ಮನೆಯಲ್ಲೇ ಕುಳಿತು `ಆಧಾರ್` ಅಪ್ಡೇಟ್ ಮಾಡಿ
ಕಳೆದ ಕೆಲವು ದಿನಗಳಿಂದ ಆಧಾರ್ ಕಾರ್ಡ್ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆ ಬಗ್ಗೆ ಹಲವು ಪ್ರಶ್ನೆಗಳು ಚರ್ಚೆಯಲ್ಲಿದೆ. ಅಲ್ಲದೆ, ಜನರು ಆಧಾರ್ ಕಾರ್ಡ್ ನವೀಕರಿಸಲು(ಅಪ್ಡೇಟ್ ಮಾಡಲು) ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಆಧಾರ್ ಕಾರ್ಡ್ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ನಿಮಗೆ ಮನೆಯಲ್ಲೇ ಕುಳಿತು ನಿಮ್ಮ ಆಧಾರ್ ಅಪ್ಡೇಟ್ ಮಾಡುವ ಅವಕಾಶವಿದೆ. ನಿಮ್ಮ ಆಧಾರದ ಮೇಲೆ ನೀಡಲಾದ ಮಾಹಿತಿಯನ್ನು ಅನೇಕ ಸ್ಥಳಗಳಲ್ಲಿ ಬಳಸಲಾಗುತ್ತದೆ. ಹಾಗಾಗಿ ಅದನ್ನು ನವೀಕರಿಸುವುದು ಮುಖ್ಯವಾಗಿದೆ. ಆದರೆ, ಜನರು ಆಧಾರ್ ಕಾರ್ಡ್ ನವೀಕರಿಸಲು (ಅಪ್ಡೇಟ್ ಮಾಡಲು) ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕೆ? ಹಾಗಾದರೆ ಚಿಂತಿಸಬೇಡಿ, ನೀವು ಮನೆಯಲ್ಲೇ ಕುಳಿತು ನಿಮ್ಮ ಆಧಾರ್ ಅನ್ನು ನವೀಕರಿಸಬಹುದು. ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು.
ಮೊದಲಿಗೆ ನೀವು https://uidai.gov.in/ ಗೆ ಹೋಗಬೇಕಾಗುತ್ತದೆ. ಮೊದಲ ಪುಟವು ತೆರೆದಾಗ, ನೀವು ಕೆಳಭಾಗದಲ್ಲಿರುವ 'ನಿಮ್ಮ ಆಧಾರ್ ಕಾರ್ಡ್ ನವೀಕರಿಸಿ'(Update Your Aadhaar Card) ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದರ ನಂತರ ಹೊಸ ಪುಟ ಪ್ರತ್ಯೇಕ ಟ್ಯಾಬ್ನಲ್ಲಿ ತೆರೆಯುತ್ತದೆ. ನಿಮ್ಮ ಆಧಾರ್ ದೋಷವನ್ನು ನೀವು ಎರಡು ವಿಧಗಳಲ್ಲಿ ಸುಧಾರಿಸಬಹುದು ಎಂದು ತಿಳಿಸಲಾಗಿದೆ. ಮೊದಲ ಪ್ರಕ್ರಿಯೆಯು ಆನ್ಲೈನ್ನಲ್ಲಿದೆ ಮತ್ತು ಎರಡನೆಯ ಪ್ರಕ್ರಿಯೆಯ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಮಾಡಬೇಕಾಗುತ್ತದೆ. ಅದು ಆಫ್ಲೈನ್ ಪ್ರಕ್ರಿಯೆಯಾಗಿದೆ.
'Fill up 4-Step Online Request' ಅಡಿಯಲ್ಲಿ 4 ಹಂತಗಳನ್ನು ನೀಡಲಾಗಿದೆ. ಆಧಾರ್ ಅಪ್ಡೇಟ್ ಗಾಗಿ 'ಅಪ್ಡೇಟ್ ಆಧಾರ್ ಡಾಟಾ' ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಇದರ ನಂತರ, ಪುಟದಲ್ಲಿ ನಾಲ್ಕು ಪ್ರಶ್ನೆಗಳನ್ನು ತೆರೆಯಲಾಗುತ್ತದೆ.
* ಯಾವ ವ್ಯಕ್ತಿ ಈ ಪೋರ್ಟಲ್ ಅನ್ನು ಬಳಸಬಹುದು? ಈ ಪ್ರಶ್ನೆಗೆ ಉತ್ತರವನ್ನು ಅದರ ಕೆಳಗೆ ನೋಡಬಹುದು.
* ಈ ಪೋರ್ಟಲ್ ಮೂಲಕ ಯಾವ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು?
