Vaccination Fear In Village: ವ್ಯಾಕ್ಸಿನ್ ಭಯದಿಂದ ನದಿಗೆ ಹಾರಿದ ಗ್ರಾಮೀಣ ಜನ, ಲಸಿಕೆ ಹಾಕಿಸಿಕೊಂಡಿದ್ದು ಕೇವಲ 14 ಜನ ಮಾತ್ರ
Vaccination Fear In Village - ಬಾರಾಬಂಕಿ ಜಿಲ್ಲೆಯ ರಾಮನಗರ ತಾಲೂಕಿನ ಸಿಸೌಡಾ ಗ್ರಾಮದಲ್ಲಿ ಗ್ರಾಮಸ್ಥರು ವ್ಯಾಕ್ಸಿನ್ ಗೆ ಯಾವ ರೀತಿ ಭಯಭೀತರಾಗಿದ್ದಾರೆ ಎಂದರೆ, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ ಅವರು ನದಿಗೆ ಹಾರಿದ್ದಾರೆ. ಅಷ್ಟೇ ಯಾಕೆ ಇದನ್ನು ನೋಡಿದ ಆರೋಗ್ಯ ವಿಭಾಗದ ಅಧಿಕಾರಿಗಳು ಕೂಡ ಕಕ್ಕಾಬಿಕ್ಕಿಯಾಗಿ, ಗ್ರಾಮಸ್ಥರನ್ನು ನೀರಿನಿಂದ ಹೊರಬರಲು ಆಗ್ರಹಿಸಿದ್ದಾರೆ.
ಬಾರಾಬಂಕಿ (Uttar Pradesh): Vaccination Fear In Village - ಕೊರೊನಾ (Coronavirus) ಲಸಿಕೆಯ ಬಗ್ಗೆ ಜನರ ಮನದಲ್ಲಿ ಯಾವ ರೀತಿ ಗೊಂದಲ ಹಾಗೂ ಭಯದ ವಾತಾವರಣ ಮನೆ ಮಾಡಿದೆ ಎಂದರೆ, ಅದರ ಒಂದು ವಿಲಕ್ಷಣ ಉದಾಹರಣೆ ಇಲ್ಲಿದೆ. ಬಾರಾಬಂಕಿ ಜಿಲ್ಲೆಯ ಸಿಸೋಡಾ ಗ್ರಾಮದಲ್ಲಿ ಲಸಿಕೆ ಹಾಕಲು ಬಂದ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವನ್ನು ನೋಡಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಷ್ಟೇ ಅಲ್ಲ ತಮಗೆ ಯಾರೂ ವ್ಯಾಕ್ಸಿನ್ (Corona Vaccine) ಹಾಕಬಾರದು ಎಂಬ ಕಾರಣಕ್ಕೆ ಸರಯು ನದಿಗೆ (Saryu River) ಧುಮುಕಿದ್ದಾರೆ. ಇದನ್ನು ಕಂಡು ಕಕ್ಕಾಬಿಕ್ಕಿಯಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರನ್ನು ನೀರಿನಿಂದ ಹೊರಬರುವಂತೆ ಆಗ್ರಹಿಸಿದ್ದಾರೆ. ಅವರ ಮನವಿಗೆ ಸ್ಪಂದಿಸದ ಗ್ರಾಮಸ್ಥರ ಮನವೊಲಿಸಲು ಕೊನೆಗೆ ಉಪಜಿಲ್ಲಾಧಿಕಾರಿಗಳೇ ಬರಬೇಕಾಗಿ ಬಂತು. ಉಪಜಿಲ್ಲಾಧಿಕಾರಿಗಳ ಮನವಿಗೆ ಹೊರಬಂದ ಗ್ರಾಮಸ್ಥರು ಬಳಿಕ ಲಲಿಕೆಯನ್ನು ಹಾಕಿಸಿಕೊಂಡಿದ್ದಾರೆ. ಆರೆರೆ, 1500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಕೇವಲ 14 ಜನರು ಮಾತ್ರ ಲಸಿಕೆಯನ್ನು (Corona Vaccination In India)ಹಾಕಿಸಿಕೊಳ್ಳಲು ಧೈರ್ಯ ಮಾಡಿದ್ದಾರೆ.
ಇದನ್ನೂ ಓದಿ-ಬಹಳ ಹುಷಾರಾಗಿರಿ..!ಈ ನಂಬರಿನಿಂದ ನಿಮಗೆ ಕಾಲ್ ಬರಬಹುದು..!
