Cow hug day : ಫೆಬ್ರವರಿ 14ರಂದು ವಿಶ್ವವೇ ಪ್ರೀತಿಯ ದಿನವನ್ನಾಗಿ ಆಚರಿಸುತ್ತದೆ. ಇದೀಗ ಕೇಂದ್ರ ಸರ್ಕಾರ ಲವ್‌ ಡೇ ದಿನವನ್ನು 'ಹಸು ಅಪ್ಪುಗೆಯ ದಿನ'ವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಭಾರತೀಯ ಸಂಸ್ಕೃತಿ ಮತ್ತು ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು ಗೋವು ಎಂದು ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ನಿರ್ದೇಶನ ನೀಡಿದೆ. ಗೋವು ತಾಯಿಯಂತೆ ಪ್ರಕೃತಿಯನ್ನು ರಕ್ಷಿಸುತ್ತದೆ ಹಾಗಾಗಿ ಗೋಪ್ರೇಮಿಗಳು ಫೆ.14ನ್ನು ‘ಗೋವು ಅಪ್ಪುಗೆ ದಿನ’ವನ್ನಾಗಿ ಆಚರಿಸಬೇಕು ಎಂದು ಪ್ರಾಣಿ ಸಂರಕ್ಷಣಾ ಮಂಡಳಿ ವಿಶೇಷ ಸುತ್ತೋಲೆ ಮೂಲಕ ತಿಳಿಸಿದೆ.


COMMERCIAL BREAK
SCROLL TO CONTINUE READING

ಪಾಶ್ಚಿಮಾತ್ಯ ಸಂಸ್ಕೃತಿಯ ಅತಿಕ್ರಮಣವಾಗುತ್ತಿದೆ ಎಂದು ಸುತ್ತೋಲೆ ಆರೋಪಿಸಲಾಗಿದೆ. ಅಲ್ಲದೆ, ಪ್ರೇಮಿಗಳ ದಿನಗಳಂತ ವೆಸ್ಟರ್ನ್‌ ಕಲ್ಚರ್‌ ವೈದಿಕ ಕಾಲದ ಸಂಪ್ರದಾಯಗಳನ್ನು ಅಳಿಸಿಹಾಕುತ್ತಿವೆ. ಅದಕ್ಕಾಗಿ ಹಸುವನ್ನು ಅಪ್ಪಿಕೊಳ್ಳುವುದರಿಂದ ಮಾನಸಿಕ ಏಳಿಗೆ ಹೊಂದಬಹುದು. ಆದ್ದರಿಂದ ಗೋವಿನ ಮಹತ್ವ ಅರಿತು ಫೆ.14ನ್ನು ‘ಕೌವ್‌ ಹಗ್ ಡೇ’ ಎಂದು ಆಚರಿಸಬೇಕು ಅಂತ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಕುರಿತು ಕಳೆದ ಫೆ.6ರಂದು ಮಂಡಳಿ ಸುತ್ತೋಲೆ ಹೊರಡಿಸಿತ್ತು. ಸುತ್ತೋಲೆಗೆ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವಾಲಯ ಅನುಮೋದನೆ ನೀಡಿದೆ.


Transgender pregnant : ಯಶಸ್ವಿಯಾಗಿ ʼಗಂಡು ಮಗುʼವಿಗೆ ಜನ್ಮ ನೀಡಿದ ʼಯುವಕʼ..! 


ಈ ಮಧ್ಯ ಅನೇಕ ಬಲಪಂಥೀಯ ಸಂಘಟನೆಗಳು ಸುತ್ತೋಲೆಯನ್ನು ಬೆಂಬಲಿಸಲು ಮುಂದೆ ಬಂದಿವೆ. ವ್ಯಾಲೆಂಟೈನ್ಸ್ ಡೇ ಭಾರತೀಯ ಸಂಸ್ಕೃತಿಯ ಭಾಗವಲ್ಲ ಎಂದು ಈಗಾಗಲೇ ಬಲಪಂಥೀಯ ಸಂಘಟನೆಗಳು ಪ್ರತಿಕ್ರಿಯಿಸಿವೆ. ಮತ್ತು ಅವರು ಪ್ರೇಮಿಗಳ ದಿನವನ್ನು ಉದ್ಯಾನವನಗಳು ಮತ್ತು ಕಡಲತೀರಗಳಲ್ಲಿ ಕಳೆಯುವ ಪ್ರೇಮಿಗಳ ಮೇಲೆ ದಾಳಿ ನಡೆಸುತ್ತಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.