ನವದೆಹಲಿ: Coronavirus In India - ಕೋವಿನ್ ಪೋರ್ಟಲ್‌ನಲ್ಲಿ ಮೇ 1 ರಿಂದ, ಕೋವಿಡ್ -19 ಲಸಿಕೆಗಳ (Vaccination in India) ವಿವಿಧ ಪ್ರಕಾರಗಳು ಮತ್ತು ಅವುಗಳ ಬೆಲೆಗಳು ಸಹ ನಾಗರಿಕರಿಗೆ ಲಭ್ಯವಿರುತ್ತವೆ, ಇದರಿಂದಾಗಿ ಅವರು ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ನೋಂದಣಿ ಸಮಯದಲ್ಲಿ ತಮ್ಮ ಆದ್ಯತೆಯ ಲಸಿಕೆಯನ್ನು ಆಯ್ಕೆ ಮಾಡಬಹುದು. 18 ರಿಂದ 44 ವರ್ಷ ವಯಸ್ಸಿನವರು ಏಪ್ರಿಲ್ 28 ರಿಂದ ಕೋವಿನ್ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಈ ವಯಸ್ಸಿನ ಜನರು ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಬಯಸಿದರೆ, ಅವರು ಬೆಲೆ ಪಾವತಿಸಬೇಕಾಗಲಿದೆ. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.


COMMERCIAL BREAK
SCROLL TO CONTINUE READING

ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿರುವ ಕೋವಿಶೀಲ್ಡ (Covishield) ವ್ಯಾಕ್ಸಿನ್ ನ ಪ್ರತಿ ಡೋಸ್ ರಾಜ್ಯಗಳಿಗೆ 400 ರೂ.ಗಳಿಗೆ ನೀಡಲಾಗುತ್ತಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ 600 ರೂ.ಗಳಿಗೆ ಲಭ್ಯವಾಗಲಿದೆ. ಇನ್ನೊಂದೆಡೆ ಭಾರತ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ (Covaxin) ಲಸಿಕೆಯ ಪ್ರತಿ ಡೋಸ್ ರಾಜ್ಯಗಳಿಗೆ ರೂ.600ಕ್ಕೆ ನೀಡಲಾಗುತ್ತಿದ್ದರೆ, ಖಾಸಗಿ ಆಸ್ಪತ್ರೆಗಳಿಗೆ ರೂ.1200ಕ್ಕೆ ನೀಡಲಾಗುತ್ತಿದೆ.


ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಪತ್ರ ಬರೆದ ರಾಜೇಶ್ ಭೂಷಣ್
ಈ ಕುರಿತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವ ರಾಜೇಶ್ ಭೂಷಣ್, ಪ್ರತಿ ಖಾಸಗಿ ವ್ಯಾಕ್ಸಿನೆಶನ್ ಕೇಂದ್ರ ಮೇ 1 ರಿಂದ ಪ್ರಾರಂಭವಾಗುವ ಲಸಿಕೆ ಅಭಿಯಾನದ ದೃಷ್ಟಿಯಿಂದ ಲಸಿಕೆಗಳ ಪ್ರಕಾರ, ಅವುಗಳ ಬೆಲೆಗಳು ಮತ್ತು ಕೋವಿನ್ ಪೋರ್ಟಲ್‌ನಲ್ಲಿ ಲಭ್ಯವಿರುವ ಲಸಿಕೆಗಳ ಸಂಖ್ಯೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.


ಇದನ್ನೂ ಓದಿ- Covid-19 : ಕೊರೋನಾ ಪ್ರಕರಣದಲ್ಲಿ 'ವಿಶ್ವ ದಾಖಲೆ' ಬರೆದ ಭಾರತ..!


ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂದು ಕೊವಿನ್ ಪೋರ್ಟಲ್ ನಲ್ಲಿ ಬದಲಾವಣೆಗಳನ್ನೂ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಲಸಿಕೆಗಳ ಪ್ರಕಾರಗಳು ಹಾಗೂ ಅವುಗಳ ಮೌಲ್ಯಗಳ ಮಾಹಿತಿ ಕೊವಿನ್ ಪೋರ್ಟಲ್ ನಲ್ಲಿ ಲಭ್ಯವಿರಲಿದ್ದು, ನಾಗರಿಕರು ತಮ್ಮ ಹೆಸರು ನೊಂದಣಿಯ ವೇಳೆ ತಮ್ಮ ಲಸಿಕೆಯ ಆದ್ಯತೆಯನ್ನು ಕೂಡ ಆಯ್ಕೆ ಮಾಡಬಹುದು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ವ್ಯಾಕ್ಸಿನ್ ಗಾಗಿ ಕೊವಿನ್ ಪೋರ್ಟಲಿನಲ್ಲಿ ಹೆಸರು ನೊಂದಾಯಿಸುವುದು ಹೇಗೆ..?


ಖಾಸಗಿ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಇಚ್ಚಿಸುವವರು ವ್ಯಾಕ್ಸಿನೆಶನ್ ಗಾಗಿ ಕೇವಲ ಆನ್ಲೈನ್ ಮಾಧ್ಯಮಗಳಾಗಿರುವ ಕೊವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಆಪ್ ಮೂಲಕ ಮಾತ್ರ ಹೆಸರು ನೋಂದಾಯಿಸಬಹುದಾಗಿದೆ. ವಿಶ್ವದ ಅತಿ ದೊಡ್ಡ Covid-19 ಲಸಿಕಾಕರಣ ಅಭಿಯಾನದ ಅಡಿ ಭಾರತದಲ್ಲಿ ಭಾನುವಾರದವರೆಗೆ  ಸುಮಾರು 14 ಕೋಟಿಗೂ ಅಧಿಕ ಲಸಿಕೆಯ ಪ್ರಮಾಣಗಳನ್ನು ನೀಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-ಪ್ರಯಾಣಿಕರಿಗೆ ತೊಂದರೆಯಾಗದಂತೆ ರೈಲ್ವೆ ಭರ್ಜರಿ ತಯಾರಿ : 2 ತಿಂಗಳವರೆಗಿನ ಪ್ಲಾನ್ ರೆಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.