Assembly Election 2022: ಗೋವಾ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಇಂದು ಮತದಾನ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಕ್ರಮವಾಗಿ 40 ಮತ್ತು 70 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು ಒಟ್ಟು 55 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಇಂದು ನಡೆಯಲಿರುವ ಚುನಾವಣೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಕೆಲವು ಉನ್ನತ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 


COMMERCIAL BREAK
SCROLL TO CONTINUE READING

ಉತ್ತರ ಪ್ರದೇಶದಲ್ಲಿ ಎರಡನೇ ಹಂತದಲ್ಲಿ 58 ವಿಧಾನಸಭಾ ಸ್ಥಾನಗಳಿಗೆ ನದೆಯುತ್ತಿರುವ ಚುನಾವಣೆ:
ಉತ್ತರ ಪ್ರದೇಶದ ಎರಡನೇ ಹಂತದಲ್ಲಿ (Uttar Pradesh set to Phase 2 Polls) ಒಂಬತ್ತು ಜಿಲ್ಲೆಗಳಲ್ಲಿ ಹರಡಿರುವ ಒಟ್ಟು 55 ಅಸೆಂಬ್ಲಿ ಸ್ಥಾನಗಳು - ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಮ್‌ಪುರ್, ಅಮ್ರೋಹಾ, ಬುದೌನ್, ಬರೇಲಿ ಮತ್ತು ಷಹಜಹಾನ್‌ಪುರದಲ್ಲಿ ವಿಧಾನಸಭೆ ಚುನಾವಣೆ 2022 ನಡೆಯುತ್ತಿದೆ.  ಎರಡನೇ ಹಂತದಲ್ಲಿ 586 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮತದಾನವು ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ 


ಬರೇಲ್ವಿ ಮತ್ತು ದಿಯೋಬಂದ್ ಪಂಗಡಗಳ ಧಾರ್ಮಿಕ ಮುಖಂಡರಿಂದ ಪ್ರಭಾವಿತವಾಗಿರುವ ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. ಆದಾಗ್ಯೂ, ಈ ಹಂತವನ್ನು ಮೋದಿ ಸರ್ಕಾರಕ್ಕೆ ಅಗ್ನಿಪರೀಕ್ಷೆ ಎಂದು ಪರಿಗಣಿಸಲಾಗಿದೆ. 2017ರಲ್ಲಿ ಒಟ್ಟು 55 ಸ್ಥಾನಗಳಲ್ಲಿ ಬಿಜೆಪಿ 38 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ 15 ಮತ್ತು ಕಾಂಗ್ರೆಸ್ 2ರಲ್ಲಿ ಗೆಲುವು ಸಾಧಿಸಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. 


ಚುನಾವಣಾ ದಿನದಂದು 60,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಸುಮಾರು 800 ಅರೆಸೇನಾ ಪಡೆ ತುಕಡಿಗಳನ್ನೂ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳಿಸಲಾಗಿದೆ. 12,538 ರಲ್ಲಿ 4,917 ಮತಗಟ್ಟೆಗಳನ್ನು "ನಿರ್ಣಾಯಕ" ಎಂದು ಪರಿಗಣಿಸಲಾಗಿದೆ. ನಗೀನಾ, ಧಾಂಪುರ್, ಬಿಜ್ನೋರ್, ಅಸ್ಮೋಲಿ, ಸಂಭಾಲ್, ದಿಯೋಬಂದ್, ರಾಂಪುರ್ ಮಣಿಹರನ್ ಮತ್ತು ಗಂಗೋಹ್ ಎಂಟು ವಿಧಾನಸಭಾ ಕ್ಷೇತ್ರಗಳನ್ನು 'ಸೂಕ್ಷ್ಮ' ವಿಭಾಗದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


ಇದನ್ನೂ ಓದಿ- ಇಂದು PSLV-C52 ಉಡಾವಣೆಗೆ ಇಸ್ರೋ ಸಜ್ಜು


ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ:
11 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಕರಾವಳಿ ರಾಜ್ಯ ಗೋವಾದಲ್ಲಿ 40 ವಿಧಾನಸಭಾ ಸ್ಥಾನಗಳಿಂದ (Goa Assembly Elections) 301 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.


ಪ್ರಮುಖ ಪಕ್ಷಗಳು:
- ಸಾಂಪ್ರದಾಯಿಕವಾಗಿ ಗೋವಾ ಮತ್ತು ಉತ್ತರಾಖಂಡ್ ದ್ವಿಧ್ರುವಿ ರಾಜಕೀಯವನ್ನು ಕಂಡಿವೆ, ಆದರೆ ಈ ರಾಜ್ಯಗಳು ಈ ಬಾರಿಯ ಚುನಾವಣೆಯಲ್ಲಿ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತಿವೆ. ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಟೋಪಿಯನ್ನು ಕಣದಲ್ಲಿ ಎಸೆಯುತ್ತಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಇತರ ಸಣ್ಣ ಪಕ್ಷಗಳು ಗೋವಾದ ಚುನಾವಣಾ ರಂಗದಲ್ಲಿ ಛಾಪು ಮೂಡಿಸಲು ಪೈಪೋಟಿ ನಡೆಸುತ್ತಿವೆ.


- ಕಾಂಗ್ರೆಸ್ ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಮೈತ್ರಿಯಲ್ಲಿ ಚುನಾವಣೆ ಎದುರಿಸುತ್ತಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಜೊತೆ ಕೈಜೋಡಿಸಿದೆ.


