ನವದೆಹಲಿ: ಉತ್ತರ ಪ್ರದೇಶದ ಸರ್ಕಾರವು ಸೆಪ್ಟೆಂಬರ್ ತಿಂಗಳಲ್ಲಿ ಇಡೀ ಯುನೈಟೆಡ್ ಸ್ಟೇಟ್ಸ್‌ಗಿಂತ ಸರಾಸರಿ ದೈನಂದಿನ COVID-19 ಡೋಸ್‌ಗಳನ್ನು ನೀಡುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಸದ್ಯ ಉತ್ತರ ಪ್ರದೇಶವು ದಿನಕ್ಕೆ 11 ಕೋಟಿಗೂ ಹೆಚ್ಚು ಕರೋನವೈರಸ್ ಡೋಸ್‌ಗಳನ್ನು ನೀಡುತ್ತಿದೆ, ಅದೇ ರೀತಿಯಾಗಿ ಅಮೇರಿಕಾ ಸುಮಾರು 8 ಕೋಟಿ ಡೋಸ್‌ಗಳನ್ನು ನಿರ್ವಹಿಸುತ್ತಿದೆ ಎನ್ನಲಾಗಿದೆ.ಇಲ್ಲಿಯವರೆಗೆ, ಉತ್ತರ ಪ್ರದೇಶದಲ್ಲಿ ಸುಮಾರು 7 ಕೋಟಿ ಜನರು ಕನಿಷ್ಠ ಒಂದು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ, ಆದರೆ, ರಾಜ್ಯದಲ್ಲಿ COVID-19 ಲಸಿಕೆ ವ್ಯಾಪ್ತಿಯು 8.47 ಕೋಟಿಗಳನ್ನು ಮೀರಿದೆ.


ಇದನ್ನೂ ಓದಿ-ವಿಶ್ವಾಸಮತವನ್ನು ಗೆದ್ದ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ಡಿಯುಬಾ


ಗುಜರಾತ್ (4.80 ಲಕ್ಷ) ರವರು ದೈನಂದಿನ ಪ್ರಮಾಣ  ಮೆಕ್ಸಿಕೋಗಿಂತಲೂ ಅಧಿಕ , ಕರ್ನಾಟಕವು (3.82 ಲಕ್ಷ) ರಷ್ಯಾಗಿಂತ, ಮಧ್ಯಪ್ರದೇಶ (3.71 ಲಕ್ಷ) ಫ್ರಾನ್ಸ್ ಗಿಂತ ಮತ್ತು ಹರಿಯಾಣ (1.52 ಲಕ್ಷ) ಕೆನಡಾಗಿಂತ ಹೆಚ್ಚಿನ ಪ್ರಮಾಣದಲ್ಲಿ ದೈನಂದಿನ ಲಸಿಕೆಯನ್ನು ವಿತರಿಸುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತವು ಈ ವರ್ಷ ಜನವರಿಯಲ್ಲಿ ತನ್ನ ರಾಷ್ಟ್ರವ್ಯಾಪಿ COVID-19 ಲಸಿಕೆ ಅಭಿಯಾನವನ್ನು ಆರಂಭಿಸಿತು ಮತ್ತು ಇಲ್ಲಿಯವರೆಗೆ 72 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ಪ್ರಮಾಣವನ್ನು ನೀಡಿದೆ.


ಇದನ್ನೂ ಓದಿ-Nuclear Crisis: ಪರಮಾಣು ದಾಳಿಗೆ ಸಿದ್ಧತೆ ನಡೆಸುತ್ತಿದೆಯೇ ಚೀನಾ?


ಏತನ್ಮಧ್ಯೆ, ರಾಜ್ಯದ 33 ಜಿಲ್ಲೆಗಳಲ್ಲಿ ಕೋವಿಡ್ -19 ಸಕ್ರಿಯ ಪ್ರಕರಣಗಳಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಕಳೆದ 24 ಗಂಟೆಗಳಲ್ಲಿ 67 ಜಿಲ್ಲೆಗಳು ಯಾವುದೇ ಹೊಸ COVID-19 ಸೋಂಕನ್ನು ವರದಿ ಮಾಡಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.


ಉತ್ತರ ಪ್ರದೇಶದಲ್ಲಿ ಈಗ ಅಲಿಗಡ್, ಅಮ್ರೋಹಾ, ಅಯೋಧ್ಯೆ, ಬಾಗಪತ್, ಬಲಿಯಾ, ಬಲರಾಂಪುರ್, ಬಂಡ, ಬಸ್ತಿ, ಬಹ್ರೈಚ್, ಬಿಜ್ನೋರ್, ಭಡೋಹಿ, ಚಿತ್ರಕೂಟ್, ಚಂದೌಲಿ, ಇಟಾಹ್, ಡೋರಿಯಾ, ಫತೇಪುರ್, ಗಾಜಿಪುರ, ಗೊಂಡ, ಹಮೀರ್‌ಪುರ, ಹಾಪುರ್, ಹರ್ಡೋಯ್, ಹತ್ರಾಸ್, ಕಸ್ಗಂಜ್, ಲಲಿತ್‌ಪುರ್, ಮಹೋಬಾ, ಮೊರಾದಾಬಾದ್, ಮುಜಾಫರ್ ನಗರ, ಪಿಲಿಭಿತ್, ರಾಂಪುರ್, ಸಹರಾನ್‌ಪುರ, ಶಾಮ್ಲಿ, ಸಿದ್ಧಾರ್ಥ್ ನಗರ ಮತ್ತು ಸೋನ್‌ಭದ್ರ ಜಿಲ್ಲೆಗಳು ಕೋವಿಡ್ -19 ರಹಿತ 33 ಜಿಲ್ಲೆಗಳಾಗಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