ಸುಲ್ತಾನ್‌ಪುರ: 10ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ(UP Rape Case) ಎಸಗಿ ಅಶ್ಲೀಲ ವಿಡಿಯೋ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ(Uttar Pradesh)ದ ವಿಶೇಷ ನ್ಯಾಯಾಲಯವೊಂದು ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.


COMMERCIAL BREAK
SCROLL TO CONTINUE READING

ಅಪರಾಧಿ ಸೂರಜ್ ಸರೋಜ್‌ಗೆ 51,000 ರೂ. ದಂಡ


2 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ(Filming Act) ಮಾಡಿದ್ದ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿಶೇಷ ನ್ಯಾಯಾಧೀಶ ಪವನ್ ಕುಮಾರ್ ಶರ್ಮಾ ಅವರು ಅಪರಾಧಿ ಸೂರಜ್ ಸರೋಜ್‌ಗೆ 51,000 ರೂ. ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲ ಸಿ.ಎಲ್.ದ್ವಿವೇದಿ ಮಾತನಾಡಿ, ‘ಈ ಪ್ರಕರಣವು ಸಂಗ್ರಾಮಪುರ ಪೊಲೀಸ್ ಠಾಣೆ(Sangramapura Police Station)ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಯೊಬ್ಬರು 2020ರ ಜನವರಿ 25ರಂದು 10ನೇ ತರಗತಿಯಲ್ಲಿ ಓದುತ್ತಿರುವ ತನ್ನ 15 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಬಗ್ಗೆ ಸಂಗ್ರಾಮ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು’ ಅಂತಾ ಹೇಳಿದ್ದಾರೆ.


ಇದನ್ನೂ ಓದಿ: ಮುಂಬೈ ಪೊಲೀಸರಿಗೆ ಕರೆ ಮಾಡಿ ಶಾರುಖ್ ಖಾನ್ ಮನ್ನತ್ ಸ್ಫೋಟಿಸುವುದಾಗಿ ಬೆದರಿಕೆ


ಶಿಕ್ಷೆಗೊಳಗಾಗಿರುವ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕೋಳಿ ಪಾರಂಗೆ ಕರೆದೊಯ್ದು ಅತ್ಯಾಚಾರ(Rape) ಎಸಗಿದ್ದ. ಘಟನೆಯ ದಿನ ಸಂತ್ರಸ್ತೆ ಎಂದಿನಂತೆ ಓದಲು ತೆರಳಿದ್ದಳು. ಮನೆಗೆ ಹಿಂತಿರುಗುವಾಗ ಆರೋಪಿ ಸರೋಜ್ ಆಕೆಯನ್ನು ಬಲವಂತವಾಗಿ ಕೋಳಿ ಫಾರಂಗೆ ಕರೆದೊಯ್ದು ಕೃತ್ಯ ಎಸಗಿದ್ದ. ಅಲ್ಲದೆ ಈ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಎಂದು ಆರೋಪಿಸಲಾಗಿದೆ.


ದೂರದಾರರ ಪ್ರಕಾರ, ತನ್ನ ಸಹಚರರ ನೆರವಿನೊಂದಿಗೆ ಸೇರಿ ಆರೋಪಿ ಅತ್ಯಾಚಾರ ಕೃತ್ಯವನ್ನು ಚಿತ್ರೀಕರಿಸಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿದ್ದನಂತೆ. ಸಂತ್ರಸ್ತೆಯ ಆರೋಗ್ಯ ಹದಗೆಟ್ಟ ಕಾರಣ ಆಕೆಯನ್ನು ಜನವರಿ 28, 2020ರವರೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಇದನ್ನೂ ಓದಿ:ಯುಪಿ ವಿಧಾನಸಭೆ ಚುನಾವಣೆಯಿಂದೆ ಹಿಂದೆ ಸರಿದರಾ ಮಾಯಾವತಿ! ಬಿಎಸ್ ಪಿ ಸಂಸದ ಹೇಳಿದ್ದೇನು?


ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಆಕೆಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇರೆಗೆ ಆರೋಪಿ ವಿರುದ್ಧ ಜ.29, 2020ರಂದು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿತ್ತು. ಬಳಿಕ ಪೊಲೀಸರು ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎಲ್.ದ್ವಿವೇದಿ ಅವರು ಸರೋಜ್ ವಿರುದ್ಧ 5 ಸಾಕ್ಷಿಗಳು ಮತ್ತು ಇತರ ಸಾಕ್ಷ್ಯಗಳನ್ನು ಮಂಡಿಸಿದರು. ವಿಡಿಯೋ ಮಾಡಲು ಸರೋಜ್‌ಗೆ ಸಹಾಯ ಮಾಡಿದ ಆರೋಪಿಯನ್ನು ಪೊಲೀಸರು ಇನ್ನೂ ಗುರುತಿಸಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.