- ಶಿವಸೇನೆ ಮತ್ತು ಎನ್‌ಸಿಪಿ ಕೂಡ ತಮ್ಮ ಚುನಾವಣಾ ಪೂರ್ವ ಮೈತ್ರಿಯನ್ನು ಘೋಷಿಸಿದ್ದವು, ಆದರೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.


ಚುನಾವಣಾ ವ್ಯವಸ್ಥೆಗಳು:
- ರಾಜ್ಯದಲ್ಲಿ ಕೋವಿಡ್-19 (Covid-19) ಪ್ರೋಟೋಕಾಲ್‌ಗಳನ್ನು ಅನುಸರಿಸಿ ಮತದಾನ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.


- ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಗೋವಾದಲ್ಲಿ 'ಸಖಿ' ಅಥವಾ ಪಿಂಕ್ ಮತಗಟ್ಟೆ ಎಂದು ಕರೆಯಲ್ಪಡುವ 100 ಕ್ಕೂ ಹೆಚ್ಚು ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.


- ವಿಕಲಚೇತನರಿಗಾಗಿ ಸಹ ಕೆಲವು ವಿಶೇಷ ಬೂತ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.


ಮುಖ್ಯ ಅಭ್ಯರ್ಥಿಗಳು:
- ಗೋವಾದ ಪ್ರಮುಖ ಅಭ್ಯರ್ಥಿಗಳೆಂದರೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (ಬಿಜೆಪಿ), ವಿರೋಧ ಪಕ್ಷದ ನಾಯಕ ದಿಗಂಬರ್ ಕಾಮತ್ (ಕಾಂಗ್ರೆಸ್), ಮಾಜಿ ಸಿಎಂಗಳಾದ ಚರ್ಚಿಲ್ ಅಲೆಮಾವೊ (ಟಿಎಂಸಿ), ರವಿ ನಾಯ್ಕ್ (ಬಿಜೆಪಿ), ಲಕ್ಷ್ಮೀಕಾಂತ್ ಪರ್ಸೇಕರ್ (ಸ್ವತಂತ್ರ), ಮಾಜಿ ಉಪ ಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ (GFP) ಮತ್ತು ಸುದಿನ್ ಧವಲಿಕರ್ (MGP), ದಿವಂಗತ ಸಿಎಂ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಮತ್ತು AAP ಇಂದ ಅಮಿತ್ ಪಾಲೇಕರ್ ಗೋವಾ ಚುನಾವಣಾ ಕಣದಲ್ಲಿದ್ದಾರೆ.


ಇದನ್ನೂ ಓದಿ- 'ಬಿಜೆಪಿ ಮುಸ್ಲಿಂರ ಎಲ್ಲಾ ಚಿಹ್ನೆಗಳನ್ನು ಅಳಿಸುತ್ತದೆ': ಮೆಹಬೂಬಾ ಮುಫ್ತಿ


ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ:
ಸಾಂಪ್ರದಾಯಿಕವಾಗಿ ಗೋವಾ ಮತ್ತು ಉತ್ತರಾಖಂಡವು ದ್ವಿಧ್ರುವಿ ರಾಜಕೀಯವನ್ನು ಕಂಡಿದೆ, ಆದರೆ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಟೋಪಿಯನ್ನು ರಿಂಗ್‌ನಲ್ಲಿ ಎಸೆಯುವ ಮೂಲಕ ಈ ಬಾರಿ ಬಹುಕೋನದ ಸ್ಪರ್ಧೆಗೆ ಸಾಕ್ಷಿಯಾಗಿದೆ.


ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಎಎಪಿ, ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1,000 ರೂ, ಪ್ರತಿ ಮನೆಗೆ ಉದ್ಯೋಗ ಖಾತರಿ ಮತ್ತು ಕೆಲಸ ಪಡೆಯುವವರೆಗೆ ತಿಂಗಳಿಗೆ. ರೂ. 5,000 ನಿರುದ್ಯೋಗ ಭತ್ಯೆ ಸೇರಿದಂತೆ ಹಲವು ಉಚಿತ ಕೊಡುಗೆಗಳನ್ನು ಒದಗಿಸುವ ಭರವಸೆ ನೀಡಿದೆ. 


ಚುನಾವಣಾ ವ್ಯವಸ್ಥೆಗಳು:
- ಉತ್ತರಾಖಂಡದಲ್ಲಿ ಮತದಾನಕ್ಕಾಗಿ 11,697 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಮತದಾನವು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.


ಮುಖ್ಯ ಅಭ್ಯರ್ಥಿಗಳು:
- ಈ ಬಾರಿಯ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಅವರ ಸಂಪುಟ ಸಹೋದ್ಯೋಗಿಗಳಾದ ಸತ್ಪಾಲ್ ಮಹಾರಾಜ್, ಸುಬೋಧ್ ಉನಿಯಾಲ್, ಅರವಿಂದ್ ಪಾಂಡೆ, ಧನ್ ಸಿಂಗ್ ರಾವತ್ ಮತ್ತು ರೇಖಾ ಆರ್ಯ ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಅವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.


- ಮತ್ತೊಂದೆಡೆ ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಗಳೆಂದರೆ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಮಾಜಿ ಸಚಿವ ಯಶಪಾಲ್ ಆರ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್ ಮತ್ತು ನಾಲ್ಕನೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರೀತಮ್ ಸಿಂಗ್ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.