ಆಂತರಿಕ ರಾಜಕೀಯದಿಂದ ಬೇಸತ್ತು ಕಾಂಗ್ರೆಸ್ ತೊರೆದ ಉರ್ಮಿಳಾ ಮಾತೊಂಡ್ಕರ್
ಕಾಂಗ್ರೆಸ್ ಪಕ್ಷದ ಮುಂಬೈ ಘಟಕದೊಳಗಿನ ಆಂತರಿಕ ಕಲಹದಿಂದ ಬೇಸತ್ತು ಈಗ ಉರ್ಮಿಳಾ ಮಾತೊಂಡಕರ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ನವದೆಹಲಿ: ಕಾಂಗ್ರೆಸ್ ಪಕ್ಷದ ಮುಂಬೈ ಘಟಕದೊಳಗಿನ ಆಂತರಿಕ ಕಲಹದಿಂದ ಬೇಸತ್ತು ಈಗ ಉರ್ಮಿಳಾ ಮಾತೊಂಡಕರ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ಎಪ್ರಿಲ್- ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮುಂಬೈ ಉತ್ತರ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದ 45 ವರ್ಷದ ನಟಿ ಹಾಗೂ ರಾಜಕಾರಣಿ ಉರ್ಮಿಳಾ ಮಾತೊಂಡಕರ್ ಮಾಜಿ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ಡಿಯೋರಾಗೆ ಕಳಿಸಿರುವ ಪತ್ರಕ್ಕೆ ಸಂಬಂಧಿಸಿದ ಹಾಗೆ ಕಳವಳ ವ್ಯಕ್ತಪಡಿಸಿದ್ದರು.
ಪತ್ರವನ್ನು ಉಲ್ಲೇಖಿಸಿ ಮಾತೋಂಡ್ಕರ್ ಪತ್ರಿಕಾ ಟಿಪ್ಪಣಿಯಲ್ಲಿ ಗೌಪ್ಯ ಸಂವಹನವು ಮಾಧ್ಯಮಗಳಿಗೆ ಅನುಕೂಲಕರವಾಗುವಂತೆ ಸೋರಿಕೆ ಮಾಡಲಾಗಿದೆ, ಅದು ನನ್ನ ಪ್ರಕಾರ ನಿರ್ದಯ ದ್ರೋಹವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಅವರು ಆಗ ರಾಹುಲ್ ಗಾಂಧಿ ಮತ್ತು ಹಿರಿಯ ನಾಯಕ ರಂದೀಪ್ ಸುರ್ಜೆವಾಲಾ ಅವರು ಸ್ವಾಗತಿಸಿದರು ಮತ್ತು ತದನಂತರ ತಕ್ಷಣ ಅವರು ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಹಿರಿಯ ನಾಯಕ ಗೋಪಾಲ್ ಶೆಟ್ಟಿ ವಿರುದ್ಧ ಸೋತರು.
ಸಕ್ರೀಯ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಉರ್ಮಿಳಾ ರಂಗೀಲಾ (1995), ಜುಡೈ (1997) ಮತ್ತು ಮಾಸ್ಟ್ (1999) ನಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು.