ಹಾಡು ಹಾಡುತ್ತಾ ವೇದಿಕೆ ಮೇಲೆ ಕುಸಿದು ಬಿದ್ದು ಗಾಯಕ ನಿಧನ
Singer Edava Basheer: ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಹಾಡು ಹಾಡುತ್ತಲೇ ಹಿರಿಯ ಗಾಯಕರೊಬ್ಬರು ನಿಧನರಾಗಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಅಲಪ್ಪುಳ (ಕೇರಳ): ಹುಟ್ಟಿದ ಪ್ರತಿಯೊಂದು ಜೀವಿಯೂ ಸಾಯಲೇ ಬೇಕು. ಆದರೆ ಸಾವು ಎಂಬುದು ಯಾವಾಗ ಎಲ್ಲಿ ಹೇಗೆ ಬರುತ್ತದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಿದೆ. ಈಗಿರುವ ಪ್ರಾಣ ಮರುಕ್ಷಣಕ್ಕೆ ಇರುವುದಿಲ್ಲ ಎಂಬ ಮಾತಿಗೆ ತಕ್ಕಂತಿದೆ ಈ ವಿಡಿಯೋ. ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಹಾಡು ಹಾಡುತ್ತಲೇ ಹಿರಿಯ ಗಾಯಕರೊಬ್ಬರು ನಿಧನರಾಗಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ:Elon Musk : ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ : ಎಲೋನ್ ಮಸ್ಕ್ ಮಹತ್ವದ ಟ್ವೀಟ್
ಶನಿವಾರ ರಾತ್ರಿ ಕೇರಳದ ಅಲಪ್ಪುಳದಲ್ಲಿ ನಡೆದ 'ಬ್ಲೂ ಡೈಮಂಡ್ ಆರ್ಕೆಸ್ಟ್ರಾ'ದ ಸುವರ್ಣ ಮಹೋತ್ಸವದಲ್ಲಿ ವೇದಿಕೆಯ ಮೇಲೆ ಹಾಡು ಹಾಡುತ್ತಿದ್ದಾಗಲೇ ಹಿರಿಯ ಹಿನ್ನೆಲೆ ಗಾಯಕ ಎಡವ ಬಶೀರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕುಸಿದುಬಿದ್ದಿದ್ದಾರೆ.
Monkeypox outbreak: ಮಕ್ಕಳಿಗೆ ಅಪಾಯ ಹೆಚ್ಚು, ಈ 5 ರೋಗಲಕ್ಷಣಗಳನ್ನು ನಿರ್ಲಕ್ಷಿಸದಿರಿ- ICMR
ಯೇಸುದಾಸ್ ಮತ್ತು ಮುಹಮ್ಮದ್ ರಫಿ ಅವರ ಹಾಡುಗಳನ್ನು ಹೇಳುತ್ತಲೇ ಗಾಯಕ ಎಡವ ಬಶೀರ್ ಜನರ ಮನ ಗೆದ್ದಿದ್ದರು. ಅವರು ವೇದಿಕೆಯ ಮೇಲೆ ಹಾಡು ಹೇಳುತ್ತಿರುವಾಗಲೇ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.