ನವದೆಹಲಿ/ಬೆಂಗಳೂರು: ಇಂದು ಎಲ್ಲೆಡೆ ವೈಕುಂಠ ಏಕಾದಶಿ (Vaikuntha Ekadashi) ಸಂಭ್ರಮ. ವಯಾಲಿಕಾವಲ್ ನ ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ (Tirupati Timmappa Temple) ವಿಶೇಷ ಪೂಜೆ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಮಧ್ಯರಾತ್ರಿ 1:30 ಕ್ಕೆ ದೇಗುಲದ ಬಾಗಿಲನ್ನು ತೆರೆಯಲಾಗಿದೆ. ಸುಪ್ರಭಾತ, ತೋಮಾಲ ಸೇವಾ, 3 ಗಂಟೆಗೆ ಮೊದಲ ನೈವೇದ್ಯ ನೆರವೇರಿತು. 4 ಗಂಟೆಗೆ ಅಸ್ತನಾಮ್ ಪೂಜೆ, ವೈಕುಂಠ ದ್ವಾರ ಪೂಜೆ ನಡೆಯಿತು. ಬಳಿಕ 5 ಗಂಟೆಗೆ ವೈಕುಂಠ ದ್ವಾರವನ್ನು (Vaikuntha Dwara) ತೆರೆಯಲಾಯಿತು.


ಸ್ವಾಮಿ ದರ್ಶನ ಪಡೆಯಲು ದೇವಸ್ಥಾನಕ್ಕೆ ಭಕ್ತರ ದಂಡು ಆಗಮಿಸುತ್ತಿದೆ. ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದೆ.  


ಇದನ್ನೂ ಓದಿ: Horoscope: ದಿನಭವಿಷ್ಯ 13-01-2022 Today Astrology


ವಯಾಲಿಕಾವಲ್ ನ ವೆಂಕಟೇಶ್ವರ ದೇವಾಲಯದಲ್ಲಿ (Venkateshwara Temple) ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು, ಕೋವಿಡ್ ನಿಯಮದ ಪ್ರಕಾರ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಒಂದು ಸಾರಿ 50 ಜನರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ಅನುಮತಿಸಲಾಗಿದೆ. 


ರಾಜ್ಯದಲ್ಲೂ ವೈಕುಂಠ ಏಕಾದಶಿ ಸಂಭ್ರಮ:  


ಬೆಂಗಳೂರು ನಗರದಲ್ಲಿ ಶ್ರೀನಿವಾಸ ದೇವಸ್ಥಾನಗಳು ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಬೆಂಗಳೂರಿನ ಇಸ್ಕಾನ್ (Iscon), ಮಲ್ಲೇಶ್ವರಂನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿದೆ. 


ಇಸ್ಕಾನ್ ದೇವಾಲಯದಲ್ಲಿ ಬೆಳಗ್ಗೆ 5.45 ರಿಂದ 6.30 ರ ಅವಧಿಯಲ್ಲಿ ವೈಕುಂಠ ದ್ವಾರ ತೆರೆಯಲಾಯಿತು. ಕೋವಿಡ್ (Covid-19) ಮುನ್ನೆಚ್ಚರಿಕಾ ಕ್ರಮವಾಗಿ ದೇವಾಲಯಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.


ಆನ್ ಲೈನ್ ಮೂಲಕ ವೈಕುಂಠ ಏಕಾದಶಿ (Iscon Live) ವೀಕ್ಷಿಸಲು ಅವಕಾಶ ಒದಗಿಸಲಾಗಿದೆ. ಭಕ್ತರು http://www.iskconbangalore.org ಲಿಂಕ್ ನಲ್ಲಿ ಪೂಜೆಯ ನೇರಪ್ರಸಾರ ವೀಕ್ಷಿಸಬಹುದು. 


ಇದನ್ನೂ ಓದಿPutrada Ekadashi: ಇಂದು ಈ ಕೆಲಸ ಮಾಡುವುದರಿಂದ ಮಕ್ಕಳಿಗೆ ಸಂಬಂಧಿಸಿದ ನಿಮ್ಮ ಪ್ರತಿ ಆಸೆಯೂ ಈಡೇರುತ್ತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.