ಬಾರಾಬಂಕಿ ಜಿಲ್ಲೆಯ (Barabanki District) ರಾಮನಗರ ತಾಲೂಕಿನ ಸಿಸೋಡಾ ಗ್ರಾಮಸ್ಥರಿಗೆ ವ್ಯಾಕ್ಸಿನ್ (Covid-19 Vaccine)ಹಾಕಲು ಆರೋಗ್ಯ ವಿಭಾಗದ ತಂಡ ತಲುಪಿತ್ತು. ಆರೋಗ್ಯ ವಿಭಾಗದ ಜನರಿಂದ ಇಡೀ ಗ್ರಾಮದಲ್ಲಿ ಲಸಿಕಾಕರಣ ನಡೆಸಲಾಗುತ್ತಿದೆ ಎಂಬ ಸೂಚನೆ ಮಾತ್ರದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ಮತ್ತು ಅವರು ಗ್ರಾಮದ ಹೊರವಲಯದಲ್ಲಿ ಹರಿಯುತ್ತಿರುವ ಸರಯೂ ನದಿ ದಡಕ್ಕೆ ಬಂದು ಕುಳಿತಿದ್ದಾರೆ. ಗ್ರಾಮಸ್ಥರೆಲ್ಲರು ಸರಯೂ ನದಿಯ ಕಡಲಲ್ಲಿದ್ದಾರೆ ಎಂಬ ಸೂಚನೆ ದೊರೆಯುತ್ತಿದ್ದಂತೆ, ಅವರ ಮನವೊಲಿಸಲು ಆರೋಗ್ಯ ವಿಭಾಗದ ಅಧಿಕಾರಿಗಳು ನದಿ ದಡಕ್ಕೆ ಧಾವಿಸಿದ್ದಾರೆ. ಆರೋಗ್ಯ ವಿಭಾಗದ ತನ್ನ ತಮ್ಮತ್ತ ಬರುವುದನ್ನು ಗಮನಿಸಿ ಭಯಭೀತರಾದ ಗ್ರಾಮಸ್ಥರಿಗೆ ಓಡಿ ಹೋಗಲು ದಾರಿ ಕಾಣದೆ ಮತ್ತು ತಂಡದಿಂದ ಬಚಾವಾಗಲು ಸರಯೂ ನಡೆಗೆ ಹಾರಿದ್ದಾರೆ. ಆದರೆ, ನದಿಗೆ ದುಮುಕುವ ಸಂದರ್ಭದಲ್ಲಿ ಅವರು ತಮ್ಮ ಪ್ರಾಣದ ಚಿಂತೆಯನ್ನು ಕೂಡ ತೊರೆದಿದ್ದಾರೆ. ಗ್ರಾಮಸ್ಥರು ನದಿಗೆ ಹಾರುತ್ತಿರುವುದನ್ನು ಗಮನಿಸಿದ ಆರೋಗ್ಯ ವಿಭಾಗದ ಅಧಿಕಾರಿಗಳ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ ಹಾಗೂ ನೀರಿನಿಂದ ಹೊರಬರಲು ಅವರು ಗ್ರಾಮಸ್ಥರನ್ನು ಮನವಿ ಮಾಡಿದ್ದಾರೆ. ಆದರೆ, ಗ್ರಾಮಸ್ಥರು ಮಾತ್ರ ನೀರಿನಿಂದ ಯಾವುದೇ ಕಾರಣಕ್ಕೂ ಹೊರಬಂದಿಲ್ಲ.
ಇದನ್ನೂ ಓದಿ-Yaas Cyclone : ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ!
ಲಸಿಕೆ ಹಾಕಿಸಿಕೊಂಡ ಕೇವಲ 14 ಜನರು
ಕೊನೆಗೆ ಗ್ರಾಮಸ್ಥರ ಮನವೊಲಿಸಲು ಉಪಜಿಲ್ಲಾಧಿಕಾರಿ ರಾಜೀವ್ ಶುಕ್ಲಾ ಹಾಗೂ ನೋಡಲ್ ಅಧಿಕಾರಿ ರಾಹುಲ್ ತ್ರಿಪಾಠಿ ಸ್ಥಳಕ್ಕೆ ಧಾವಿಸುವ ಪರಿಸ್ಥಿತಿ ಎದುರಾಗಿದೆ. ಬಳಿಕ ಗ್ರಾಮಸ್ಥರನ್ನು ಮನವೊಲಿಸಿರುವ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಮನಸ್ಸಿನಲ್ಲಿರುವ ಭಯ ಹಾಗೂ ಭ್ರಾಂತಿ ನಿವಾರಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆಗ ಗ್ರಾಮದ ಸುಮಾರು 14 ಜನರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಈ ಗ್ರಾಮದ ಒಟ್ಟು ಜನಸಂಖ್ಯೆ 1500 ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Funny Viral Video: Coronavirus ಹೊಡೆದೋಡಿಸು ಈ Viral Video ವೀಕ್ಷಿಸಲು ಮರೆಯಬೇಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.