ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿ 'ಇದು ರಾಮ್ ರಾಜ್ ಅಲ್ಲ, ನಾಥುರಾಮ್ ರಾಜ್' ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ನಡೆಯುತ್ತಿರುವ ಸಮೂಹ ಹತ್ಯೆ, ಪೋಲಿಸ್ ಥಳಿತದ ವಿಚಾರವಾಗಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿಕಾರಿದ ಅಖಿಲೇಶ್ ಯಾದವ್ ರಾಜ್ಯದಲ್ಲಿ ಈಗ ಜನಸಮೂಹ ಹತ್ಯೆಯೊಂದಿಗೆ ಪೊಲೀಸ್ ಲಿಂಚಿಂಗ್ ಕೂಡ ಪ್ರಾರಂಭವಾಗಿದೆ. ಇದು ರಾಮ ರಾಜ್ಯವಲ್ಲ, ನಾಥುರಾಮ್ ರಾಜ್ಯ ಎಂದು ಹೇಳಿದರು. ಈ ವಾರದ ಆರಂಭದಲ್ಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಗುಂಡಿಕ್ಕಿ ಕೊಲ್ಲಲ್ಪಟ್ಟ 28 ವರ್ಷದ ವ್ಯಕ್ತಿಯ ಕುಟುಂಬವನ್ನು ಭೇಟಿ ಮಾಡಿದ ನಂತರ ಅವರ ಹೇಳಿಕೆಗಳು ಬಂದಿವೆ.


'ಉನ್ನಾವ್ ಅತ್ಯಾಚಾರಕ್ಕೊಳಗಾದವರಿಗೆ ಇನ್ನೂ ನ್ಯಾಯ ದೊರಕಿಲ್ಲ ಮತ್ತು ಚಿನ್ಮಯಾನಂದ್ ಪ್ರಕರಣದ ಸಂತ್ರಸ್ತೆಯನ್ನು ಜೈಲಿಗೆ ಕಳುಹಿಸಲಾಗಿದೆ. ಇದು ನ್ಯಾಯವೇ? ಎಂದು ಅವರ ಕುಟುಂಬಕ್ಕೆ ಸಹಾಯದ ಭರವಸೆ ನೀಡಿದರು. ಪುಷ್ಪೇಂದ್ರ ಯಾದವ್ ಅವರ ಪತ್ನಿ ಈ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಹಾಯಕ್ಕಾಗಿ ಮನವಿ ಮಾಡಿದ್ದರು, ತಪ್ಪಿತಸ್ಥ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. 


ಪುಷ್ಪೇಂದ್ರ ಯಾದವ್ ಅವರು ಮರಳು ಗಣಿಗಾರಿಕೆ ವ್ಯವಹಾರ ನಡೆಸುತ್ತಿದ್ದರು ಮತ್ತು ಭಾನುವಾರ ತನ್ನ ಟ್ರಕ್ ಅನ್ನು ವಶಪಡಿಸಿಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ಗೆ ಗುಂಡು ಹಾರಿಸಿದ ನಂತರ ಅವರ ಮೇಲೆ ಪ್ರತಿಯಾಗಿ ಗುಂಡು ಹಾರಿಸಲಾಯಿತು ಎಂದು ಯುಪಿ ಪೊಲೀಸರು ಹೇಳಿದ್ದಾರೆ.ಈ ಪ್ರದೇಶದ ಉಸ್ತುವಾರಿ ಅಧಿಕಾರಿ ಧರ್ಮೇಂದ್ರ ಚೌಹಾನ್ ಅವರು ರೂ. ಟ್ರಕ್ ಬಿಡುಗಡೆ ಮಾಡಲು 1.5 ಲಕ್ಷ ರೂ.ಲಂಚ ಕೇಳಿದ್ದರೆನ್ನಲಾಗಿದೆ,ನಂತರ ಇದನ್ನು ಬಹಿರಂಗಪಡಿಸಿವುದಾಗಿ ಬೆದರಿಕೆ ಹಾಕಿದ ಮೇಲೆ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.