ನವದೆಹಲಿ: ಯುಎಸ್-ಇರಾನ್ ಮಧ್ಯೆ ಏರ್ಪಟ್ಟ ಉದ್ವಿಗ್ನತೆಯ ಹಿನ್ನೆಲೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ  ಕೋಲಾಹಲ ಸೃಷ್ಟಿಯಾಗಿದೆ. ಮಧ್ಯಾಹ್ನ 2.20ಕ್ಕೆ, ಸೆನ್ಸೆಕ್ಸ್ ಸೂಚ್ಯಂಕ 812 ಪಾಯಿಂಟ್‌ಗಳ ಕುಸಿತ ಕಂಡು 40,652 ಮಟ್ಟವನ್ನು ತಲುಪಿದೆ. ಇದೇ ವೇಳೆ ನಿಫ್ಟಿ ಸೂಚ್ಯಂಕ ಕೂಡ 12,000 ಕ್ಕಿಂತಲೂ ಕೆಳಗೆ ಕುಸಿದಿದೆ.


COMMERCIAL BREAK
SCROLL TO CONTINUE READING

ಇದಲ್ಲದೆ ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ 700 ಪಾಯಿಂಟ್‌ ಗಳ ಕುಸಿತ ದಾಖಲಿಸಿದ್ದರೆ, ನಿಫ್ಟಿ ಸಹ 200 ಪಾಯಿಂಟ್ಗಳ ಕುಸಿತ ಕಂಡಿದೆ. ಸೆನ್ಸೆಕ್ಸ್ ವ್ಯವಹಾರದಲ್ಲಿ 40,762 ಕೆಳಮಟ್ಟಕ್ಕೆ ತಲುಪಿದೆ. ಇದೇ ವೇಳೆ, ನಿಫ್ಟಿ ಕೂಡ 12015 ಮಟ್ಟಕ್ಕೆ ಕುಸಿದಿದೆ. ಪ್ರಸ್ತುತ, ಸೆನ್ಸೆಕ್ಸ್ ಸೂಚ್ಯಂಕ  670 ಪಾಯಿಂಟ್‌ಗಳ ಕುಸಿತ ಕಂಡು 40794.33 ಕ್ಕೆ ವಹಿವಾಟುನಡೆಸುತ್ತಿದ್ದರೆ, ನಿಫ್ಟಿ ಸೂಚ್ಯಂಕ ಕೂಡ 12034 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಸೂಚ್ಯಂಕ  ಕಳೆದ ಮೂರು ವಾರಗಳ ತನ್ನ ಕನಿಷ್ಠ ಮಟ್ಟವನ್ನು ತಲುಪಿದೆ.


ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?
ಸೆನ್ಸೆಕ್ಸ್ ಒಟ್ಟು ೩೦ ಷೇರುಗಳ ಪೈಕಿ ೨೬ರಲ್ಲಿ ಕುಸಿತ ಕಂಡು ವ್ಯವಹರಿಸುತ್ತಿದ್ದರೆ, ನಿಫ್ಟಿ ಕೂಡ ೫೦ ರಲ್ಲಿ ಒಟ್ಟು ೪೭ ಷೇರುಗಳ ಕುಸಿತ ಕಂಡು ವ್ಯವಹಾರ ಮುಂದುವರೆಸಿದ್ದವು. ಡಾಲರ್ ಎದುರು ರೂಪಾಯಿ ಮೌಲ್ಯ ೭೨ ರೂ.ಗಳಿಗಿಂತ ಕೆಳಗೆ ಜಾರಿದ್ದು, ಕಚ್ಚಾತೈಲಗಳ ಬೆಲೆ ಕೂಡ ಗಗನಮುಖಿಯಾಗಿದೆ.


ಕಚ್ಚಾ ತೈಲಗಳ ಬೆಲೆಯಲ್ಲಿ ಶೇ.4 ರಷ್ಟು ವೃದ್ಧಿಯಾಗಿದೆ. ಮಧ್ಯಏಷ್ಯಾನಲ್ಲಿ ಏರ್ಪಟ್ಟ ಈ ಉದ್ವಿಗ್ನತೆಯ ಕಾರಣ ಜಾಗತಿಕ ಮಟ್ಟದ ಸಪ್ಲೈ ಮೇಲೆ ಪರಿಣಾಮ ಉಂಟಾಗಿದೆ. ಬ್ರೆಂಟ್ ಕ್ರೂಡ್ ಸದ್ಯ ಪ್ರತಿ ಬ್ಯಾರೆಲ್ ಗೆ $೭೦.06ಕ್ಕೆ ಮಾರಾಟವಾಗುತ್ತಿದೆ.


ಚಿನ್ನ ಖರೀದಿಗೆ ಧಾವಿಸಿದ ಹೂಡಿಕೆದಾರರು
ಮಾರುಕಟ್ಟೆಯಲ್ಲಿ ಏರ್ಪಟ್ಟ ಈ ವಾತಾವರಣದ ಹಿನ್ನೆಲೆ ಹೂಡಿಕೆದಾರರು ಚಿನ್ನ ಖರೀದಿಗೆ ಹೆಚ್ಚಿನ ಒಲವು ತೋರಿದ್ದು, ಚಿನ್ನದ ಬೆಲೆ ಕೂಡ ನಿರಂತರವಾಗಿ ಏರುತ್ತಲೇ ಇದೆ. ಸದ್ಯ ಪ್ರತಿ ೧೦ ಗ್ರಾಂ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ರೂ.೪೧,೦೧೦ಕ್ಕೆ ತಲುಪಿದೆ. ಚಿನ್ನದಲ್ಲಿ ಹೂಡಿಕೆ ಹೂಡಿಕೆದಾರರಿಗೆ ಸುರಕ್ಷಿತವಾಗಿರುವ ಕಾರಣ ಅವರು ಚಿನ್ನ ಖರೀದಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.