ಲಕ್ನೋ: ಉತ್ತರ ಪ್ರದೇಶ ಪೊಲೀಸರ ಜಾಗರೂಕತೆಯಿಂದಾಗಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ದಂಪತಿಗಳ ಜೀವ ಉಳಿದಿದೆ. ವಾಸ್ತವವಾಗಿ ಇಟಾವಾ ಬಳಿಯ ಎಕ್ಸ್‌ಪ್ರೆಸ್‌ವೇನಲ್ಲಿ ಬೆಂಕಿ ಹೊತ್ತಿದ್ದ ಬೈಕಿನಲ್ಲಿ ಸಾಗುತ್ತಿದ್ದ ದಂಪತಿಗಳನ್ನು ಕಂಡ ಉತ್ತರ ಪ್ರದೇಶ ಪೊಲೀಸರ ಡಯಲ್ 100 ತಂಡ, ಬೈಕ್ ಸವಾರರನ್ನು ನಾಲ್ಕು ಕಿಲೋಮೀಟರ್ ವರೆಗೂ ಚೇಸ್ ಮಾಡಿ ಅವರ  ಜೀವ ರಕ್ಷಿಸಿದೆ. 


COMMERCIAL BREAK
SCROLL TO CONTINUE READING

ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಪೊಲೀಸರು ಆ ಬೈಕಿನಲ್ಲಿ ಸಾಗುತ್ತಿದ್ದ ದಂಪತಿಯನ್ನು ಕೂಗಿ ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಆದರೆ ದಂಪತಿಗಳು ಪೊಲೀಸರ ಕೂಗನ್ನು ನಿರ್ಲಕ್ಷಿಸಿ ವೇಗವಾಗಿ ಮುಂದಕ್ಕೆ ಸಾಗುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರನ್ನು 4 ಕಿಲೋಮೀಟರ್ ವರೆಗೂ ಹಿಂಬಾಲಿಸಿ ಅವರ ಬೈಕಿನಲ್ಲಿ ಬೆಂಕಿ ಹೊತ್ತಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ನಂತರ ಬೈಕಿನ ಒಂದೆಡೆ ಕಟ್ಟಿದ್ದ ಸಾಮಾನುಗಳನ್ನು ಬೇರ್ಪಡಿಸಿ ಬೆಂಕಿ ನಂದಿಸಲು ಸಹಕರಿಸಿದರು. ಬೈಕಿನಲ್ಲಿ ದಂಪತಿಗಳ ಜೊತೆಗೆ ಒಂದು ಮಗುವೂ ಇರುವುದನ್ನು ವಿಡಿಯೋದಾಳಿ ಗಮನಿಸಬಹುದಾಗಿದೆ. ಪೊಲೀಸರ ಜಾರಗೂಕತೆಯಿಂದಾಗಿ ಒಂದು ಕುಟುಂಬದ ಜೀವ ಉಳಿದಿದೆ.



ಬೈಕ್ ನಲ್ಲಿ ಬೆಂಕಿ ತಗುಲಿರುವುದನ್ನು ಗಮನಿಸದ ದಂಪತಿ ತಮ್ಮ ಪ್ರಯಾಣ ಮುಂದುವರೆಸಿದ್ದ ವಿಡಿಯೋವನ್ನು ಉತ್ತರ ಪ್ರದೇಶ ಪೋಲಿಸ್ ಡಯಲ್ 100 ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ಬೈಕ್ ನಲ್ಲಿ ಕಟ್ಟಲಾಗಿದ್ದ ಸಾಮಾನಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಈ ವಿಡಿಯೋ ಹಂಚಿಕೊಳ್ಳುವಾಗ, "ಇಟಾವಾ-PRV1617 ಇಂದು 108 ಕಿ.ಮೀ.ನಿಂದ 112 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ ಬೈಕ್ ಅನ್ನು 4 ಕಿ.ಮೀ. ವರೆಗೂ ಹಿಂಬಾಲಿಸಿ ಬೈಕ್ ನಲ್ಲಿ ಸಾಗುತ್ತಿದ್ದ ದಂಪತಿಯನ್ನು ನಿಲ್ಲಿಸಿ, ಬೆಂಕಿ ನಂದಿಸಲಾಯಿತು" ಎಂದು ಬರೆಯಲಾಗಿದೆ.