ಲಕ್ನೌ: ಗೋವಾದಿಂದ ಪಾಟ್ನಾಕ್ಕೆ ಹೋಗುತ್ತಿದ್ದ 12741 ವಾಸ್ಕೋ ಡಾ ಗಾಮಾ ಎಕ್ಸ್ಪ್ರೆಸ್, ಬೆಳಗ್ಗೆ 4:30 ಕ್ಕೆ ಹಳಿತಪ್ಪಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿರುವುದಲ್ಲದೆ, ಏಳಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.



COMMERCIAL BREAK
SCROLL TO CONTINUE READING

 


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರಕೂಟ ಪೊಲೀಸ್ ಅಧೀಕ್ಷಕ ಪ್ರತಾಪ್ ಗೋಪೇಂದ್ರ ಸಿಂಗ್ ರೈಲು ಮಣಿಕ್ಪುರ್ ಜಂಕ್ಷನ್ನ ಪ್ಲಾಟ್ಫಾರ್ಮ್ ಸಂಖ್ಯೆ 2 ರ ಮೂಲಕ ಹಾದುಹೋಗಿತ್ತು, ಮಣಿಕ್ಪುರ್ ಜಂಕ್ಷನ್ ನಿಂದ ರೈಲು ಸ್ವಲ್ಪ ದೂರದಲ್ಲಿ ಸಾಗಿದ ನಂತರ ಅದರ 13 ಕೋಚ್ಗಳು ಹಳಿತಪ್ಪಿವೆ ಎಂದು ತಿಳಿಸಿದ್ದಾರೆ. 


ಇದಕ್ಕೂ ಮೊದಲು ಪ್ರತಿಕ್ರಿಯಿಸಿದ, ಉತ್ತರ ಸೆಂಟ್ರಲ್ ರೈಲ್ವೆ ಪಬ್ಲಿಕ್ ರಿಲೇಶನ್ಸ್ ಆಫೀಸರ್ ಅಮಿತ್ ಮಲ್ವಿಯ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯವು ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಅಧಿಕಾರಿಗಳು ಸ್ಥಳದಲ್ಲೇ ಬಿಡು ಬಿಟ್ಟಿದ್ದಾರೆ.