ಜೈಲುವಾಸದ ಬಳಿಕ ಇಂದು ತಮಿಳುನಾಡಿಗೆ ಮರಳುತ್ತಿರುವ V K Sashikala
ಹೊಸೂರಿನವರೆಗೂ ಕಾರಲ್ಲಿ ಪ್ರಯಾಣ ಮಾಡಲಿದ್ದು ಬಳಿಕ ಮೆರವಣಿಗೆ ಮೂಲಕ ಹೋಗಲಿರುವ ವಿ.ಕೆ. ಶಶಿಕಲಾ ಅವರಿಗೆ ಮಾಜಿ ಸಿಎಂ ಜಯಲಲಿತಾ ಅವರ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಖಾಸಗಿ ಎಸ್ಕಾರ್ಟ್ ಇರಲಿದೆ. ಇದರಲ್ಲಿ ಹದಿನೈದು ಮಂದಿ ಇರಲಿದ್ದಾರೆ.
ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ (VK Sashikala) ಸದ್ಯ ಜೈಲಿನಿಂದ ಬಿಡುಗಡೆಯಾಗಿದ್ದು ಇದೇ ಮೊದಲ ಬಾರಿಗೆ ಇಂದು ತಮಿಳುನಾಡು ಪ್ರವೇಶ ಮಾಡುತ್ತಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ಶಶಿಕಲಾ ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅದಾದ ಬಳಿಕ ವಿಶ್ರಾಂತಿ ಪಡೆಯಲು ಬೆಂಗಳೂರಿನ ಹೊರವಲಯದಲ್ಲಿರುವ ಪ್ರೆಸ್ಟೀಜ್ ವಿಲ್ಲಾದಲ್ಲಿದ್ದರು. ವಿಲ್ಲಾದಲ್ಲಿ ಇದ್ದುಕೊಂಡೆ ಮುಂಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ (Tamilnadu Assembly Election) ತಾವು ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಆಪ್ತರ ಜೊತೆ ಸಮಾಲೋಚನೆ ನಡೆಸಿದ್ದರು.
ಇಂದು ವಿ.ಕೆ. ಶಶಿಕಲಾ (V K Sashikala) ಹೊಸೂರಿನವರೆಗೂ ಕಾರಲ್ಲಿ ಪ್ರಯಾಣ ಮಾಡಲಿದ್ದು ಅವರ ಬೆಂಬಲಿಗರು ಜೂಜುವಾಡಿ ಸಮೀಪ ಭವ್ಯ ಸ್ವಾಗತ ಕೋರಲಿದ್ದಾರೆ. ಬಳಿಕ ಮೆರವಣಿಗೆ ಮೂಲಕ ಹೋಗಲಿರುವ ಶಶಿಕಲಾ ಅವರಿಗೆ ಮಾಜಿ ಸಿಎಂ ಜಯಲಲಿತಾ (Former CM Jayalalitha) ಅವರ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಖಾಸಗಿ ಎಸ್ಕಾರ್ಟ್ ಇರಲಿದೆ. ಇದರಲ್ಲಿ ಹದಿನೈದು ಮಂದಿ ಇರಲಿದ್ದಾರೆ.
ಇದನ್ನೂ ಓದಿ - Village Cooking Channel: ಅಣಬೆ ಬಿರಿಯಾನಿ ಸವಿದ ರಾಹುಲ್ ಗಾಂಧಿ...!
