Vice Presidential Election 2022: ರಾಷ್ಟ್ರಪತಿ ಚುನಾವಣೆ ಜೊತೆಗೆ ಉಪರಾಷ್ಟ್ರಪತಿ ಚುನಾವಣೆ ರಾಜಕೀಯ ವಲಯದಲ್ಲಿ ಭಾರಿ ಹಲ್ ಚಲ್ ಸೃಷ್ಟಿಸಿದೆ. ಏತನ್ಮಧ್ಯೆ ಜಗದೀಪ್ ಧನ್ಕಡ್ ಹೆಸರನ್ನು ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿರುವ ಬಿಜೆಪಿಯ ನಡೆ ಭಾರಿ ಅಚ್ಚರಿ ಮೂಡಿಸಿದೆ. ಜಗದೀಪ್ ಧನ್ಕಡ್  ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಬಿಜೆಪಿ ಸಂಸದೀಯ ಮಂಡಳಿ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಅವರ ಹೆಸರನ್ನು  ಅಂತಿಮಗೊಳಿಸಿದೆ. ಬಿಜೆಪಿ ಸಂಸದೀಯ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್ ಸೇರಿದಂತೆ ಇತರರು ಶಾಮೀಲಾಗಿದ್ದರು. ಬಿಜೆಪಿ ಸಂಸದೀಯ ಪಕ್ಷದ ಸಭೆ ಶನಿವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಮುಕ್ತಾಯಗೊಂಡಿದೆ.


COMMERCIAL BREAK
SCROLL TO CONTINUE READING

ಜಗದೀಪ್ ಧನ್ಕಡ್ ಯಾರು?
ಕಳೆದ ಮೂರು ದಶಕಗಳಿಗಿಂತಲೂ ಅಧಿಕ ಕಾಲದಿಂದ ಜಗದೀಪ್ ಧನ್ಕಡ್ ಸಾರ್ವಜನಿಕ ಜೀವನದಲ್ಲಿದ್ದಾರೆ. 1989ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜುಂಜುನು ಕ್ಷೇತ್ರದ ಸಂಸದರಾಗಿ ಆಯ್ಕೆಗೊಂಡು ತಮ್ಮ ಸಾರ್ವಜನಿಕ ಜೀವನವನ್ನು ಅವರು ಆರಂಭಿಸಿದ್ದಾರೆ. ಇದಾದ ಬಳಿಕ 1990ರಲ್ಲಿ ಅವರು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. 1993 ರಲ್ಲಿ ಜಗದೀಪ್ ಧನ್ಕಡ್ ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿರುವ ಕಿಶನ್ಗಡ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಗೊಂಡಿದ್ದರು. ಬಳಿಕ ಜುಲೈ 2019ರಲ್ಲಿ ಅವರು ಪಶ್ಚಿಮ ಬಂಗಾಳದ ಗವರ್ನರ್ ಆಗಿ ನೇಮಕಗೊಂಡಿದ್ದಾರೆ. ಅಲ್ಲಿ ಅವರು ತಮ್ಮ ಕಠಿಣ ಪರಿಶ್ರಮದಿಂದ ಸಾರ್ವಜನಿಕ ಕಲ್ಯಾಣದ ಮೇಲೆ ಬೆಳಕು ಚೆಲ್ಲಿ 'ಪೀಪಲ್ಸ್ ಗವರ್ನರ್' ಎಂಬ ತನ್ನದೇ ಆದ ಛಾಪು ಮೂಡಿಸಿದ್ದಾರೆ. 


ಇದನ್ನೂ ಓದಿ-Edible Oil Price Update: ಅಡುಗೆ ಎಣ್ಣೆ ಬೆಲೆಯಲ್ಲಿ ಶೀಘ್ರದಲ್ಲಿಯೇ ರೂ.30 ಇಳಿಕೆ, ಜುಲೈ ಮೂರನೇ ವಾರದಲ್ಲಿಯೂ MRP ತಗ್ಗಿಸಿದ ಕಂಪನಿಗಳು


ಆಗಸ್ಟ್ 6 ರಂದು ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ
ಜುಲೈ 19 ಉಪರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವಾಗಿದ್ದು, ಆಗಸ್ಟ್ 6 ರಂದು ಈ ಚುನಾವಣೆ ನಡೆಯಲಿದೆ. ಈ ಮೊದಲು ಕೂಡ ರಾಮನಾಥ್ ಕೊವಿಂದ್ ಹಾಗೂ ಎಂ.ವೆಂಕಯ್ಯ ನಾಯ್ಡು ಅವರು ದೇಶದ ಅತ್ಯುನ್ನತ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ದಾಖಲಿಸಿದ್ದಾರೆ. ನಾಯ್ಡು ಅವರ ಕಾರ್ಯಕಾಲ ಆಗಸ್ಟ್ 10ರಂದು ಕೊನೆಗೊಳ್ಳಲಿದೆ. ಪ್ರಸ್ತುತ ದ್ರೌಪದಿ ಮುರ್ಮು ಎನ್.ಡಿ.ಎ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದರೆ, ಯಶವಂತ್ ಸಿನ್ಹಾ ಪ್ರತಿಪಕ್ಷಗಳ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆ ಜುಲೈ 18 ರಂದು ನಡೆಯಲಿದ್ದು, ಅವಶ್ಯಕತೆ ಬಿದ್ದಲ್ಲಿ ಜುಲೈ 21ಕ್ಕೆ ಮತ ಎಣಿಕೆಯ ಪ್ರಕ್ರಿಯೆ ನಡೆಯಲಿದೆ,
 


ಇದನ್ನೂ ಓದಿ-Traffic Rules Updates: ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟಿ ಚಲಾಯಿಸುವವರೇ ಹುಷಾರ್...! ಕಾರಣ ಇಲ್ಲಿದೆ


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