ಉತ್ತರ ಪ್ರದೇಶದ ರಾಜ್ಯಪಾಲರ ಕಚೇರಿಗೆ ಬೆದರಿಕೆ ಪತ್ರ
10 ದಿನಗಳ ಅವಧಿಯಲ್ಲಿ ರಾಜ್ಯಪಾಲರು ರಾಜಭವನ ಬಿಟ್ಟು ಹೊರಹೋಗದಿದ್ದರೆ ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಪತ್ರ ಮಂಗಳವಾರ ಉತ್ತರ ಪ್ರದೇಶದ ರಾಜ್ ಭವನಕ್ಕೆ ಮಂಗಳವಾರ ಪತ್ರ ಬಂದಿದೆ.
ನವದೆಹಲಿ: 10 ದಿನಗಳ ಅವಧಿಯಲ್ಲಿ ರಾಜ್ಯಪಾಲರು ರಾಜಭವನ ಬಿಟ್ಟು ಹೊರಹೋಗದಿದ್ದರೆ ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಪತ್ರ ಮಂಗಳವಾರ ಉತ್ತರ ಪ್ರದೇಶದ ರಾಜ್ ಭವನಕ್ಕೆ ಮಂಗಳವಾರ ಪತ್ರ ಬಂದಿದೆ.
ಈ ಪತ್ರವು ಜಾರ್ಖಂಡ್ ಉಗ್ರಗಾಮಿ ಗುಂಪಿನ ಟಿಎಸ್ಪಿಸಿಯಿಂದ ಬಂದಿದೆ ಎಂದು ರಾಜ್ ಭವನ ಹೇಳಿಕೆ ತಿಳಿಸಿದೆ. ಇದು ರಾಜ್ ಭವನವನ್ನು ಡೈನಮೈಟ್ನಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದೆ ಎಂದು ಪಿಟಿಐ ವರದಿ ಮಾಡಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಮತ್ ರಾವ್ ಅವರು ಈ ಪತ್ರವನ್ನು ರಾಜ್ಯದ ಗೃಹ ಇಲಾಖೆಗೆ ಕಳುಹಿಸಿದ್ದಾರೆ ಎಂದು ಅದು ತಿಳಿಸಿದೆ.