ಒಟ್ಟು ಮೂವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ವಿ.ಕೆ. ಶಶಿಕಲಾ ಅವರಿಗೆ ಸ್ವಾಗತ ಕೋರಲು ಸಿದ್ದತೆ ನಡೆದಿದೆ. ಎಐಎಡಿಎಂಕೆ (AIADMK) ಹಾಗೂ ಟಿ. ದಿನಕರನ್ (T. Dinakaran) ಬೆಂಬಲಿಗರು ಹೆಚ್ಚು ಜನ ಸೇರಿಸುವ ಸಿದ್ದತೆ ನಡೆಸುತ್ತಿದ್ದಾರೆ. 'ಭರ್ಜರಿ ಪ್ರವೇಶ'ದ ಮೂಲಕ ರಾಜಕೀಯ ವಿರೋಧಿಗಳಿಗೆ ತಮ್ಮ ಬಲ ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಇಳವರಶಿ ಮತ್ತು ಶಶಿಕಲಾ ಇಬ್ಬರೂ ಒಂದೇ ಕಾರಲ್ಲಿ ಪ್ರಯಾಣ ಮಾಡಲಿದ್ದಾರೆ. ಶಶಿಕಲಾ ಆಗಮನದ ಹಿನ್ನೆಲೆಯಲ್ಲಿ ತಮಿಳುನಾಡು ಗಡಿಯಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ಮಾಡಲಾಗಿದೆ.
ತಿರುಪತಿಯಿಂದ ಪ್ರಸಾದ ತಂದ ಬೆಂಬಲಿಗರು :
ಶಶಿಕಲಾ ಆಗಮನದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ತಿರುಪತಿಯಿಂದ ಪ್ರಸಾದ ತಂದಿದ್ದಾರೆ. ಪೂರ್ಣ ಕುಂಭ ಸ್ವಾಗತ ಕೋರಲಿರುವ ಬೆಂಬಲಿಗರು ಬಳಿಕ ಶಶಿಕಲಾ ಅವರಿಗೆ ತಿರುಪತಿ ಪ್ರಸಾದವನ್ನು ನೀಡಲಿದ್ದಾರೆ. ಇದೇ ರೀತಿ ಚಿನ್ನಮ್ಮನಿಗೆ ಆರತಿ ಎತ್ತಿ ಇಡುಗಾಯಿ ಹೊಡೆಯುವ ತಯಾರಿ ಕೂಡ ನಡೆದಿದೆ.
ಇದನ್ನೂ ಓದಿ - Tamil Nadu Assembly election: ಈ ಬಾರಿಯಾದರೂ 'ಕಮಾಲ್' ಮಾಡುವರೇ ಕಮಲ್
ಶಶಿಕಲಾ ಆಗಮನದ ಹಿನ್ನೆಲೆಯಲ್ಲಿ ಈಗಾಗಲೇ ರೆಸಾರ್ಟ್ ಬಳಿ ಸೇರಿರುವ ಅಭಿಮಾನಿಗಳು ಎಐಎಡಿಎಂಕೆ ಬಾವುಟ ಹಿಡಿದು ಚಿನ್ನಮ್ಮ ಬರುವಿಕೆಗಾಗಿ ಕಾಯುತ್ತಿದ್ದಾರೆ. ಶಶಿಕಲಾ ಅವರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಭಾವುಟ ಮತ್ತು ಚಿಹ್ನೆಗಳನ್ನು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ. ಆದರೂ ಅಭಿಮಾನಿಗಳು ಎಐಎಡಿಎಂಕೆ ಭಾವುಟದೊಂದಿಗೆ ಬರಮಾಡಿಕೊಳ್ಳಲು ಕಾತರರಾಗಿದ್ದಾರೆ. ಅಲ್ಲದೆ ಶಶಿಕಲಾ ಅವರಿಗೆ ಜೈಕಾರ ಹಾಕುತ್ತಿರುವ ಬೆಂಬಲಿಗರು ತಮಿಳುನಾಡು ಸಿಎಂ ಯಡಪ್ಪಾಡಿ ಪಳನಿಸ್ವಾಮಿ (Eadappadi K. Paliniswami) ಹಾಗೂ ಪನ್ನೀರ್ ಸೇಲ್ವಂ (Pannier Selvam) ವಿರುದ್ಧ ದಿಕ್ಕಾರ ಕೂಗುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.