ನವದೆಹಲಿ: ಉತ್ತರಪ್ರದೇಶದ ಹಾಪುರ ಜಿಲ್ಲೆಯ ಪಿಲ್ಖುವಾ ನಿವಾಸಿ ಶಿವಾಂಗಿ ಗೋಯಲ್ ಅವರು ಯುಪಿಎಸ್‌ಸಿಯಲ್ಲಿ 177ನೇ ರ‍್ಯಾಂಕ್‌ ಪಡೆಯುವ ಮೂಲಕ ತಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಗೌರವ ತಂದಿದ್ದಾರೆ. ಆದರೆ, ಅವರ ಯಶಸ್ಸಿನ ಪಯಣ ತುಂಬಾ ಕಷ್ಟಕರವಾಗಿತ್ತು. ಶಿವಾಂಗಿಗೆ ಮದುವೆಯಾಗಿದ್ದು, ಮಗಳಿದ್ದಾಳೆ. ಅತ್ತೆ-ಮಾವಂದಿರ ಕಿರುಕುಳದಿಂದ ಬೇಸತ್ತ ಆಕೆ ತನ್ನ ತಂದೆ-ತಾಯಿಯೊಂದಿಗೆ ವಾಸಿಸತೊಡಗಿದಳು. ಪತಿಯೊಂದಿಗಿನ ಅವರ ವಿಚ್ಛೇದನ ಪ್ರಕರಣವೂ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

‘ಸಮಾಜದಲ್ಲಿರುವ ವಿವಾಹಿತ ಮಹಿಳೆಯರು ತಮ್ಮ ಅತ್ತೆ ಮನೆಯಲ್ಲಿ ಏನಾದರೂ ಕಿರುಕುಳದಂತಹ ಸಮಸ್ಯೆಗಳನ್ನು ಎದುರಿಸಿದರೆ ಭಯಬಡಬಾರದು. ನಿಮ್ಮ ಕಾಲಿನ ಮೇಲೆ ನೀವು ನಿಲ್ಲಬಲ್ಲಿರಿ ಎಂಬುದನ್ನು ಅವರಿಗೆ ತೋರಿಸಿ. ಮಹಿಳೆಯರು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶವನ್ನು ನಾನು ನೀಡಲು ಬಯಸುತ್ತೇನೆ. ಚೆನ್ನಾಗಿ ಓದಿ ಕಷ್ಟಪಟ್ಟು ಶ್ರಮಿಸಿದರೆ ಐಎಎಸ್‌ ಆಗಬಹುದು’ ಎಂದು ಶಿವಾಂಗಿ ತಮ್ಮ ಜೀವನದ ಕೆಟ್ಟ ಘಟನೆಗಳನ್ನು ಮೆಲಕು ಹಾಕುವ ಮೂಲಕ ಮಹಿಳೆಯರಿಗೆ ಧೈರ್ಯ ಹೇಳಿದ್ದಾರೆ.  


ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳೇ ಗಮನಿಸಿ : SBI ನಲ್ಲಿ 40 ಹುದ್ದೆಗಳಿಗೆ ಅರ್ಜಿ, ಜೂನ್ 7 ಲಾಸ್ಟ್ ಡೇಟ್!


ಮದುವೆಗೂ ಮುನ್ನವೇ ಐಎಎಸ್ ಆಗಬೇಕೆಂಬ ಆಸೆ ಇತ್ತು ಎಂದು ಅವರು ಹೇಳಿದ್ದಾರೆ. 2 ಬಾರಿ ಪ್ರಯತ್ನಿಸಿ ವಿಫಲರಾದ ಶಿವಾಂಗಿ ನಂತರ ಮದುವೆಯಾದರು. ಬಳಿಕ ಅವರು ತಮ್ಮ ಅತ್ತೆಯಿಂದ ಕೌಟುಂಬಿಕ ಹಿಂಸೆಯನ್ನು ಅನುಭವಿಸಿದ ಕಾರಣ ತಮ್ಮ 7 ವರ್ಷದ ಮಗಳೊಂದಿಗೆ ತನ್ನ ತಾಯಿಯ ಮನೆಗೆ ಮರಳಿದಳು.


‘ನನ್ನ ತಂದೆಯವರು ನೀನು ಏನು ಮಾಡಬೇಕೋ ಅದನ್ನು ಮಾಡು ಎಂದು ಪ್ರೋತ್ಸಾಹಿಸಿದರು. ಆಗ ನನಗೆ ಮತ್ತೆ UPSCಗೆ ಏಕೆ ತಯಾರಿ ಮಾಡಬಾರದು ಎಂಬ ಆಲೋಚನೆ ಬಂದಿತು. ಬಾಲ್ಯದಿಂದಲೂ ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ನಂತರ ಅಂತಿಮವಾಗಿ ಆ ಶುಭದಿನ ನನ್ನ ಜೀವನದಲ್ಲಿ ಬಂದಿದೆ’ ಎಂದು ಶಿವಾಂಗಿ ಹೇಳಿದ್ದಾರೆ. ತಮ್ಮ ಯಶಸ್ಸಿನ ಶ್ರೇಯವನ್ನು ತನ್ನ ಹೆತ್ತವರು ಮತ್ತು ಮಗಳು ರೈನಾಗೆ ಅರ್ಪಿಸಿದ್ದಾರೆ. ಹಾಪುರ ನಿವಾಸಿಯಾಗಿರುವ ಶಿವಾಂಗಿಯವರ ತಂದೆ ರಾಜೇಶ್ ಗೋಯಲ್ ಉದ್ಯಮಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.


ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಎಂಎನ್ಎಸ್ ನಾಯಕ ರಾಜ್ ಠಾಕ್ರೆ


ಶಾಲೆಯಲ್ಲಿದ್ದಾಗ ಪ್ರಾಂಶುಪಾಲರು ಯುಪಿಎಸ್‌ಸಿಗೆ ತಯಾರಿ ನಡೆಸುವಂತೆ ಹೇಳಿದ್ದರು. ಅಂದಿನಿಂದ ಐಎಎಸ್ ಆಗಬೇಕೆಂಬುದು ನನ್ನ ಕನಸಾಯಿತು. ಕಠಿಣ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಶಿವಾಂಗಿ ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಸ್ವಯಂ ಅಧ‍್ಯಯನ ಮಾಡಿದ ಅವರು ಸತತ ಪರಿಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ. ಸಮಾಜಶಾಸ್ತ್ರವು ಅವರು ಆಯ್ಕೆ ಮಾಡಿಕೊಂಡಿದ್ದ ವಿಷಯವಾಗಿತ್ತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.