ಉತ್ತರ ಪ್ರದೇಶದಲ್ಲಿ ಅ. 26 ರಿಂದ ಬದಲಾಗಲಿದೆ ಎಮರ್ಜೆನ್ಸಿ ನಂಬರ್
ಹೊಸ ತುರ್ತು ಸಂಖ್ಯೆ(new emergency number) `112` ಅನ್ನು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. 112 ತಾಂತ್ರಿಕವಾಗಿ ಹೆಚ್ಚು ಸುಧಾರಿತವಾಗಿದೆ ಮತ್ತು ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಯುಪಿ ಪೊಲೀಸರು ಭರವಸೆ ನೀಡಿದ್ದಾರೆ.
ಉತ್ತರ ಪ್ರದೇಶ: ಯುಪಿ ಪೊಲೀಸರ ತುರ್ತು ಸಂಖ್ಯೆಯನ್ನು ಈಗ 100 ರಿಂದ 112 ಕ್ಕೆ ಬದಲಾಯಿಸಲಾಗಿದೆ. ಹೊಸ ತುರ್ತು ಸಂಖ್ಯೆ ಅಕ್ಟೋಬರ್ 26 ರಿಂದ ಕಾರ್ಯರೂಪಕ್ಕೆ ಬರಲಿದೆ.
ಉತ್ತರ ಪ್ರದೇಶದಲ್ಲಿ ಈಗ ಎಲ್ಲಾ ಪ್ರಮುಖ ತುರ್ತು ಸೇವೆಗಳಿಗೆ (ಪೊಲೀಸ್, ಅಗ್ನಿಶಾಮಕ ಸೇವೆಗಳು, ಆಂಬ್ಯುಲೆನ್ಸ್ ಮತ್ತು ಎಸ್‌ಡಿಆರ್‌ಎಫ್) ಸೌಲಭ್ಯವನ್ನು ಒಂದೇ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಪಡೆಯಬಹುದು.
ಹೊಸ ತುರ್ತು ಸಂಖ್ಯೆ '112' ಅನ್ನು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಹೊಸ ತುರ್ತು ಸಂಖ್ಯೆ - 112 - ತಾಂತ್ರಿಕವಾಗಿ ಹೆಚ್ಚು ಸುಧಾರಿತವಾಗಿದೆ ಮತ್ತು ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಯುಪಿ ಪೊಲೀಸರು ಭರವಸೆ ನೀಡಿದ್ದಾರೆ.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರವು 2016 ರಲ್ಲಿ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ 100 ಅನ್ನು ಡಯಲ್ ಮಾಡಿ ಎಂಬ ಸೇವೆಯನ್ನು ಆರಂಭಿಸಿತ್ತು.
ದೆಹಲಿಯಲ್ಲಿ ಹೊಸ ಇಆರ್‌ಎಸ್‌ಎಸ್ -112 ವ್ಯವಸ್ಥೆಯನ್ನು ಜಾರಿಗೊಳಿಸುವುದರೊಂದಿಗೆ, ಇನ್ನೂ ವೇಗವಾಗಿ ಜನರಿಗೆ ಅಗತ್ಯ ನೆರವು ದೊರೆಯುತ್ತಿದೆ. ದೆಹಲಿ ಪೊಲೀಸರು ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಕ್ಷಣದ ಸಹಾಯಕ್ಕಾಗಿ ಅಳವಡಿಸಿಕೊಂಡಿದ್ದು, ಇದನ್ನು ಗೃಹ ಸಚಿವ ಜಿ. ಕಿಶನ್ ರೆಡ್ಡಿ ಪ್ರಾರಂಭಿಸಿದರು.