ಮಾತಾ ವೈಷ್ಣೋದೇವಿ ದೇವಸ್ಥಾನದ ಆಡಳಿತ ಮಂಡಳಿ ತನ್ನ ಭಕ್ತರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಹೌದು, ಇಂದಿನಿಂದ ವೈಷ್ಣೋದೇವಿ ಭಕ್ತಾದಿಗಳು ಪ್ರತಿ ದಿನ ಸಾಯಂಕಾಲ ಬೆಳ್ಳಿ ಪರದೆಯ ಮೇಲೆ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ನಡೆಯುವ ಆರತಿಯನ್ನು ವೀಕ್ಷೀಸಬಹುದಾಗಿದೆ. ಕಟರಾನಲ್ಲಿರುವ ಆಧ್ಯಾತ್ಮಿಕ ಕೇಂದ್ರದಲ್ಲಿ ಭಕ್ತರು ಈ ಸೌಲಭ್ಯ ಪಡೆಯಬಹುದಾಗಿದೆ. ಆದರೆ, ಇಂದಿನಿಂದ ಮುಂದಿನ ಒಂದು ವಾರ ಈ ಸೌಲಭ್ಯ ಉಚಿತವಾಗಿರಲಿದೆ. ಬಳಿಕ ಈ ಆರತಿಯನ್ನು ವೀಕ್ಷಿಸಲು ಭಕ್ತಾದಿಗಳು ರೂ.30 ಶುಲ್ಕ ನೀಡಬೇಕು.


COMMERCIAL BREAK
SCROLL TO CONTINUE READING

ಲೈವ್ ಆರತಿ ವೀಕ್ಷಿಸಬಹುದು
ಈ ಲೈವ್ ಆರತಿಗಾಗಿ ದೇವಸ್ಥಾನದ ಆಡಳಿತ ಮಂಡಳಿ ಮೊದಲು ಟ್ರಯಲ್ ಕೂಡ ನಡೆಸಿದೆ. ಕಳೆದ ಸೋಮವಾರ ಈ ಪರೀಕ್ಷೆ ಸಫಲವಾಗಿದೆ. ದೇವಸ್ಥಾನದ ಆಡಿಟೋರಿಯಂನಲ್ಲಿ ನಡೆಸಲಾದ ಈ ಪ್ರಯೋಗದಲ್ಲಿ ಶ್ರೈನ್ ಬೋರ್ಡ್ ನ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ಹಲವು ವರಿಷ್ಠ ಅಧಿಕಾರಿಗಳು ಭಾಗವಹಿಸಿದ್ದರು. ಹೀಗಾಗಿ ಇನ್ಮುಂದೆ ದೊಡ್ಡ ಪರದೆಯ ಮೇಲೆ ಭಕ್ತಾದಿಗಳು ಲೈವ್ ಆರತಿಯನ್ನು ವೀಕ್ಷಿಸಬಹುದಾಗಿದೆ.


ಈ ಸೇವೆ ಒಂದು ವಾರ ಉಚಿತವಾಗಿರಲಿದೆ
ಈ ಕುರಿತು ಹೇಳಿಕೆ ನೀಡಿರುವ ಶ್ರೈನ್ ಬೋರ್ಡ್ ನ ಸಿಇಓ ರಮೇಶ್ ಕುಮಾರ್, ಈ ಕುರಿತಾದ ಪ್ರಯೋಗ ಇದೀಗ ಯಶಸ್ವಿಯಾಗಿದ್ದು, ಶ್ರೈನ್ ಬೋರ್ಡ್ ಭಕ್ತಾದಿಗಳಿಗೆ ಕೊಡುಗೆಯ ರೂಪದಲ್ಲಿ ಮೊದಲ ಒಂದು ವಾರ ಈ ಸೇವೆಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದಿದ್ದಾರೆ. ಹೀಗಾಗಿ ಭಕ್ತಾದಿಗಳು ಮುಂದಿನ ಒಂದು ವಾರದ ಕಾಲ ಮಾತಾ ವೈಷ್ಣೋದೇವಿ ಮಂದಿರದಲ್ಲಿ ನಡೆಯಲಿರುವ ಸಂಜೆಯ ದಿವ್ಯ ಆರತಿಯನ್ನು ಲೈವ್ ಆಗಿ ವೀಕ್ಷಿಸಬಹುದು. ಆದರೆ, ಒಂದು ವಾರದ ಬಳಿಕ ಈ ಆರತಿಯನ್ನು ವಿಕ್ಷೀಸಲು ಭಕ್ತಾದಿಗಳು ರೂ.30 ಶುಲ್ಕ ಪಾವತಿಸಬೇಕು.


