IFS Tamali Shah UPSC Success Story: ಭಾರತದಲ್ಲಿ UPSC ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿವರ್ಷವೂ ಲಕ್ಷಗಟ್ಟಲೆ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಈ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ದೇಶದ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಲು ಸಮರ್ಥರಾಗುತ್ತಾರೆ. ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಗಾಗಿ ಹಲವಾರು ವರ್ಷಗಳಿಂದ ಕೋಚಿಂಗ್ ತೆಗೆದುಕೊಳ್ಳುವ ಮೂಲಕ ನಿರಂತರ ಪ್ರಯತ್ನ ಮಾಡುತ್ತಾರೆ. ಆದರೆ ಕೋಚಿಂಗ್‌ ಇಲ್ಲದೆಯೂ ಕೆಲವರು ಈ ಕಠಿಣ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುತ್ತಾರೆ. ಯಾವುದೇ ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಧಿಕಾರಿಗಳಾಗುವ ಅನೇಕ ಅಭ್ಯರ್ಥಿಗಳಿದ್ದಾರೆ. ಕೇವಲ 23ನೇ ವಯಸ್ಸಿನಲ್ಲಿ ಈ ಯಶಸ್ಸನ್ನು ಸಾಧಿಸಿದ ಅಂತಹ ಅಭ್ಯರ್ಥಿಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. 


COMMERCIAL BREAK
SCROLL TO CONTINUE READING

23ನೇ ವಯಸ್ಸಿನಲ್ಲಿ ತಮಾಲಿ ಸಹಾ ತಮ್ಮ ಮೊದಲ ಪ್ರಯತ್ನದಲ್ಲಿಯೇ ದೇಶದ ಅತ್ಯಂತ ಸ್ಪರ್ಧಾತ್ಮಕ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಈ ಯಶಸ್ಸಿನ ಕಥೆಯು ದೇಶದಾದ್ಯಂತ ಇರುವ ಲಕ್ಷಾಂತರ ಸ್ಪರ್ಧಾ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ. ಅಚಲ ನಂಬಿಕೆ, ಕಠಿಣ ಪರಿಶ್ರಮ ಮತ್ತು ಸರಿಯಾದ ಕಾರ್ಯತಂತ್ರದೊಂದಿಗೆ ಯಾವುದೇ ಸಾಧನೆ ಮಾಡಬಹುದು ಎಂದು ತಮಾಲಿ ಸಹಾ ತೋರಿಸಿಕೊಟ್ಟಿದ್ದಾರೆ.  


ಇದನ್ನೂ ಓದಿ:  ICSE Board 12th Result 2024: ಸಿಐಎಸ್‌ಸಿಇ 10 ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ.. ಮಾರ್ಕ್‌ಶೀಟ್ ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್‌


ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳ ಸ್ಥಳೀಯರಾದ ತಮಾಲಿ ಸಹಾ ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆಯಲು ಕೋಲ್ಕತ್ತಾಗೆ ತೆರಳುವ ಮೊದಲು ತಮ್ಮ ಊರಿನಲ್ಲಿಯೇ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಪದವಿಯ ಸಮಯದಲ್ಲಿ ತಮಾಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದರು. ಅದರಂತೆ 2020ರಲ್ಲಿ ಅವರು ತಮ್ಮ ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರು. ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಅವರು ತಾನು ಗುರಿ ಸಾಧಿಸಲು ತೋರಿದ ದಣಿವರಿಯದ ಬದ್ಧತೆಯು ಫಲ ನೀಡಿತು ಎಂದು ಹೇಳಿಕೊಂಡರು.


ತಮಾಲಿ ಸಹಾ ಪ್ರತಿಷ್ಠಿತ ಹುದ್ದೆಯಾದ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯಾಗಿ ನೇಮಕಗೊಂಡರು. ಅವರ ತವರು ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲ್ಪಟ್ಟರು. ಅವರ ಈ ಸಾಧನೆಯಿಂದ ಕುಟುಂಬಸ್ಥರು, ಸ್ನೇಹಿತರು ಮತ್ತು ಸಮುದಾಯ ಹೆಮ್ಮೆ ಪಡುವಂತಾಯಿತು. ಅವರ ಈ ಅತ್ತ್ಯುನ್ನತ ಸಾಧನೆ ನಾಗರಿಕ ಸೇವಕರಾಗಿ ಸೇವೆ ಸಲ್ಲಿಸುವ ಅಸಂಖ್ಯಾತ ಆಕಾಂಕ್ಷಿಗಳಿಗೆ ಸ್ಫೂರ್ತಿ ನೀಡಿದೆ.


ಇದನ್ನೂ ಓದಿ: Lok Sabha Polls 2024 3rd Phase : ಮೂರನೇ ಹಂತದ ಚುನಾವಣೆಗೆ ಕೌಂಟ್‌ಡೌನ್.. ಅಮಿತ್ ಶಾ ಸೇರಿದಂತೆ ಕಣದಲ್ಲಿರುವ ಘಟಾನುಘಟಿಗಳು ಇವರು


ವಯಸ್ಸು ಅಥವಾ ಸಮಸ್ಯೆಗಳು ವೃತ್ತಿಜೀವನಕ್ಕೆ ಅಡ್ಡಿಯಾಗುವುದಿಲ್ಲ. ಸಾಧನೆ ಮಾಡುವ ಉತ್ಸಾಹ ಮತ್ತು ಹುಮ್ಮಸ್ಸು ಇದ್ದರೆ ಎಂತಹದ್ದೇ ಕಠಿಣ ಪರೀಕ್ಷೆ ಇದ್ದರೂ ನಾವು ಯಶಸ್ಸು ಸಾಧಿಸಬಹುದು. ಕಠಿಣ ಪರಿಶ್ರಮ ಮತ್ತು ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಓದಿದರೆ ಪ್ರತಿಯೊಬ್ಬರೂ ಸಹ ಯಶಸ್ಸು ಸಾಧಿಸಬಹುದು ಎಂದು ಅವರು ಸ್ಪರ್ಧಾಕಾಂಕ್ಷಿಗಳಿಗೆ ಸಲಹೆ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.