ಲಕ್ನೋ: ಇನ್ನು ಮುಂದೆ ಶೀಘ್ರದಲ್ಲೇ, ಭಾರತದ ಎಲ್ಲಾ ರೈಲುಗಳಿಗೆ ಸಿಸಿಟಿವಿ ಕ್ಯಾಮೆರಾಗಳು ಮತ್ತು ವೈಫೈ ಸಂಪರ್ಕ ಹೊಂದಲಿವೆ ಎಂದು ರೈಲ್ವೆ ಸಚಿವ ಪಿಯುಶ್ ಗೋಯಲ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಲಕ್ನೋದಲ್ಲಿ  ಸಮಾರಂಭದಲ್ಲಿ ಈ ಕುರಿತು ಪ್ರಸ್ತಾಪಿಸಿದ  ಸಚಿವ ಗೋಯಲ್ "ನಮ್ಮ ಸರ್ಕಾರವು ದೇಶದ ಎಲ್ಲ ರೈಲ್ವೆ ನಿಲ್ದಾಣಗಳು ಸ್ವಚ್ಛ, ಸುರಕ್ಷಿತ ಮತ್ತು ಎಲ್ಲಾ ಸೌಲಭ್ಯಗಳನ್ನು ಹೊಂದಿದೆಯೆ ಎಂದು ದೃಢಪಡಿಸಿಕೊಳ್ಳಲು ನಿರ್ಧರಿಸಿದೆ. ಈಗ ಎಲ್ಲಾ ರೈಲುಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಮತ್ತು ವೈಫೈ ಸೌಲಭ್ಯವನ್ನು ಒದಗಿಸುವತ್ತ ಸರ್ಕಾರ ಗಮನ ಹರಿಸಿದೆ  ಎಂದು ಗೋಯಲ್ ಹೇಳಿದರು.


ತೇಜಸ್ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಟಿವಿಯ ಎಲ್ಸಿಡಿ ಪರದೆಗಳನ್ನು ತೆಗೆದುಹಾಕುವ ನಿರ್ಧಾರವನ್ನು ಭಾರತೀಯ ರೈಲ್ವೆ  ಪ್ರಕಟಿಸಿದ ನಂತರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.