ಗಾಂಧಿನಗರ-ಮುಂಬೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ಶುಕ್ರವಾರ ಹಸುವಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆ ನಡೆದ ಒಂದು ದಿನದ ಬಳಿಕ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದು, ರೈಲಿನ ಮುಂಭಾಗದ ಬಂಪರ್‌ ಡ್ಯಾಮೇಜ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರೋಟೀನ್ ಕೊರತೆಯಿಂದ ದೇಹದಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ: ಮರೆತು ಸಹ ನಿರ್ಲಕ್ಷಿಸಬೇಡಿ


ಗುರುವಾರದ ಘಟನೆಯಲ್ಲಿ, ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ರೈಲು ನಾಲ್ಕು ಎಮ್ಮೆಗಳಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಅದರ ಕೋನ್ ಕಳಚಿ ಬಿದ್ದಿದೆ. ಫೈಬರ್-ಬಲವರ್ಧಿತ ಪ್ಲಾಸ್ಟಿಕ್‌ನಿಂದ ಮಾಡಿದ ಬಂಪರ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪ್ರಾಣಿಗಳು ಸಾವನ್ನಪ್ಪಿವೆ.  


ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜಾನುವಾರುಗಳ ಮೇಲಾಗುವ ಇಂತಹ ಘರ್ಷಣೆಯನ್ನು ತಪ್ಪಿಸಲಾಗುವುದಿಲ್ಲ. "ರೈಲು ವಿನ್ಯಾಸ ಮಾಡುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗಿದೆ" ಎಂದು ಹೇಳಿದ್ದಾರೆ. "ಮುಂಭಾಗದಲ್ಲಿರುವ ಅದರ ಭಾಗವನ್ನು ಸಂಪೂರ್ಣವಾಗಿ ಬದಲಾಯಿಸಬಹುದಾಗಿದೆ" ಎಂದು ಸಚಿವರು ಇಂದು ಮುಂಜಾನೆ ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ರೈಲಿಗೆ ಚಾಲನೆ ನೀಡಿದ್ದರು ಮತ್ತು ಗಾಂಧಿನಗರದಿಂದ ಅಹಮದಾಬಾದ್‌ನ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣಿಸಿದ್ದರು. ಗಾಂಧಿನಗರದಿಂದ ಸುಮಾರು 100 ಕಿಲೋಮೀಟರ್ ಮತ್ತು ಮುಂಬೈನಿಂದ 400 ಕಿಮೀ ದೂರದಲ್ಲಿರುವ ಆನಂದ್ ಪಟ್ಟಣದ ಬಳಿ ಸಂಜೆ 4 ಗಂಟೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.   


ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಬಗ್ಗೆ ಹೊಸ ನಿಯಮ ಜಾರಿ, ಇವರಿಗೆ ಮಾತ್ರ ಸಿಗಲಿದೆ ಸಬ್ಸಿಡಿ ಹಣ!


ರೈಲು ಗಂಟೆಗೆ 160 ಕಿಮೀ ತಲುಪುತ್ತದೆ ಮತ್ತು ಇತರ ರೈಲುಗಳಿಗಿಂತ ಉತ್ತಮ ಸವಾರಿ ಸೌಕರ್ಯವನ್ನು ಹೊಂದಿದೆ ಎಂದು ರೈಲ್ವೆ ಹೇಳಿದೆ. ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈನಿಂದ ಗಾಂಧಿನಗರಕ್ಕೆ ಅಹಮದಾಬಾದ್‌ನ ಬಟ್ವಾ ಮತ್ತು ಮಣಿನಗರದ ನಡುವೆ ಹಿಂತಿರುಗುತ್ತಿದ್ದಾಗ ಎಮ್ಮೆಗಳಿಗೆ ಡಿಕ್ಕಿ ಹೊಡೆದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.