ದೊಡ್ಡ ಪರದೆಯ ಮೇಲೆ ಮಂಗಳಾರತಿಯ ನೇರ ಪ್ರಸಾರ
ಸೋಮವಾರದಿಂದ ಕಟರಾಗೆ ಭೇಟಿ ನೀಡುವ ಭಕ್ತಾದಿಗಳು ಅಲ್ಲಿನ ಆಧ್ಯಾತ್ಮಿಕ ಕೇಂದ್ರದ ಆಡಿಟೋರಿಯಂನಲ್ಲಿ ವೈಷ್ಣೋದೇವಿಯ ಲೈವ್ ಆರತಿಯನ್ನು ಒಂದು ವಾರಗಳ ಕಾಲ ಉಚಿತವಾಗಿ ವೀಕ್ಷಿಸಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದ್ದು, ಸಾಯಂಕಾಲ ನಡೆಸಲಾಗುವ ಆರತಿಯ ನೇರ ಪ್ರಸಾರ ಮಾಡಲಾಗುವುದು ಎಂದಿದೆ. ಈ ಕುರಿತಾಗಿ ನಡೆಸಲಾದ ಎಲ್ಲ ಪ್ರಯೋಗಗಳು ಇದೀಗ ಯಶಸ್ವಿಯಾಗಿದ್ದು, ಆರತಿಯನ್ನು ನೇರ ಪ್ರಸಾರ ನಡೆಸಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.


ಈ ಸಮಯಕ್ಕೆ ಆರತಿಯ ನೇರ ಪ್ರಸಾರ ಮಾಡಲಾಗುವುದು
ದೇವಸ್ಥಾನದಲ್ಲಿ ಮಂಗಳಾರತಿಯನ್ನು ವೀಕ್ಷಿಸಲು ಸ್ಥಳದ ಅಭಾವವಿರುವ ಕಾರಣ ದೇವಸ್ಥಾನದ ಆಡಳಿತ ಮಂಡಳಿ ಈ ಆರತಿಯ ನೇರ ಪ್ರಸಾರ ನಡೆಸಲು ನಿರ್ಣಯ ಕೈಗೊಂಡಿದೆ. ನಿತ್ಯ ಸಂಜೆ 6.15 ರಿಂದ 8.15ರವರೆಗೆ ಈ ಆರತಿಯ ನೇರ ಪ್ರಸಾರ ಮಾಡಲಾಗುತ್ತಿದೆ. ಈಗಾಗಲೇ ಭಕ್ತಾದಿಗಳು ದೇವಸ್ಥಾನದಲ್ಲಿ ನಡೆಸಲಾಗುವ ಬೆಳಗಿನ ಆರತಿಯನ್ನೂ ಸಹ ನೇರಪ್ರಸಾರ ಮಾಡಲು ಮನವಿ ಸಲ್ಲಿಸಿದ್ದು, ಬೆಳಗಿನ ಆರತಿಯನ್ನೂ ಸಹ ಆಡಳಿತ ಮಂಡಳಿ ನೇರ ಪ್ರಸಾರ ಮಾಡುವ ಸಾಧ್ಯತೆ ಇದೆ.


ಈ ದಾರಿಯಿಂದ ನೀವು ಪ್ರವೇಶಿಸಬಹುದು
ಮಾಹಿತಿ ಪ್ರಕಾರ ಮಾತಾ ವೈಷ್ಣೋದೇವಿ ದರ್ಶನಕ್ಕಾಗಿ ಸದ್ಯ ಬಳಸಲಾಗುವ ರಸ್ತೆಯಲ್ಲಿ ಬರುವ ಗುಹೆಯಲ್ಲಿ ನೈಸರ್ಗಿಕ ದಾರಿ ಇಲ್ಲ ಎನ್ನಲಾಗಿದೆ. ಭಕ್ತಾದಿಗಳ ದರ್ಶನಕ್ಕಾಗಿ 1977ರಲ್ಲಿ ಕೃತಕ ಮಾರ್ಗ ನಿರ್ಮಿಸಲಾಗಿದೆ. ಸದ್ಯ ಭಕ್ತಾದಿಗಳು ಇದೆ ಮಾರ್ಗವನ್ನು ಬಳಸಿ ದೇಗುಲಕ್ಕೆ ಪ್ರವೆಸಿಸುತ್ತಾರೆ.