್ರಸ್ತಾವಿಸಲಾಗಿದೆ ಎಂದು ಅಧಿಕೃತ ಬಿಡುಗಡೆ ತಿಳಿಸಿದೆ.


"370 ಕೋಟಿ ರೂಪಾಯಿಗಳ ಪ್ರವಾಸೋದ್ಯಮ ಯೋಜನೆಗಳನ್ನು ಪ್ರಸ್ತಾವಿಸಲಾಗಿದೆ, ತಾಜ್ ಮಹಲ್ ಮತ್ತು ಅದರ ಸುತ್ತಲಿನ ಪ್ರದೇಶಗಳಿಗೆ 156 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಸ್ತಾವಿಸಲಾಗಿದೆ" ಎಂದು ಬಿಡುಗಡೆಯಾದ ವರದಿ ತಿಳಿಸಿದೆ.