ಈ ಪೋರ್ಟಲ್ ಮೂಲಕ ನಿವಾಸಿಗಳು ತಮ್ಮ ಹೆಸರು, ವಿಳಾಸ, ಲಿಂಗ, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ನವೀಕರಿಸಬಹುದು. ವಿವರಗಳಿಗಾಗಿ ಎರಡನೇ ಪ್ರಶ್ನೆಯ ಉತ್ತರದಲ್ಲಿ ನೀವು ಕ್ಲಿಕ್ ಮಾಡಬಹುದು.
* ಅಪ್ಡೇಟ್ ವಿನಂತಿಯೊಂದಿಗೆ ಯಾವ ದಾಖಲೆಗಳನ್ನು ಒದಗಿಸಬೇಕು ಎಂಬ ಮಾಹಿತಿ ತಿಳಿಯಲು ಮೂರನೇ ಪ್ರಶ್ನೆಯ ಉತ್ತರದ ಕೆಳಗೆ refer link ಎಂಬ ಬಟನ್ ಕ್ಲಿಕ್ ಮಾಡಿ.
ನಂತರ ನೀವು 'To submit your update/ correction request online please' ಎಂಬುದರ ಮೇಲೆ ಕ್ಲಿಕ್ ಮಾಡಿ.
ಇದರ ನಂತರ ನೀವು ಮುಂದಿನ ಪುಟದಲ್ಲಿ 'Aadhaar Self Service Update Portal' ಗೆ ಬರುತ್ತೀರಿ. ಸುಧಾರಣೆಯ ಪ್ರಕ್ರಿಯೆಗಾಗಿ, ಮೊದಲು ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆ ನಮೂದಿಸಿದ ನಂತರ, ನಿಮ್ಮ ಮೊಬೈಲ್ನಲ್ಲಿ ನೀವು OTP ಯನ್ನು ಸ್ವೀಕರಿಸುತ್ತೀರಿ.
ಮುಂದಿನ ಪುಟದಲ್ಲಿ ನೀವು ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ID ಇವುಗಳಲ್ಲಿ ಯಾವುದನ್ನು ನವೀಕರಿಸಬೇಕೋ ಅದನ್ನು ಟಿಕ್ ಮಾಡಬೇಕು.
ನಂತರ Data Update Request ಪುಟ ತೆರೆಯುತ್ತದೆ. ನೀವು ಇದರಲ್ಲಿ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು. ಈ ಮಾಹಿತಿಯನ್ನು ಸಲ್ಲಿಸಿದ ನಂತರ, ನೀವು ಅದರ ಪ್ರಿವ್ಯೂ ನೋಡಿ, ಅದರಲ್ಲಿ ಯಾವುದೇ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸಬಹುದು.
ನಿಮ್ಮ ಮಾಹಿತಿಯನ್ನು ಸಲ್ಲಿಸಿದ ನಂತರ ನೀವು ಡಾಕ್ಯುಮೆಂಟ್ ಅಪ್ಲೋಡ್ ಪುಟಕ್ಕೆ ಹೋಗಬೇಕಾಗುತ್ತದೆ. ಈ ವಿಭಾಗದಲ್ಲಿ ನೀವು ಬದಲಾವಣೆಗೆ ಯಾವ ದಾಖಲೆ(ಡಾಕ್ಯುಮೆಂಟ್) ಅನ್ನು ಒದಗಿಸುತ್ತೀರಿ ಎಂಬುದನ್ನು ನೀವು ತುಂಬಬೇಕು. ನಂತರ, ಅದರ ನಕಲನ್ನು ಇದಕ್ಕೆ ಜೋಡಿಸಬೇಕು.
ಮುಂದಿನ ಪುಟದಲ್ಲಿ ನೀವು ಬಿಪಿಓ ಸೇವೆ ಒದಗಿಸುವವರ ಹೆಸರನ್ನು ಆರಿಸಬೇಕಾಗುತ್ತದೆ. ಅದನ್ನು ಸಲ್ಲಿಸಿದ ನಂತರ ನಿಮ್ಮ ವಿನಂತಿಯನ್ನು ಕಳುಹಿಸಿ. ಇದರ ನಂತರ ನಿಮ್ಮ ಮೊಬೈಲ್ನಲ್ಲಿ ಅಪ್ಡೇಟ್ ಗೆ ಸಂಬಂಧಿಸಿದಂತೆ ಒಂದು SMS ಬರುತ್ತದೆ. ಈ ಸಂದೇಶದಲ್ಲಿ URN ಸಂಖ್ಯೆ ಸಹ ನೀಡಲಾಗುವುದು. ನಿಮ್ಮ ವಿನಂತಿಯ ಅಪ್ಡೇಟ್ ತಿಳಿಯಲು ಇದು ಸಹಾಯಮಾಡುತ್ತದೆ.