ನವದೆಹಲಿ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದ ಜನರಿಗೆ ನಿರಂತರವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ತನ್ನ ಯೋಜನೆಗಳ ಮೂಲಕವೇ ಜನರಿಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿದೆ.  ಇನ್ನು ತನ್ನ ಯೋಜನೆಯ ಭಾಗವಾಗಿ ಕೈಗಾರಿಕಾ ಮಹಾನಗರ ಮುಂಬಯಿಯಲ್ಲಿ  ವಾಸಿಸುವ ಯುಪಿ ನಿವಾಸಿಗಳಿಗೆ ರಾಜ್ಯ ಸರ್ಕಾರ ಹೊಸ ಮಾರ್ಗವೊಂದು ತೆರೆಯಲಿದೆ. ಮುಂಬಯಿಯಲ್ಲಿ  ಯುಪಿ ಸರ್ಕಾರದ ಕಚೇರಿಯನ್ನು ತೆರೆಯಲು ಸಿಎಂ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಈ ಕಚೇರಿಯಿಂದ ಮುಂಬಯಿಯಲ್ಲಿ  ವಾಸಿಸುವ ಯುಪಿ ಜನರಿಗೆ ಅನುಕೂಲವಾಗಲಿದೆ.


COMMERCIAL BREAK
SCROLL TO CONTINUE READING

ಇದರಿಂದ ಸಾಮಾನ್ಯ ಜನರಿಗೆ ಏನು ಪ್ರಯೋಜನವಾಗಲಿದೆ ?
ವಿವಿಧ ಕಾರಣಗಳಿಗಾಗಿ ರಾಜ್ಯದಿಂದ ಹೊರ ಹೋಗಿ ಜೀವನ ನಡೆಸುತ್ತಿರುವ ಜನರ ಬಗ್ಗೆಯೂ ಉತ್ತರಪ್ರದೇಶ ಸರ್ಕಾರ ಕಾಳಜಿ ತೋರುತ್ತಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಲ್ಲಿ  ವಾಸಿಸುವ ಯುಪಿ ನಿವಾಸಿಗಳಿಗಾಗಿ ಉತ್ತರ ಪ್ರದೇಶ ಸರ್ಕಾರ ತನ್ನ ಕಚೇರಿಯನ್ನು ತೆರೆಯಲಿದೆ. ಯುಪಿ ಸರ್ಕಾರದ ಈ ಕಚೇರಿಯು ಮುಂಬಯಿಯಲ್ಲಿ  ವಾಸಿಸುವ ಯುಪಿ ಜನರ ಉದ್ಯೋಗಗಳು, ವ್ಯಾಪಾರ ಮತ್ತು ಅನುಕೂಲಕ್ಕಾಗಿ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಕೆಲಸ ಮಾಡುತ್ತದೆ.


ಇದನ್ನೂ ಓದಿ : NEET 2022 ಪರೀಕ್ಷೆ ದಿನಾಂಕ ಪ್ರಕಟ: ಶೀಘ್ರದಲ್ಲೇ ಈ ವೈಬ್‌ಸೈಟ್‌ನಲ್ಲಿ ಸಿಗಲಿದೆ ಹಾಲ್‌ ಟಿಕೆಟ್‌


ಉತ್ತರ ಭಾರತದ 50-60 ಲಕ್ಷ ಜನರು ಮುಂಬೈ ನಲ್ಲಿ ವಾಸ :
ಮುಂಬಯಿಯ ಜನಸಂಖ್ಯೆಯು ಸುಮಾರು 1.84 ಕೋಟಿ. ಅದರಲ್ಲಿ 50 ರಿಂದ 60 ಲಕ್ಷ ಜನರು ಉತ್ತರ ಭಾರತದವರು. ಅದರಲ್ಲೂ ಹೆಚ್ಚಿನವರು ಉತ್ತರಪ್ರದೇಶದವರು.  ಉತ್ತರ ಪ್ರದೇಶದಲ್ಲಿ ವಾಸಿಸುವ ಲಕ್ಷಾಂತರ ಜನರು ಮುಂಬಯಿಯಲ್ಲಿ ವಾಸಿಸುತ್ತಿದ್ದಾರೆ. ಈ ಎಲ್ಲರೂ ವಿವಿಧ ಉದ್ಯಮ, ಸೇವಾ ವಲಯ, ಚಿಲ್ಲರೆ ವ್ಯಾಪಾರ, ಸಾರಿಗೆ, ಆಹಾರದ ವ್ಯಾಪಾರ, ಕಾರ್ಖಾನೆ ಅಥವಾ ಗಿರಣಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಯೋಗಿ ಸರ್ಕಾರ ಈ ನಿರ್ಧಾರ ಕೈ ಗೊಂಡಿದೆ ಎನ್ನಲಾಗಿದೆ. 


ಇದನ್ನೂ ಓದಿ : Post Office : ಪೋಸ್ಟ್ ಆಫೀಸ್ ನಲ್ಲಿ ಮಕ್ಕಳ ಹೆಸರಿಗೆ ಈ ಖಾತೆ ತೆರೆದರೆ ಪ್ರತಿ ತಿಂಗಳು ₹2500 ಸಿಗುತ್ತೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.