ಕಾಸ್ಗಂಜ್ : ಠಾಕೂರ್ ಸಮುದಾಯದ ಪ್ರಾಬಲ್ಯವಿರುವ ಉತ್ತರಪ್ರದೇಶ ಕಸ್ಗಂಜ್ ಜಿಲ್ಲೆಯ ನಿಜಾಮ್ಪುರ ಗ್ರಾಮದಲ್ಲಿ ಜಾತಿಯ ಬೇಧ ಭಾವಗಳನ್ನು ಮರೆತು ದಲಿತ ಪುರುಷನ ಮದುವೆ ಮೆರವಣಿಗೆಯನ್ನು ನಡೆಸಲಾಯಿತು. 


COMMERCIAL BREAK
SCROLL TO CONTINUE READING

80 ವರ್ಷಗಳ ಬಳಿಕ ಗ್ರಾಮದಲ್ಲಿ ಓರ್ವ ದಲಿತನ ಮದುವೆ ಮೆರವಣಿಗೆಯನ್ನು ಬಿಗಿ ಪೋಲಿಸ್ ಭದ್ರತೆಯೊಂದಿಗೆ ನೆರವೇರಿಸಲಾಯಿತು. ಏಕೆಂದರೆ ನಿಜಾಂಪುರ ಗ್ರಾಮದಲ್ಲಿ ಇದುವರೆಗೂ ದಲಿತರಿಗೆ ಕುದುರೆ ಸಾರೋಟನ್ನು ಏರುವ ಅವಕಾಶವಿರಲಿಲ್ಲ. ಆದರೆ ಪೊಲೀಸರು ರಕ್ಷಣೆ ಒದಗಿಸುವ ಭರವಸೆ ನೀಡಿದ ತರುವಾಯ ಈ ಕಾರ್ಯಕ್ರಮ ಪೋಲಿಸ್ ಬ್ಯಾಂಡ್'ನೊಂದಿಗೆ ಅದ್ಧೂರಿಯಾಗಿ ನೆರವೇರಿತು.



ಕಾಸ್ಗಂಜ್ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಪವಿತ್ರ ಮೋಹನ್ ತ್ರಿಪಾಠಿ ಮಾತನಾಡಿ, ಮೆರವಣಿಗೆ ನಡೆಸುವಾಗ ಯಾವುದೇ ತೊಂದರೆ ಆಗಿಲ್ಲ. ವಿವಾಹ ಸಮಾರಂಭ ಮುಕ್ತಾಯವಾಗುವವರೆಗೆ ನಾವು ಸಾಕಷ್ಟು ಪೋಲಿಸ್ ಸಿಬ್ಬಂಧಿಯನ್ನು ನಿಯೋಜಿಸಿದ್ದೇವೆ. ಮದುವೆಯ ಬಳಿಕ ನಮ್ಮ ಸಿಬ್ಬಂದಿ ಗ್ರಾಮದಲ್ಲಿ ಎಚ್ಚರಿಕೆ ವಹಿಸಿರುವುದರಿಂದ ಅನಿರೀಕ್ಷಿತ ಘಟನೆಗಳನ್ನು ತಡೆಯಲಿದ್ದಾರೆ. ಸಂಜಯಿ ಜಾಟವ್ ಮತ್ತು ಶೀತಲ್ ಅವರ ಮದುವೆ ಹಲವು ಅಡೆತಡೆಗಳು ಎದುರಾಗಿದ್ದವು. ಆದರೆ ಇದಕ್ಕಾಗಿ ಸಂಜಯ್ ಅಲಹಾಬಾದ್ ಹೈಕೋರ್ಟ್ ವರೆಗೆ ಹೋಗಿ ಹೋರಾಟ ಮಾಡಿದ್ದರು ಎಂದು ತಿಳಿಸಿದರು.



ಈ ಮೆರವಣಿಗೆ ಬಗ್ಗೆ ಮಾತಂಡಿದ ವಧು ಶೀತಲ್, ಮೇಲ್ವರ್ಗದವರು ನಮ್ಮ ಮದುವೆ ಮೆರವಣಿಗೆ ನಡೆಯಲು ಸಾಧ್ಯವಿಲ್ಲ. ಒಂದು ವೇಳೆ ನಡೆದರೆ ನಮ್ಮ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಪೋಲಿಸ್ ಭದ್ರತೆ ದೊರೆತ ಹಿನ್ನೆಲೆಯಲ್ಲಿ ನಮ್ಮ ಭಯ ಕಡಿಮೆ ಆಗಿದೆ ಎಂದಿದ್ದಾರೆ.